Asianet Suvarna News Asianet Suvarna News

ಆಪರೇಷನ್‌ ಮಾಡಬೇಕಾದ ವೈದ್ಯ ಫುಲ್‌ ಟೈಟ್‌: ಅಮಾನತಿಗೆ ಆದೇಶಿಸಿದ ಆರೋಗ್ಯ ಸಚಿವರು

ಆಪರೇಷನ್‌ ಥಿಯೇಟರ್‌ನಲ್ಲಿ ವೈದ್ಯನೊಬ್ಬ ಕುಡಿದು ಮಲಗಿದ್ದಾನೆ. ಈ ಘಟನೆ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಚಿಕ್ಕಮಗಳೂರು: ಆಪರೇಷನ್‌ ಥಿಯೇಟರ್‌ನಲ್ಲಿ ವೈದ್ಯನೊಬ್ಬ ಕುಡಿದು ಮಲಗಿದ ಘಟನೆ ಕಳಸದಲ್ಲಿ ನಡೆದಿದೆ. ವೈದ್ಯೋ ನಾರಾಯಣ ಎಂಬ ಮಾತಿಗೆ ಈ ಮೂಲಕ ವೈದ್ಯ ಮಸಿ ಬಳಿದಿದ್ದಾನೆ. ಸಂತಾನಹರಣ ಆಪರೇಷನ್‌ ಕ್ಯಾಂಪ್‌ನಲ್ಲಿ ವೈದ್ಯ ಈ ರೀತಿ ಮಾಡಿದ್ದಾನೆ. ಇದರಿಂದ ಕಳಸ ಸರ್ಕಾರಿ ಆಸ್ಪತ್ರೆಗೆ ಬಂದ ಮಹಿಳೆಯರು ಪರದಾಡುವಂತೆ ಆಯಿತು. ಅಲ್ಲದೇ ವೈದ್ಯನ ಈ ಕೃತ್ಯಕ್ಕೆ ಸಿಬ್ಬಂದಿ ಸಹ ಸಾಥ್‌ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ವೈದ್ಯನ ಅಮಾನತಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಡಿಹೆಚ್‌ಓಗೆ ಸಚಿವರು ಸೂಚನೆ ನೀಡಿದ್ದಾರೆ.  

ಇದನ್ನೂ ವೀಕ್ಷಿಸಿ: ಹಾಸನದಲ್ಲೂ ಶುರುವಾಯ್ತು ಗೃಹಜ್ಯೋತಿ ಗಲಾಟೆ: ಬಿಲ್‌ ಕಟ್ಟಲ್ಲ ಅಂತ ಚೆಸ್ಕಾಂ ಸಿಬ್ಬಂದಿ ಜೊತೆ ಗಲಾಟೆ