‘ಪಂಚ’ ಫಲಿತಾಂಶ ಲೋಕ ಕದನಕ್ಕೆ ದಿಕ್ಸೂಚಿನಾ..? ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ !

ಪಂಚರಾಜ್ಯ ಫೈಟ್ನ ಮತದಾನೋತ್ತರ ಸಮೀಕ್ಷೆ
2 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ
ಇನ್ನೆರಡು ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಅಧಿಕಾರ 

Share this Video
  • FB
  • Linkdin
  • Whatsapp

ಪಂಚರಾಜ್ಯ ಚುನಾವಣೆ ಮುಂದಿನ ಲೋಕಸಭೆ(Loksabha) ಚುನಾವಣೆಗೆ ದಿಕ್ಸೂಚಿ ಎಂದೆ ಬಿಂಬಿತವಾಗಿದೆ. ಹೀಗಿರುವಾಗಲೇ ಮತದಾನೋತ್ತರ ಸಮೀಕ್ಷೆಗಳ ಭವಿಷ್ಯ ಯಾರಿಗೂ ಬಲ ತಂದಿಕೊಟ್ಟಿಲ್ಲ. ಇದರಿಂದ ಬಹುತೇಕ ಸಮೀಕ್ಷೆಗಳು ಮುಂದಿನ ಲೋಕಸಭೆ ಚುನಾವಣೆಯ ಜಿದ್ದಾಜಿದ್ದಿನ ಹೋರಾಟದ ಭವಿಷ್ಯ ನುಡಿದಿವೆ. ಸಮೀಕ್ಷೆಗಳ ಪ್ರಕಾರ, 2 ರಾಜ್ಯಗಳಲ್ಲಿ ಬಿಜೆಪಿ(BJP) ಅಧಿಕಾರದ ಗದ್ದುಗೆ ಏರಿದ್ರೆ, ಇನ್ನೆರಡು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ(Congress) ಒಲಿಯಲಿದೆ ಎಂದು ಹೇಳಲಾಗ್ತಿದೆ. ಪಂಚರಾಜ್ಯ ಫೈಟ್‌ನ ಮತದಾನೋತ್ತರ ಸಮೀಕ್ಷೆ ಪ್ರಕಾರ, ತೆಲಂಗಾಣ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಗದ್ದು ಹಿಡಿಯಲಿದೆ. ಮಿಜೋರಾಮ್‌ನಲ್ಲಿ ಅತಂತ್ರ ವಿಧಾನಸಭೆಯ ಬರುವ ಸಾಧ್ಯತೆ ಇದೆಯಂತೆ. ಪಂಚರಾಜ್ಯ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗುತ್ತಾ..? ಲೋಕಸಭೆ ಫೈನಲ್ ಫೈಟ್ಗೆ ಇದು ಸೆಮಿಫೈನಲ್..? ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮುನ್ನುಡಿ ಬರೆಯುತ್ತಾ ಈ ಚುನಾವಣೆ..? ಎಂಬ ಹಲವಾರು ಪ್ರಶ್ನೆಗಳು ಕಾಡತೊಡಗಿವೆ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಪರ ಹೊರಬಿದ್ದ ಮತಗಟ್ಟೆ ಸಮೀಕ್ಷೆಗಳು..! ರಮಣ್ ಸಿಂಗ್ ನಾಯಕತ್ವ ಬಿಜೆಪಿಗೆ ಮುಳುವಾಯ್ತಾ?

Related Video