ಗಂಡ- ಹೆಂಡತಿ ನಡುವೆ ಬಂದ ಆ ಮೂರನೇ ವ್ಯಕ್ತಿ ಯಾರು..? : ಪವಿತ್ರಾ ಬರೆದ ಡೆತ್‌ ನೋಟ್‌ನಲ್ಲಿ ಏನಿತ್ತು?

ಶ್ರೀಮಂತನ ಕಂಪನಿಯಲ್ಲಿ ಸುಂದರಿ..!
ಎಷ್ಟು ಜನರಿಗೆ ಬಾಳು ಕೊಟ್ಟನೋ ಪುಣ್ಯಾತ್ಮ
ಸಂಸಾರಕ್ಕೆ ಮೂರನೇಯವಳು ಎಂಟ್ರಿಯಾದಳು..!

Share this Video
  • FB
  • Linkdin
  • Whatsapp

ಆಕೆ ಅಪರೂಪದ ಸುಂದರಿ ವಯಸ್ಸು ಇನ್ನೂ ಜಸ್ಟ್ 35 ವರ್ಷ. ಫಿನಾನ್ಸ್ ಕಂಪನಿ (Finance company) ನಡೆಸುತ್ತಿದ್ದ ಸಾಹುಕಾರನ ಜೊತೆಗೆ 4 ವರ್ಷದ ಹಿಂದಷ್ಟೇ ಸಪ್ತಪದಿ ತುಳಿದಿದ್ದಳು. ಐಷರಾಮಿ ಜೀವನ ನಡೆಸುತ್ತಿದ್ದ ಅವಳಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದ್ರೆ ಸಮಸ್ಯೆ ಆಗಿದ್ದಿದ್ದೇ ಗಂಡ. ಕೋಟಿ ಕೋಟಿ ಇದ್ರೂ ಗಂಡನ ನಡುವಳಿಕೆ ಆಕೆಗೆ ಬೇಸರ ತರಿಸಿತ್ತು. ಪರಿಣಾಮ ಆವತ್ತೊಂದು ದಿನ ತನ್ನ ಜೀವನಕ್ಕೇ ಫುಲ್ ಸ್ಟಾಪ್ ಇಟ್ಟುಬಿಟ್ಟಿದ್ಲು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆಕೆ ಶಿವನ ಪಾದ ಸೇರಿಬಿಟ್ಟಿದ್ಲು. ಪವಿತ್ರ (Pavitra) ತನ್ನ ವಾಟ್ಸಪ್ ಸ್ಟೇಟಸ್ನಲ್ಲಿ ಡೆತ್ ನೋಟ್ ಬರೆದಿದ್ದ ಫೋಟೋವನ್ನ ಅಪ್ಲೋಡ್ ಮಾಡಿ ನೇಣಿಗೆ ಶರಣಾಗಿದ್ಲು. ಇದೇ ಡೆತ್ ನೋಟ್ ಕಾಪಿಯನ್ನ ಪೊಲೀಸರಿಗೆ ಕೊಟ್ಟಿದ್ಲು. ಇನ್ನೂ ಪೊಲೀಸರು ಆಕೆಯಿಂದಲೇ ಪ್ರಕರಣ ದಾಖಲಿಸಿಕೊಂಡು ಮೊದಲಿಗೆ ಪವಿತ್ರಾ ರೂಮ್ ಅನ್ನ ಜಾಲಾಡ್ತಾರೆ. ಆಕೆಯ ಡೆತ್ನೋಟ್ನ ಹುಡುಕಾಡ್ತಾರೆ. ಅದು ಸಿಗುತ್ತೆ ಕೂಡ. ಆದ್ರೆ ಪೊಲೀಸರಿಗೆ (Police) ಈ ಪ್ರಕರಣದ ಬಗ್ಗೆ ಪಕ್ಕಾ ಮಾಹಿತಿ ಸಿಗೋದು ಪವಿತ್ರ ತನ್ನ ಸ್ಟೇಟಸ್ನಲ್ಲಿ ಡೆತ್ ನೋಟ್ ಜೊತೆ ಹಾಕಿಕೊಂಡಿದ್ದ 3 ವಿಡಿಯೋಗಳು.

ಇದನ್ನೂ ವೀಕ್ಷಿಸಿ:  ಗೋ ಹತ್ಯೆ ನಿಷೇಧ ಕಾನೂನು ರದ್ದು ಪಡಿಸುವ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ: ಕೆ. ವೆಂಕಟೇಶ್‌

Related Video