ಸಾಯೋ ಕೊನೆ ಕ್ಷಣದಲ್ಲಿ ರಿವೀಲ್ ಆಯ್ತು ಡೆತ್ ಮಿಸ್ಟರಿ..! ಗೆಳೆಯನನ್ನ ಮನೆಗೆ ಕರೆದು ಬೆಂಕಿ ಹಚ್ಚಿದ್ಲಾ..?

2 ಮಕ್ಕಳ ತಾಯಿಯ ಹಿಂದೆ ಹೋದವನು ಹೆಣವಾದ..!
ಏಕಾಂತದಲ್ಲಿದ್ದಾಗ ಬಂದಿತ್ತು ಮೂರನೇಯವನ ಕಾಲ್..!
ಮೊಬೈಲ್ ಚೆಕ್ ಮಾಡಿದಾಗ ನಿಜ ಬಣ್ಣ ಬಯಲಾಗಿತ್ತು..!

Share this Video
  • FB
  • Linkdin
  • Whatsapp

ಅವನು ಪೊಲೀಸ್ ಕಾನ್ಸ್ಟೇಬಲ್(Police Constable). ಬೆಂಗಳೂರಿನ(Bengaluru) ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಮೂಲತಃ ಹಾಸನದವನಾದ ಈತ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿದ್ದ. ಆದ್ರೆ ಆವತ್ತೊಂದು ದಿನ ಆತ ಆಸ್ಪತ್ರೆಗೆ ದಾಖಲಾಗಿದ್ದ. ಹೋಗಿ ವಿಚಾರಿಸಿದ್ರೆ ಗ್ಯಾಸ್ ಬ್ಲಾಸ್ಟ್ ಆಯ್ತು ಅಂದ. ಪೊಲೀಸರು(police) ಸಹ ಸುಮ್ಮನ್ನಾಗಿದ್ರು. ಆದ್ರೆ 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದವನು ಇವತ್ತು ಕೊನೆಯುಸಿರು ಎಳೆದುಬಿಟ್ಟಿದ್ದಾನೆ. ಸಾಯೋ ಎರಡು ದಿನ ಮುನ್ನ ಆತ ತನ್ನ ಸಾವಿನ ಹಿಂದಿನ ಸೀಕ್ರೆಟ್ ಅನ್ನ ಬಿಚ್ಚಿಟ್ಟಿದ್ದ. ಅದು ಗ್ಯಾಸ್ ಬ್ಲಾಸ್ಟ್ ಅಲ್ಲ ಬದಲಿಗೆ ಅವನನ್ನ ಪೆಟ್ರೋಲ್ ಹಾಕಿ ಸುಟ್ಟರು ಅಂದಿದ್ದ. ಮೊದಲು ಆ್ಯಕ್ಸಿಡೆಂಟಾಗಿ ಆದ ಗಾಯ ಅಂದಿದ್ದ ಸಂಜಯ್ಗೆ ತನ್ನ ಸಾವಿನ ಮುನ್ಸುಚನೆ ಸಿಕ್ಕಿತ್ತು ಅನಿಸುತ್ತೆ. ಇದೇ ಕಾರಣಕ್ಕೆ ಸಾಯೋಕು ಎರಡು ದಿನ ಮುನ್ನ ಪೊಲೀಸರನ್ನ ಕರೆದು ರಾಣಿಯ ಕಥೆ ಹೇಳಿದ್ದ. ಆಕೆಯೇ ನನಗೆ ಬೆಂಕಿ ಇಟ್ಟುಬಿಟ್ಟಳು.. ನನಗೆ ನ್ಯಾಯ ಕೊಡಿಸಿ ಅಂದಿದ್ದ. ಪೊಲೀಸ್ ಕೆಲಸ ಸಿಕ್ಕ ಮೇಲೆ ಬೆಂಗಳೂರಿಗೆ ಬಂದ ಸಂಜಯ್ಗೆ ರಾಣಿ ಅನ್ನೋ ಹೋಂ ಗಾರ್ಡ್ನ(Home guard) ಪರಿಚಯವಾಗಿತ್ತು.. ಆಕೆಗೋ ಮದುವೆಯಾಗಿ ಎರಡು ಮಕ್ಕಳಿದ್ವು. ಆದ್ರೂ ಇವರಿಬ್ಬರೂ ಲವ್ನಲ್ಲಿ ಬಿದ್ದಿದ್ರು. ಬೆಂಗಳೂರಿನಲ್ಲಿ ಒಬ್ಬಂಟಿಯಾಗಿದ್ದ ಸಂಜಯ್‌ಗೆ ರಾಣಿ ಸಂಗಾತಿಯಾಗಿದ್ಲು. ಇಬ್ಬರೂ ಕದ್ದು ಮುಚ್ಚಿ ಸೇರುತ್ತಿದ್ರು.. ಆದ್ರೆ ಆವತ್ತೊಂದು ದಿನ ಇಬ್ಬರೂ ಏಕಾಂತವಾಗಿರುವಾಗ್ಲೇ ಆಕೆಯ ಮೊಬೈಲ್‌ಗೆ ಒಂದು ಕಾಲ್ ಬರುತ್ತೆ.. ಆ ಕಾಲ್ ಸಂಜಯ್ಗೆ ರಾಣಿ ಮೇಲೆ ಅನುಮಾನ ಬರುವಂತೆ ಮಾಡುತ್ತೆ. ಆಕೆಯ ಫೋನ್ ಚೆಕ್ ಮಾಡಿದಾಗ ಆಕೆಗೆ ಮತ್ತೊಬ್ಬ ಫ್ರೆಂಡ್ ಇರೋದು ಗೊತ್ತಾಗುತ್ತೆ. ಪ್ರೀತಿ ಅಂಥ ನಂಬಿ ಹೋದವನನ್ನ ಈ ರೀತಿ ನರಳಿ ನರಳಿ ಸಾಯೋವಂತೆ ಮಾಡಿರೋದು ನಿಜಕ್ಕೂ ದೊಡ್ಡ ದುರಂತ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಸರ್ಕಾರದ ಟೀಕೆ..ಓಕೆ.. ದೇಶದ ತಂಟೆಗೆ ಬಂದ್ರೆ ಜೋಕೆ! ಏನು ಹೇಳುತ್ತಿವೆ 3 ಭಾರತೀಯ ಕಾನೂನು!

Related Video