Baahubali: ಮತ್ತೆ ಶುರುವಾಯ್ತು ಬಾಹುಬಲಿಯ ರಾಜ್ಯಭಾರ! ಮಾಹಿಷ್ಮತಿ ಸಾಮ್ರಾಜ್ಯ ತೋರಿಸುತ್ತಾರೆ ಮೌಳಿ..!

ಇದೀಗ ಎಲ್ಲಾ ಕಡೆ ಬಾಹುಬಲಿ ಸಿನಿಮಾ ಬಗ್ಗೆ ಟಾಕ್ ಆಗ್ತಿದೆಯಲ್ಲ ಎಂದು ಕನ್ಫ್ಯೂಸ್ ಆಗ್ಬೇಡಿ. ಯಾಕೆಂದರೆ ಮೌಳಿ ಕೈಗೆತ್ತಿಕೊಂಡಿರೋದು ಬಾಹುಬಲಿ ಅನಿಮೇಟೆಡ್ ವೆಬ್ ಸೀರಿಸ್ ಅನ್ನು.

First Published May 2, 2024, 11:23 AM IST | Last Updated May 2, 2024, 11:24 AM IST

ಬಾಹುಬಲಿ ಸಿನಿಮಾ (Baahubali movie) ಮುಂದುವರೆದ ಭಾಗ ಯಾವಾಗ ಯಾವಾಗ ಬರುತ್ತೆ. ಅದು ಸಾಧ್ಯನಾ..? ಬಾಹುಬಲಿ ನಿರ್ದೇಶಕ ಎಸ್.ಎಸ್ ರಾಜಮೌಳಿ (SS Rajamouli) ಎಲ್ಲೇ ಹೋದ್ರು ಈ ಪ್ರಶ್ನೆ ಎದುರಿಸುತ್ತಿದ್ದರು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಮತ್ತೆ ಬಾಹುಬಲಿ ರಾಜ್ಯಭಾರ ಶುರುವಾಗುತ್ತಿದ್ದು, ಮಾಹಿಶ್ಮತಿ ಸಾಮ್ರಾಜ್ಯ ತೋರಿಸೋಕೆ ರಾಜಮೌಳಿ ಮುಂದಾಗಿದ್ದಾರೆ. ಅರೆ.. ರಾಮಮೌಳಿ ಸಧ್ಯ ಮಹೇಶ್ ಬಾಬು (Mahesh Babu) ಅಕ್ಕ ಪಕ್ಕ ಕಾಣಿಸುತ್ತಿದ್ದಾರೆ. ಈ ಜೋಡಿ ಸಿನಿಮಾ ಮಾಡೋದು ಪಕ್ಕಾ ಆಗಿದೆ. ಈಗ ನೋಡಿದ್ರೆ ಬಾಹುಬಲಿ ಸಿನಿಮಾ ಬಗ್ಗೆ ಟಾಕ್ ಆಗ್ತಿದೆಯಲ್ಲ ಅಂತ ಕನ್ಫ್ಯೂಸ್ ಆಗ್ಬೇಡಿ. ಯಾಕೆಂದರೆ  ಮೌಳಿ ಕೈಗೆತ್ತಿಕೊಂಡಿರೋದು ಬಾಬುಬಲಿ ಅನಿಮೇಟೆಡ್ ವೆಬ್ ಸೀರಿಸ್ ಅನ್ನ.

ಬಾಹುಬಲಿ ಸಿನಿಮಾ ಅನಿಮೇಷನ್‌ನಲ್ಲಿ ವೆಬ್ ಸೀರಿಸ್ ಆಗಿ ಸಿದ್ಧವಾಗುತ್ತಿದೆ. ಬಾಹುಬಲಿ ಸಿನಿಮಾಗಳಲ್ಲಿ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಈ ಇಬ್ಬರು ಕ್ಯಾರೆಕ್ಟ ರ್ಅನ್ನ ರಾಜಮೌಳಿ ತೋರಿಸಿದ್ರು. ಈಗ ಅನಿಮೇಷನ್ ವೆಬ್ ಸೀರಿಸ್‌ನಲ್ಲಿ (Bahubali Animation web series) ಅಮರೇಂದ್ರ ಬಾಹುಬಲಿಯ ಹಿಂದಿನ ಕಥೆ, ಮಹೇಂದ್ರ ಬಾಹುಬಲಿಯ ಮುಂದಿನ ಸ್ಟೋರಿಯನ್ನ ತೋರಿಸುತ್ತಾರಂತೆ. ಅಷ್ಟೆ ಅಲ್ಲದೆ ಶಿವಗಾಮಿ ಬಗ್ಗೆ ಒಂದು ಸ್ಟೋರಿ ಸಹ ಇರುತ್ತಂತೆ. ಈ ಬಾಹುಬಲಿ ವೆಬ್ ಸೀರಿಸ್‌ಗೆ 'ಬಾಹುಬಲಿ- ಕ್ರೌನ್ ಆಫ್ ಬ್ಲಡ್’ (Baahubali- Crown of Blood) ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಕಾಂತಾರ-1 ಬಗ್ಗೆ ತಿಳಿದುಬಂತು ಅಚ್ಚರಿ ಸಂಗತಿ! ಶೆಟ್ರು ಯಾವೆಲ್ಲಾ ಅಭ್ಯಾಸದಲ್ಲಿ ನಿರತರಾಗಿದ್ದಾರೆ ಗೊತ್ತಾ?

Video Top Stories