ಕಿಲ್ಲಿಂಗ್ ಸ್ಟಾರ್ ಸಿಗಲಿದೆ ಎ1 ಪಟ್ಟ: ಸಿದ್ಧವಾಗ್ತಾ ಇದೆ 4000 ಪುಟಗಳ ಚಾರ್ಜ್ ಶೀಟ್!

ದರ್ಶನ್ ಪಾಲಿಗೆ ಕರಾಳ ದಿನಗಳು ಕಟ್ಟಿಟ್ಟ ಬುತ್ತಿ ಅಂತ ಹೇಳ್ತಾ ಇರೋ, ಆ ರಹಸ್ಯಮಯ ಸಾಕ್ಷಿಯೇನು? ಅದೊಂದು ಸಾಕ್ಷಿ ಡೆವಿಲ್ ಸ್ಟಾರ್ ಬದುಕನ್ನ ಕಂಬಿಯ ಹಿಂದೆಯೇ ನಿಲ್ಲಿಸಿಬಿಡುತ್ತಾ? ದರ್ಶನ್ ಎ-ಒನ್ ಆದ ಬಳಿಕ, ಪವಿತ್ರಾ ಗೌಡ ಹಾಗೂ ಇನ್ನುಳಿದವರು ಬಚಾವ್ ಆಗ್ತಾರಾ?  ಈ ಬಗ್ಗೆ ಒಂದು ಡಿಟೇಲ್‌ ಸ್ಟೋರಿ ಇಲ್ಲಿದೆ.

First Published Aug 23, 2024, 4:38 PM IST | Last Updated Aug 23, 2024, 4:38 PM IST

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ತಗಲಾಕ್ಕೊಂಡಿರೋ ನಟ ದರ್ಶನ್‌ಗೆ, ಪ್ರಮೋಷನ್ ಸಿಕ್ತಾ ಇದೆ. ಇಷ್ಟೂ ದಿನ ಎ2 ಆರೋಪಿಯಾಗಿದ್ದಾತ, ಇನ್ಮುಂದೆ ಎ1 ಅನ್ನಿಸಿಕೊಳ್ಳೋ ಸಾಧ್ಯತೆ ಇದೆ.. ಘಟನೆ ನಡೆದ ದಿನ ಸೆರೆಹಿಡಿದ ಆ ಫೋಟೋಗಳೇ ದರ್ಶನ್ ಸಂಕಷ್ಟವನ್ನ ದುಪ್ಪಟ್ಟು ಮಾಡಿದವಂತೆ. ಪೊಲೀಸರನ್ನೇ ಕಂಪಿಸೋ ಹಾಗೆ ಮಾಡಿಬಿಟ್ಟಿದವಂತೆ ಆ ಫೋಟೋಗಳು.. ಅವುಗಳ ಆಧಾರದ ಮೇಲೆ ಹಾಗೂ ಈ ತನಕ ಬಂದಿರೋ ವರದಿಗಳ ಆಧಾರದ ಮೇಲೆ, ದರ್ಶನ್‌ನ ಎ ಒನ್ ಆರೋಪಿಯಾಗಿಸೋಕೆ ಎಲ್ಲವೂ ಸಿದ್ಧವಾಗಿದೆ.ಒಂದು ವೇಳೆ, ಆರೋಪಿ ಸ್ಥಾನದಲ್ಲಿ ಮೇಲೆ ಬಂದ್ರೆ.. ಡೆವಿಲ್ ಹೀರೋಗೆ ಏನೇನು ಕಷ್ಟ ಎದುರಾಗಲಿದೆ? ರೆಡಿಯಾಗ್ತಾ ಇರೋ ಚಾರ್ಜ್ ಶೀಟ್ನಿಂದ, ಕಿಲ್ಲಿಂಗ್ ಸ್ಟಾರ್ ಹಣೆಬರಹ ಮತ್ತಷ್ಟು ಕೆಡುತ್ತಾ? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್, ಹೀರೋ ಅಲ್ಲ, ವಿಲನ್ ನಂ.1..

Video Top Stories