Asianet Suvarna News Asianet Suvarna News

ಒಂದು ಸೇನೆ.. ಒಂದೇ ಟಾರ್ಗೆಟ್.. ಕಿಲ್ ಹಮಾಸ್..? ಏನದು NILI ಹುಲಿಗಳ ರಹಸ್ಯ..?

ಉಗ್ರ ಧ್ವಂಸಕ್ಕಾಗಿ ಹುಟ್ಟಿಕೊಂಡಿದೆ ಹೊಸ ಪಡೆ!
ಉಗ್ರ ನಾಶಕ್ಕೆ ಶಪಥ ತೊಟ್ಟಿವೆ ನೀಲಿ ಹುಲಿಗಳು!
ಗಾಜಾ ಪ್ರಜೆಗಳಿಗೆ ಇಸ್ರೇಲ್ ಫೈನಲ್ ವಾರ್ನಿಂಗ್!
 

ಹಮಾಸ್‌ ವಿರುದ್ಧ ಭೀಕರ ದಾಳಿ ನಡೆಸ್ತಾ ಇರೋ ಇಸ್ರೇಲ್‌, ಗಾಜಾ(Gaza) ಸೇರಿದಂತೆ ಹಲವು ಪ್ರದೇಶಗಳಲ್ಲಿ ದಾಂಗುಡಿ ಇಟ್ಟಿದೆ.  ಉಗ್ರರ ಸಂಪೂರ್ಣ ನಾಶಕ್ಕೆ ಸನ್ನದ್ಧವಾಗಿದೆ. ಭಾನುವಾರ ರಾತ್ರಿಯಿಡೀ ಇಸ್ರೇಲ್(Israel)  ವೈಮಾನಿಕ ದಾಳಿ ನಡೆಸಿತ್ತು. ಬರೀ ಈ ದಾಳಿಯಿಂದಾಗಿಯೇ, ಸುಮಾರು 50 ಕ್ಕೂ ಹೆಚ್ಚು ಪ್ಯಾಲೆಸ್ತೀನಿಗಳು ಹತರಾಗಿದ್ದಾರೆ ಅಂತ ಕೆಲವು ಮೂಲಗಳು ಹೇಳ್ತಿದ್ದಾವೆ. ಅಕ್ಟೋಬರ್ 7 ರಂದು ಶುರುವಾದ ಉಗ್ರರ ಅಟ್ಟಹಾಸಕ್ಕೆ, ಎರಡೇ ವಾರದಲ್ಲಿ ಅತ್ಯುಗ್ರ ಉತ್ತರ ಕೊಡೋಕೆ ಇಸ್ರೇಲ್ ಮುಂದಾಗಿದೆ.. ಇಸ್ಲಾಮಿಸ್ಟ್ ಚಳುವಳಿಯ ಹೆಸರಿನಲ್ಲಿ ಹಮಾಸ್(Hamas) ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ್ರು.. ಈ ದಾಳಿಯ ನಂತರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ಘನಘೋರ ಯುದ್ಧವನ್ನೇ ಸಾರಿದೆ. ಈ ತನಕ ಇರೋ ಮಾಹಿತಿಯ ಪ್ರಕಾರ, ಹಮಾಸ್‌ ನಡೆಸಿದ ರಕ್ಕಸ ದಾಳಿಯಲ್ಲಿ 1400 ಇಸ್ರೇಲಿಗಳು ಹತರಾಗಿದ್ದಾರೆ.. ಆದ್ರೆ, ಇಸ್ರೇಲ್‌ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಇದೆ.. ಒಟ್ಟಾರೆಯಾಗಿ ಈ ಯುದ್ಧ  ಅನ್ನೋ ಮಹಾವಿಪತ್ತು, ಹತ್ತಿರತ್ತಿರ 7 ಸಾವಿರಕ್ಕೂ ಹೆಚ್ಚು ಜೀವಗಳನ್ನ ಬಲಿ ತೆಗೆದುಕೊಂಡಿದೆ.. ಆದ್ರೆ ಇದು ಜಸ್ಟ್ ಎ ಬಿಗಿನಿಂಗ್.. ಅಸಲಿ ವಾರ್ ಈಗಿಂದ ಶುರು ಅಂತಿದೆ ಇಸ್ರೇಲ್.

ಇದನ್ನೂ ವೀಕ್ಷಿಸಿ:  ಇಸ್ರೇಲ್ ಹಮಾಸ್ ಯುದ್ಧ: ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಭೀಕರ ಕೃತ್ಯಗಳ ದೃಶ್ಯ ಪ್ರದರ್ಶನ

Video Top Stories