Asianet Suvarna News Asianet Suvarna News

ಫೇಸ್‌ಬುಕ್‌ನಿಂದ ಹಣ ಕಳೆದುಕೊಂಡ ಮಹಿಳೆ: ಬಂಗಾರದ ಆಸೆಗೆ 6.50 ಲಕ್ಷಕ್ಕೆ ಪಂಗನಾಮ !

ಫೇಸ್‌ಬುಕ್‌ ಸಹವಾಸದಿಂದ ಶಿವಮೊಗ್ಗದ ಮಹಿಳೆಯೊಬ್ಬರು, ಸುಮಾರು 6.50 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. 

ಶಿವಮೊಗ್ಗ: ಜಿಲ್ಲೆಯ ಮಹಿಳೆಯೊಬ್ಬರು ಫೇಸ್‌ಬುಕ್‌ನಿಂದ ಸುಮಾರು 6.50 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅವರಿಗೆ  ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ಆ ವ್ಯಕ್ತಿ ತಾನು ಇಂಗ್ಲೆಂಡ್‌ನಲ್ಲಿ ವೈದ್ಯನೆಂದು ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರ ನಡುವೆ ಚಾಟಿಂಗ್‌ ಆರಂಭವಾಗಿದೆ. ಈ ವೇಳೆ ಯುವಕ ಬಂಗಾರವನ್ನು ಕಳಿಸುವುದಾಗಿ ಹೇಳಿದ್ದಾನೆ. ಅಲ್ಲದೇ ಸ್ವಲ್ಪ ದಿನದ ಬಳಿಕ ಏರ್‌ಪೋರ್ಟ್‌ನಿಂದ ಕೋರಿಯರ್‌ ಬಂದಿದೆ ಎಂದು ಕಾಲ್‌ ಸಹ ಬಂದಿದೆ. ಇದನ್ನ ನಂಬಿದೆ ಮಹಿಳೆ ವ್ಯಕ್ತಿ ಕಳಿಸಿದ ಖಾತೆ ನಂಬರ್‌ಗೆ ಹಣವನ್ನು ಕಳಿಸಿದ್ದಾರೆ. ನಂತರ ಮಹಿಳೆಗೆ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ಈ ಘಟನೆ ಸಂಬಂಧ ಸಿಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ವೀಕ್ಷಿಸಿ: ಆಪರೇಷನ್‌ ಮಾಡಬೇಕಾದ ವೈದ್ಯ ಫುಲ್‌ ಟೈಟ್‌: ಅಮಾನತಿಗೆ ಆದೇಶಿಸಿದ ಆರೋಗ್ಯ ಸಚಿವರು