ಹಬ್ಬಕ್ಕೆ ಊರಿಗೆ ಬಂದವನು ಮಟಾಷ್..! ಭೀಮಾ ತೀರದಲ್ಲಿ ಮತ್ತೆ ಚಿಮ್ಮಿತು ಹಸಿ ಹಸಿ ರಕ್ತ..!

ನಟ್ಟ ನಡು ಊರಿನಲ್ಲಿ ಕುರಿ ಕತ್ತರಿಸಿದಂತೆ ಕತ್ತರಿಸಿದ ಹಂತಕರು
ಆ ಕೊಲೆ ಹಿಂದಿತ್ತು ವರ್ಷದ ಹಿಂದೆ ನಡೆದ ಮರ್ಡರ್ ಮಿಸ್ಟ್ರಿ
ಹೆಣ ಹಾಕಿ ಜೈಲಿಗೆ ಹೋದವನಿಗಾಗಿ 1 ವರ್ಷ ಕಾದಿದ್ದರು..!

Share this Video
  • FB
  • Linkdin
  • Whatsapp

ಭೀಮಾ ತೀರವೇ ಹಾಗೆ. ಇಲ್ಲಿ ಒಂದು ನೆತ್ತರಿನ ಕಲೆ ಮಾಸುವ ಮುನ್ನವೇ ಹಸಿ ಹಸಿ ರಕ್ತ ಚಿಮ್ಮಿಬಿಡುತ್ತೆ. ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು.. ರಕ್ತಕ್ಕೆ ರಕ್ತದಿಂದಲೇ ಉತ್ತರ. ಈ ರಿವೇಂಜ್ ಭೀಮಾ ತೀರದಲ್ಲಿ ಕಾಮನ್. ಇತ್ತಿಚಿಗಷ್ಟೇ ಗ್ರಾಮ ಪಂಚಾಯತಿ ಅಧ್ಯಕ್ಷನೊಬ್ಬನ ಬರ್ಬರ ಹತ್ಯೆ ಮಾಸುವ ಮುನ್ನವೇ ಇಲ್ಲಿ ಇನ್ನೊಂದು ಹೆಣ ಬಿದ್ದಿದೆ. ಈ ಬಾರಿ ಹಂತಕರು ಯುವಕನೊಬ್ಬನನ್ನು ನಟ್ಟ ನಡು ಊರಿನಲ್ಲಿ ಕುರಿ ಕಡಿದಂತೆ ಕತ್ತರಿಸಿ ಹಾಕಿದ್ದಾರೆ. ಕಳೆದ ವಾರವಷ್ಟೇ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಪ್ರಭಾವಿ ಕಾಂಗ್ರೆಸ್(Congress) ಮುಖಂಡರೊಬ್ಬರನ್ನು ಚೌಡಾಪೂರದ ಬಸ್ ನಿಲ್ದಾಣದ ಬಳಿ ಹಾಡು ಹಗಲೇ ಇದೇ ರೀತಿ ಕೊಚ್ಚಿ ಕೊಚ್ಚಿ ಕೊಲೆ(Murder) ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಅದೇ ಥರದ ಇನ್ನೊಂದು ಘಟನೆ ಅದೇ ಭೀಮಾ ತೀರದ ಸಿದನೂರು ಗ್ರಾಮದಲ್ಲಿ ನಡೆದಿದೆ. ಈ ಬಾರಿ ಕೊಲೆ ನಡೆದಿದ್ದು ಕಲಬುರಗಿ(Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ, ಸಿದನೂರು ಎನ್ನುವ ಪುಟ್ಟ ಗ್ರಾಮದಲ್ಲಿ. ಅದೇ ಗ್ರಾಮದ ಯುವಕ ಬಲಭೀಮ ಸಗರ್ ಎನ್ನುವ 23 ವರ್ಷದ ಯುವಕ ದಸರಾ ಹಬ್ಬದ ನಿಮಿತ್ಯ ಸಿದನೂರು ಗ್ರಾಮಕ್ಕೆ ಆಗಮಿಸಿದ್ದಾನೆ. ಕಲಬುರಗಿ ನಗರದಲ್ಲಿ ತನ್ನ ಅಕ್ಕಳ ಮನೆಯಲ್ಲಿ ವಾಸವಿರುವ ಈ ಯುವಕ, ಹಬ್ಬದ ನಿಮಿತ್ಯ ಎರಡು ದಿನಗಳ ಹಿಂದಷ್ಟೇ ಊರಿಗೆ ಆಗಮಿಸಿದ್ದಾನೆ. ತನ್ನ ಕುಟುಂಬದ ಜೊತೆಗೆ ಹಯಬ್ಬ ಆಚರಿಸುವ ಕನಸ್ಸು ಕಂಡಿದ್ದ ಆತ ಹಬ್ಬಕ್ಕೂ ಮೊನ್ನವೇ ಮಸಣ ಸೇರಿದ್ದಾನೆ. ನಿನ್ನೆ ಅಂದ್ರೆ ಅಕ್ಟೋಬರ್ 20ನೇ ತಾರಿಖು ರಾತ್ರಿ 9 ಗಂಟೆಯ ಸುಮಾರಿಗೆ ಊರಿನ ಬೀದಿಯಲ್ಲಿ ನಾಲ್ವರು ಈತನಿಗೆ ಸುತ್ತುವರಿದು, ತಲವಾರ ಮತ್ತು ಕೊಡಲಿಯಿಂದ ಮನಬಂದಂತೆ ಕೊಚ್ಚಿ ಹಾಕಿದ್ದಾರೆ. ಹಂತಕರ ಆಕ್ರೋಶಕ್ಕೆ ಈತನ ಕತ್ತು ದೇಹದಿಂದ ಬೇರ್ಪಟ್ಟು ಹೋಗಿದೆ. 

ಇದನ್ನೂ ವೀಕ್ಷಿಸಿ: ಒಂದು ಸೇನೆ.. ಒಂದೇ ಟಾರ್ಗೆಟ್.. ಕಿಲ್ ಹಮಾಸ್..? ಏನದು NILI ಹುಲಿಗಳ ರಹಸ್ಯ..?

Related Video