
PSI ನೇಮಕಾತಿ ಹಗರಣ: ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಸಿಐಡಿ ಮತ್ತೊಂದು ಶಾಕ್
PSI ಪರೀಕ್ಷೆ ಹಗರಣದ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, PWD ಇಲಾಖೆಯ JE, AE ಪರೀಕ್ಷೆ ಅಕ್ರಮ ಕೇಸ್ ರೀ ಓಪನ್ ಮಾಡುವಂತೆ ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಂಗಳೂರು, (ಮೇ.10): PSI ಪರೀಕ್ಷೆ ಹಗರಣದ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, PWD ಇಲಾಖೆಯ JE, AE ಪರೀಕ್ಷೆ ಅಕ್ರಮ ಕೇಸ್ ರೀ ಓಪನ್ ಮಾಡುವಂತೆ ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪಿಎಸ್‌ಐ ನೇಮಕಾತಿ ಪರೀಕ್ಷೆ ಬಳಿಕ ಫೋಟೋಶೂಟ್! ಸಿಐಡಿ ನೆರವಿಗೆ ಬಂತು ಆ ಫೋಟೋ
ಈ ಪ್ರಕರಣ 2021ರ ಡಿಸೆಂಬರ್ 14 ರಂದು ದಾಖಲಾಗಿದ್ದು, ಸೆಂಟ್ ಜಾನ್ಸ್ ಶಾಲೆಯ ಸಿಬ್ಬಂದಿ ದೂರು ನೀಡಿದ್ದರು. ಪರೀಕ್ಷಾ ಸಮಯದಲ್ಲಿ ವೀರಣಗೌಡ ಅನ್ನುವ ಅಭ್ಯರ್ಥಿ ಎಲೆಕ್ಟ್ರಾನಿಕ್ ಬ್ಲೂಟೂತ್ ಬಳಕೆ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ಕೇಸ್ ರೀ ಓಪನ್ ಮಾಡಿದೆ. ಈ ಪ್ರಕರಣದಲ್ಲಿ RD ಪಾಟೀಲ್ 7ನೇ ಆರೋಪಿಯಾಗಿದ್ದನು. ಚಾರ್ಜ್ಶೀಟ್ನಲ್ಲಿ ಹೆಸರು ಕೈಬಿಡಲು ಪ್ರಭಾವ ಬೀರಿದ್ದ. RD ಪಾಟೀಲ್ ಅನೇಕರಿಗೆ ಅಕ್ರಮವಾಗಿ ಪರೀಕ್ಷೆ ಬರೆಸಿದ್ದನು. ಅನ್ನಪೂರ್ಣೇಶ್ವರಿ ನಗರ ಠಾಣೆ ಟೀಂ ಕಲಬುರಗಿಗೆ ಬಂದಿದ್ದು, ಇಂದು RD ಪಾಟೀಲ್ನನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.