ಗೋ ಹತ್ಯೆ ನಿಷೇಧ ಕಾನೂನು ರದ್ದು ಪಡಿಸುವ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ: ಕೆ. ವೆಂಕಟೇಶ್‌

ಗೋಹತ್ಯೆ ನಿಷೇಧ ಕಾನೂನನ್ನು ರದ್ದುಗೊಳಿಸುವ ಪ್ರಸ್ತಾವ  ಸರ್ಕಾರದ ಮುಂದಿಲ್ಲ ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ವಿಧಾನ ಪರಿಷತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

First Published Jul 6, 2023, 1:09 PM IST | Last Updated Jul 6, 2023, 1:24 PM IST

ಬೆಂಗಳೂರು: ಗೋ ಹತ್ಯೆ ನಿಷೇಧ ಕಾಯ್ದೆ (Anti-Cow Slaughter Law) ರದ್ದು ಪಡಿಸೋ ಪ್ರಸ್ತಾಪ ಇಲ್ಲ ಎಂದು ವಿಧಾನಪರಿಷತ್‌ನಲ್ಲಿ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್‌ ( K Venkatesh) ಹೇಳಿದ್ದಾರೆ. ಈ ಹಿಂದೆ ಕಾಯ್ದೆಯನ್ನು ವಾಪಸ್‌ ಮಾಡುತ್ತೇವೆ ಎಂದು ಸಚಿವರು ಹೇಳಿದ್ದರು. ಪರಿಷತ್‌ನಲ್ಲಿ ಬಿಜೆಪಿಯ ಎನ್‌. ರವಿಕುಮಾರ್‌ (N Ravikumar) ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ರೀತಿ ಹೇಳಿದ್ದಾರೆ. ನಿಷೇಧ ಮಾಡುವುದಾಗಿ ಜೂನ್‌ 6 ರಂದು ಸಚಿವರು ಹೇಳಿಕೆ ನೀಡಿದ್ದರು. ಮೈಸೂರಿನಲ್ಲಿ ನಾನು ಈ ವಿಷಯವನ್ನು ಕ್ಯಾಜೂಯಲ್‌ ಆಗಿ ಹೇಳಿದ್ದೆ. ಉದ್ದೇಶ ಪೂರ್ವಕವಾಗಿ ಹೇಳಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದರ ಸಾಧಕ- ಬಾಧಕಗಳನ್ನು ಚರ್ಚಿಸುತ್ತಿದ್ದೇವೆ. ಹಾಗಾಗಿ ಮುಂದೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. 

ಇದನ್ನೂ ವೀಕ್ಷಿಸಿ:  ಆಡಳಿತ ಮಂಡಳಿ ಬದಲಾಗದಿದ್ದರೆ ಮಳೆ ಬರಲ್ಲ, ನದಿ ತುಂಬಲ್ಲ: ಹರಿಯಾಣ ಸ್ವಾಮೀಜಿ ಭವಿಷ್ಯ

Video Top Stories