ಆರೋಪಿ ನಂ.1 ಪಟ್ಟ ಪವಿತ್ರಾ ಪಾಲಿಗೇ ಉಳಿದಿದ್ದೇಕೆ?: ದರ್ಶನ್‌ ಏಟಿಗೇ ಪ್ರಾಣ ಬಿಟ್ಟನಾ ರೇಣುಕಾಸ್ವಾಮಿ?

ರೇಣುಕಾಸ್ವಾಮಿ ಕೊಲೆ ಕೇಸ್‌ನ ಚಾರ್ಜ್ ಶೀಟ್ ಈಗ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಅಂದ್ರೆ, ಕೊಲೆಯಾದ 84 ದಿನದ ಬಳಿಕ ಹೈಪ್ರೋಫೈಲ್ ಕೇಸ್‌ನ ಚಾರ್ಜ್ ಶೀಟ್ ಹಸ್ತಾಂತರವಾಗಿದೆ. 

First Published Sep 5, 2024, 1:00 PM IST | Last Updated Sep 5, 2024, 1:00 PM IST

ಬೆಂಗಳೂರು(ಸೆ.05):  17 ಮಂದಿ ದಾಂಡಿಗರು ಒಬ್ಬ ಮಿಕನಿಗೆ ನರಕ ತೋರಿಸಿಬಿಟ್ಟಿದ್ರು.. ಅಲ್ಲೀ ತನಕ ಬರೀ ಲಾರಿ ಗಾಡಿಗಳನ್ನೇ ನೋಡಿದ್ದ ಪಟ್ಟಣಗೆರೆ ಶೆಡ್, ಅತಿಭೀಕರ ಕ್ರೌರ್ಯಕ್ಕೆ ಮೂಕಸಾಕ್ಷಿಯಾಗ್ಬೇಕಾಯ್ತು. ಅಲ್ಲಿ ನಡೆದ ಆ ವಿಕೃತ ಅಟ್ಟಹಾಸಕ್ಕೆ ರೇಣುಕಾಸ್ವಾಮಿ ಎಷ್ಟೆಲ್ಲಾ ನರಳಿರ್ಬೋದು ಅನ್ನೋದನ್ನ ಕಲ್ಪನೆ ಮಾಡ್ಕೊಂಡ್ರೆನೇ ಮೈ ನಡುಗುತ್ತೆ.. ಇಂಥಾ ಡಿ ಗ್ಯಾಂಗ್ ನಡೆಸಿದ ಕೃತ್ಯಕ್ಕೆ, ಆ ಒಬ್ಬಳು ಯಾರೋ, ಹೇಗೆ ಸಾಕ್ಷಿಯಾದಳು? ರೇಣುಕಾಸ್ವಾಮಿ ಮೇಲೆ ಮೃಗದಂತೆ ಎರಗಿದವರು ಮಾಡಿದ್ದೇನೇನು? ಚಾರ್ಜ್ ಶೀಟ್ ನಲ್ಲಿ ದಾಖಲಾಗಿರೋ ಸಂಗತಿಗಳೇನೇನು? ಅದೆಲ್ಲದರ ಡೀಟೇಲ್ಸ್ ನಿಮ್ಮ ಮುಂದಿಡೋ ಪ್ರಯತ್ನವೇ ಇವತ್ತಿನ ಸುವರ್ಣ ಫೋಕಸ್, ಶೆಡ್-ದರ್ಶನ

ಈ ಕ್ರೌರ್ಯದ ಕತೆ ಇಷ್ಟಕ್ಕೇ ಮುಗಿಯೋದಿಲ್ಲ.. ಪಟ್ಟಣಗೆರೆ ಶೆಡ್ನಲ್ಲಿ ಏನೇನೆಲ್ಲಾ ನಡೆದಿತ್ತು? ಅದೆಲ್ಲಾ ಹೇಗೆ ಬೆಳಕಿಗೆ ಬಂತು? ಅದರ ಬಗ್ಗೆಯೂ ಮಾಹಿತಿ ಕೊಡ್ತೀವಿ. ರೇಣುಕಾಸ್ವಾಮಿ ಕಗ್ಗೊಲೆಯಾಗಿ ಹತ್ತಿರತ್ತಿರ ಮೂರು ತಿಂಗಳೇ ಕಳೀತಾ ಬಂದಿದೆ.. ಇಲ್ಲಿವರೆಗೂ ಈ ಪ್ರಕರಣ ಬಗ್ಗೆ ಅದಾಗಲೇ ಸಾಕಷ್ಟು ಸುದ್ದಿಗಳೂ ಬಂದಿದಾವೆ.. ಆದ್ರೆ, ಆ ಕೊಲೆಯಾದ ದಿನ, ಪಟ್ಟಣಗೆರೆಯ ಆ ಶೆಡ್ನಲ್ಲಿ ಏನೇನೆಲ್ಲಾ ನಡೀತು? ನಾಲ್ಕು ಗೋಡೆಗಳ ಮಧ್ಯೆ ಅದೆಂಥಾ ಭೀಕರತೆ ಆವಿರ್ಭವಿಸಿತ್ತು?. 
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅತ್ಯಂತ ಭಯಾನಕ ಘಟನೆಗೆ ಸಾಕ್ಷಿಯಾಗಿದ್ದು, ಪಟ್ಟಣಗೆರೆ ಶೆಡ್.. ಅಲ್ಲಿ ಆತ ಅನುಭವಿಸಿದ ನರಕಯಾತನೆ, ಯಾವ ಸಿನಿಮಾದ ಕ್ರೈಮ್ ಸೀನೂ ಕೂಡ ಎಕ್ಸ್‌ಪ್ಲೇನ್‌ ಮಾಡೋಕ್ಕಾಗಲ್ಲ.. ಅಂದ ಹಾಗೆ, ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿಕ, ಮುಂದೇನಾಗಲಿದೆ? 

3991 ಪುಟಗಳ ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಗ್ಯಾಂಗ್ ನಡೆಸಿದ ಕರಾಳ ಕೃತ್ಯ ಬಯಲು!

ರೇಣುಕಾಸ್ವಾಮಿ ಕೊಲೆ ಕೇಸ್‌ನ ಚಾರ್ಜ್ ಶೀಟ್ ಈಗ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಅಂದ್ರೆ, ಕೊಲೆಯಾದ 84 ದಿನದ ಬಳಿಕ ಹೈಪ್ರೋಫೈಲ್ ಕೇಸ್‌ನ ಚಾರ್ಜ್ ಶೀಟ್ ಹಸ್ತಾಂತರವಾಗಿದೆ. ಅಂದ್ರೆ ಕೊಲೆಯಾದ ದಿನಕ್ಕೂ, ಚಾರ್ಜ್ ಶೀಟ್ ಸಲ್ಲಿಕೆಯಾದ ದಿನಕ್ಕೂ ನಡುವೆ, ಏನೇನೆಲ್ಲಾ ಆಗೋಯ್ತಲ್ವಾ.. ಆದ್ರೆ ಮುಂದೆ ಏನಾಗಲಿದೆ? ಚಾರ್ಜ್ ಶೀಟ್ ಪರಿಣಾಮ ಹೇಗಿರಲಿದೆ?. 

Video Top Stories