Asianet Suvarna News Asianet Suvarna News

RTI ಕಾರ್ಯಕರ್ತನನ್ನ ಕೊಂದುಬಿಟ್ಟರಾ ಪೊಲೀಸರು?: ಅರೆಸ್ಟ್ ಆಗಿ 2 ಗಂಟೆಯಲ್ಲೇ ಹರೀಶ ಮೃತಪಟ್ಟಿದ್ಯಾಕೆ ?

RTI ಕಾರ್ಯಕರ್ತನಾಗಿದ್ದ ಹರೀಶ ಭ್ರಷ್ಟರನ್ನ ಇನ್ನಿಲ್ಲದಂತೆ ಕಾಡ್ತಿದ್ದ. ಆದ್ರೆ ಇದೇ ಟೈಂನಲ್ಲಿ ಕೆಲ ಅಮಾಯಕರನ್ನೂ ಕಾಡಲಾರಂಭಿಸಿದ್ದ. ಯಾರದ್ದೋ ಆಸ್ತಿಯನ್ನ ಅಕ್ರಮವಾಗಿ ತನ್ನದಾಗಿಸಿಕೊಂಡುಬಿಟ್ಟ, ಇದೇ ನೋಡಿ ಅವನ ಸಾವಿಗೆ ಮೂಲ ಕಾರಣವಾಗೋದು. 

ಆತ RTI ಕಾರ್ಯಕರ್ತ, ಭ್ರಷ್ಟರ ವಿರುದ್ಧ ಸಮರ ಸಾರಿದವನು. ದೊಡ್ಡ ದೊಡ್ಡ ಕುಳಗಳ ವಿರುದ್ಧವೇ ಕೇಸ್‌ಗಳನ್ನ ಹಾಕಿ ಊರ ತುಂಬೆಲ್ಲಾ ದುಷ್ಮನ್‌ಗಳನ್ನ ಇಟ್ಟುಕೊಂಡವನು. ಇಂಥವನೊಬ್ಬ ಅವತ್ತು ರಾತ್ರಿ ಕಳೆದು ಬೆಳಗಾಗುವಷ್ರಲ್ಲಿ ಹೆಣವಾಗಿದ್ದ. ಕೊಂದ ಆರೋಪ ಯಾರ ಮೇಲೆ ಬಂತು ಗೊತ್ತಾ..? ಪೊಲೀಸರ ಮೇಲೆ. ಹೌದು, ಮಧ್ಯರಾತ್ರಿ ಪೊಲೀಸರು ಅವನ ಮನೆಯ ಬಾಗಿಲು ತಟ್ಟಿದ್ರು. ಯಾವುದೋ ಕೇಸ್ ಮೇಲೆ ಅರೆಸ್ಟ್ ಮಾಡ್ತಿದ್ದೀವಿ ಅಂತ ಮಲಗಿದ್ದವನನ್ನ ಪೊಲೀಸ್ ಜೀಪ್‌ಗೆ ಕೂರಿಸಿಕೊಂಡು ಹೋದ್ರು. ಆದ್ರೆ ಬೆಳಗಾಗುವಷ್ರಲ್ಲಿ ಆತ ಸತ್ತಿರೋ ಸುದ್ದಿ ಪೊಲೀಸರೇ RTI ಕಾರ್ಯಕರ್ತನ ಮನೆಯವರಿಗೆ ತಲುಪಿಸಿದ್ರು. ಮೃತ ಹರೀಶ್ ಪೊಲೀಸರ ಜೊತೆ ಈರುವಾಗಲೇ ಮೃತಪಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಫೇಸ್‌ಬುಕ್‌ನಿಂದ ಹಣ ಕಳೆದುಕೊಂಡ ಮಹಿಳೆ: ಬಂಗಾರದ ಆಸೆಗೆ 6.50 ಲಕ್ಷಕ್ಕೆ ಪಂಗನಾಮ !