Asianet Suvarna News Asianet Suvarna News

ಸರ್ಕಾರದ ಟೀಕೆ..ಓಕೆ.. ದೇಶದ ತಂಟೆಗೆ ಬಂದ್ರೆ ಜೋಕೆ! ಏನು ಹೇಳುತ್ತಿವೆ 3 ಭಾರತೀಯ ಕಾನೂನು!

ಅಧಿವೇಶನದಲ್ಲಿ ಜಾರಿಗೆ ಬಂತು ದೇಶ ಬದಲಿಸೋ ಕಾಯ್ದೆಗಳು..!
ಅಮೃತಕಾಲದ ನವಭಾರತಕ್ಕೆ ಭಾರತೀಯ ನ್ಯಾಯ ಸಂಹಿತೆ..!
ಕಾನೂನಲ್ಲಿ ಬದಲಾಗಿದ್ದೇನೇನು..? ಬದಲಾಗುವುದೇನೇನು..?

ಅಧಿವೇಶನದಲ್ಲಿ ಜಾರಿಗೆ ಬಂತು ದೇಶ ಬದಲಿಸೋ ಕಾಯ್ದೆಗಳು. ಬ್ರಿಟಿಷ್(British)ಕಾಲದ ಮತ್ತೊಂದು ಸೃಷ್ಟಿ ಈಗ ಇತಿಹಾಸದ ಪುಟ ಸೇರಿದ್ದಾಯ್ತು. ಸರ್ಕಾರವನ್ನ ಟೀಕಿಸಿದ್ರೆ.. ಓಕೆ..ದೇಶದ ತಂಟೆಗೆ ಬಂದ್ರೆ ಜೋಕೆ ಅಂತಿದೆ, ಹೊಸ ಕಾನೂನು. ಪ್ರಧಾನಿ ನರೇಂದ್ರ(Narendra Modi) ಮೋದಿ ಅವರ ನೇತೃತ್ವದಲ್ಲಿ ಭಾರತ ಬದಲಾಗ್ತಾ ಇದೆ. ಈಗ ಅಂಥಾ ಬದಲಾವಣೆ ದೊಡ್ಡಮಟ್ಟದಲ್ಲೇ ನಡೀತಾ ಇದೆ. ಇದೇ ಅಧಿವೇಶನದಲ್ಲಿ, ವಸಾಹತುಶಾಹಿ ಕಾನೂನುಗಳಿಗೆ ತಿಲಾಂಜಲಿ ಇಡೋಕೆ ಮೋದಿ ಸರ್ಕಾರ ಮುಂದಾಗಿದೆ. ಮೋದಿ ಅವರು ಈ ಹಿಂದೆ ಒಂದು ಮಾತು ಹೇಳಿದ್ರು. ಆ ಮಾತನ್ನ ಭಾರತೀಯರು ಸುಲಭವಾಗಿ ಮರೆಯೋಕೆ ಸಾಧ್ಯವಿಲ್ಲ. ಇದು ಮೋದಿ ಅವರ ಮಾತಲ್ಲ.. ಮೋದಿ ಅವರು ನಂಬಿಕೊಂಡಿರೋ ಮಂತ್ರ. ವಸಾಹತುಶಾಲಿ ಮಂಪರಿನಿಂದ ಗುಲಾಮಗಿರಿಯ ನೆನಪಿಂದ ಭಾರತ(India) ಆಚೆ ಬರ್ಬೇಕು ಅನ್ನೋದೇ ಮೋದಿ ಅವರ ದೊಡ್ಡ ಕಸನು. ಆ ಕನಸು ನನಸಾಗಿಸಿಕೊಳ್ಳೋಕೆ. ಮೋದಿ ಅವರು ಮಾಡ್ತಾ ಇರೋ ಪ್ರಯತ್ನ ಒಂದೆರಡಲ್ಲ. ಆ ಪ್ರಯತ್ನಗಳ ಕಂಪ್ಲೀಟ್ ಕಥೆ ನಿಮಗೆ ಹೇಳ್ತೀವಿ. ಆದ್ರೆ ಅದನ್ನ ಹೇಳೋ ಮುಂಚೆ, ಈಗ ದೇಶದಲ್ಲಾಗಿರೋ ಅತಿ ದೊಡ್ಡ ಬದಲಾವಣೆಯ ಕತೆ ಹೇಳ್ತೀವಿ ಕೇಳಿ. ಆ ಮೂರೂ ಕಾನೂನುಗಳನ್ನ(criminal law bill) ಬ್ರಿಟಿಷರ ಕಾಲದಲ್ಲಿ ಸೃಷ್ಟಿಸಲಾಗಿತ್ತು. ನೂರಾರು ವರ್ಷಗಳ ಹಿಂದೆ ಅವನ್ನ ರಚಿಸಿದ್ದರು. ಮೋದಿಜಿ ಪ್ರಧಾನಿಯಾದ ಬಳಿಕ ಗುಲಾಮಿತನದ ಎಲ್ಲಾ ಚಿನ್ಹೆಗಳನ್ನು ಈ ದೇಶದಿಂದ ತೊಲಗಿಸಿ, ಹೊಸ ಆತ್ಮವಿಶ್ವಾಸದೊಂದಿದೆ ಮಹಾನ್ ಭಾರತ ನಿರ್ಮಾಣದ ರಚನೆಗೆ ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದಲ್ಲಿ ಗುಲಾಮಿತನದ ಒಂದೇ ಒಂದು ಸಂಕೇತವೂ ಉಳಿಯದ ಹಾಗೆ ಮಾಡೋಕೆ ಸನ್ನದ್ಧರಾಗಿದ್ದಾರೆ. ಅದನ್ನ ಒಂದೊಂದೇ ಹಂತದಲ್ಲಿ ಸಾಧಿಸ್ತಾ ಇರೋದಕ್ಕೆ ಕಣ್ಣೆದುರೇ ಹತ್ತಾರು ಉದಾಹರಣೆಗಳಿವೆ. ಅಷ್ಟಕ್ಕೂ ಈಗ್ಯಾಕೆ ಈ ಮಾತು ಬಂತು ಅಂತ ಕೇಳ್ತೀರಾ? ಅದಕ್ಕೆ  ಕಾರಣವೂ ಇದೆ.

ಇದನ್ನೂ ವೀಕ್ಷಿಸಿ:  ಹನುಮ ಸಂಕೀರ್ತನಾ ಯಾತ್ರೆಗೆ ಮುಸ್ಲಿಂ ಸಂಘಟನೆಗಳ ವಿರೋಧ: ಅನಾಹುತ ಸಂಭವಿಸಿದ್ರೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ !

Video Top Stories