Prajwal revanna Sex Scandal: ಪ್ರಜ್ವಲ್ ರೇವಣ್ಣ ಕಾಮಕಾಂಡ..ಬ್ಯಾಕ್ ಟು ಬೆಂಗಳೂರು ಯಾವಾಗ? ತಕ್ಷಣವೇ ಅರೆಸ್ಟ್ ಆಗ್ತಾರಾ..?

ಪೆನ್‌ಡ್ರೈವ್ ಚಕ್ರವ್ಯೂಹದಿಂದ ಹೊರಬರ್ತಾರಾ ಅಪ್ಪ ಮಗ..?
ಬೆಂಗಳೂರಿಗೆ ಬಂದಾಕ್ಷಣ ಸಂಸದ ಪ್ರಜ್ವಲ್ ಆಗ್ತಾರಾ ಅರೆಸ್ಟ್..?
'ದಾಲ್ ಮೇ ಕಾಲಾ ಹೇ’ ಅಂತ ಕೇಂದ್ರ ಸಚಿವರು ಹೇಳಿದ್ದೇಕೆ..?

Share this Video
  • FB
  • Linkdin
  • Whatsapp

ಹಾಸನದ ಸಂಸದರೂ ಆಗಿರೋ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಭವಾನಿ ದಂಪತಿಯ ಹಿರಿಯ ಮಗ ಪ್ರಜ್ವಲ್(Prajwal revanna). ಈತನ ಕಾಮಕಾಂಡದ ಅಂತ ಹೇಳಲಾಗಿರುವ ರಾಶಿ ರಾಶಿ ವಿಡಿಯೋಗಳಿರುವ ಪೆನ್‌ಡ್ರೈವ್(Pendrive) ಸೃಷ್ಟಿಸಿರೋ ಹಲ್‌ಚಲ್ ಅಷ್ಟಿಷ್ಟಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ, ವ್ಯಕ್ತವಾಗುತ್ತಿರುವ ಜನರ ಆಕ್ರೋಶ ನೋಡ್ತಿದ್ರೆ ಗೊತ್ತಾಗುತ್ತೆ. ಈ ಲೈಂಗಿಕ ದೌರ್ಜನ್ಯ ಪ್ರಕರಣ ಜನರನ್ನ ಯಾವ ಮಟ್ಟಿಗೆ ರೊಚ್ಚಿಗೆಬ್ಬಿಸಿದೆ ಅಂತ. ಸದ್ಯಕ್ಕೆ ಈ ಪ್ರಕರಣದ ಕುರಿತು ಕೂಲಂಕೂಶವಾಗಿ ತನಿಖೆಯಾಗಬೇಕಾಗಿದೆ. ಅದಕ್ಕಾಗಿ ರಾಜ್ಯಸರ್ಕಾರ ಎಸ್ಐಟಿ(SIT) ರಚಿಸಿದ್ದೂ ಆಗಿದೆ. ಅದು ಈಗಾಗಲೇ ಫಿಲ್ಡಿಗಿಳಿದಿದ್ದೂ ಆಗಿದೆ. ಎಸ್ಐಟಿ ತಂಡ ಈಗಾಗಲೇ ಆ್ಯಕ್ಟಿವ್ ಆಗಿ, ಹೊಳೆ ನರಸಿಪುರಕ್ಕೆ ಎಂಟ್ರಿಯಾಗಿದೆ. ಸಂತ್ರಸ್ಥೆಯ ಸಮ್ಮುಖದಲ್ಲಿ ಮಹಜರು ನಡೆಸಿದೆ. ಈ ಪ್ರಕರಣ ಯಾವ ಯಾವ ರಹಸ್ಯಗಳನ್ನ ಬಯಲು ಮಾಡಲಿದೆ ಅನ್ನೊದು ಸದ್ಯಕ್ಕಂತೂ ಹೇಳೋದಕ್ಕೆ ಅಸಾಧ್ಯ. ಆದರೆ ಒಂದೊಂದೇ ಸತ್ಯಸತ್ಯತೆ ಹೊರಗೆ ಬಂದ್ಬಿಟ್ಟರೆ ಅನೇಕ ಕರಾಳ ಸತ್ಯಗಳು ಹೊರಗೆ ಬರೋದಂತೂ ಕನ್ಫರ್ಮ್. ಆದರೆ ಈ ಎಲ್ಲ ಪ್ರಕ್ರೀಯೆಗಳು ನಡೆಯಬೇಕೆಂದರೆ ಮೊಟ್ಟ ಮೊದಲಿಗೆ ಎ-ಒನ್ ಆರೋಪಿ ಹಾಗೂ ಎ-ಟು ಆರೋಪಿ ಅಂದ್ರೆ ಪ್ರಜ್ವಲ್ ರೇವಣ್ಣ(Prajwal revanna sex scandal) ಹಾಗೂ ಹೆಚ್ಡಿ ರೇವಣ್ಣ(HD Revanna) ಇವರಿಬ್ಬರೂ ಎಸ್ಐಟಿ ಮುಂದೆ ಹಾಜರಾಗಬೇಕು. ಎಸ್ಐಟಿ ಕೂಡ 24 ಗಂಟೆಯೊಳಗೆ ಹಾಜರಾಗುವುದಕ್ಕೆ ನೋಟಿಸ್ ಕೊಟ್ಟಿತ್ತು. ಮಾಜಿ ಸಚಿವ ಹೆಚ್ಡಿ ರೇವಣ್ಣ ಈ ಮೊದಲೇ ಮೇ 4ರಂದು ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿದ್ದರು. ಅಷ್ಟೆಅಲ್ಲ ಇದು ತನ್ನ ವಿರುದ್ಧ ಹೆಣೆದಿರುವ ಷಡ್ಯಂತ್ರ ಇದನ್ನು ಎದುರಿಸೋಕೆ, ತಾನು ಸದಾ ಸಿದ್ಧ ಎಂದು ಕ್ಲಿಯರ್ ಕಟ್ ಆಗಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: Baahubali: ಮತ್ತೆ ಶುರುವಾಯ್ತು ಬಾಹುಬಲಿಯ ರಾಜ್ಯಭಾರ! ಮಾಹಿಷ್ಮತಿ ಸಾಮ್ರಾಜ್ಯ ತೋರಿಸುತ್ತಾರೆ ಮೌಳಿ..!

Related Video