ಕೇವಲ ಒಂದಡಿ ಜಾಗಕ್ಕಾಗಿ ಕೊಚ್ಚಿ ಕೊಂದ ಕಿರಾತಕರು: ಮನೆ ಯಜಮಾನನ ಹತ್ಯೆಗೆ ಹೆಂಡತಿ ಮಕ್ಕಳ ಕಣ್ಣೀರು
ಅವರೆಲ್ಲ ನಟೋರಿಯಸ್ ರೌಡಿಗಳು.. ಏರಿಯಾದಲ್ಲಿದ್ದವರನ್ನ ಹೆದರಿಸುತ್ತಾ ಹವಾ ಮೇಂಟೇನ್ ಮಾಡಿದ್ರು.. ಜನರಿಗೆ ಒಂದಿಲ್ಲೊಂದು ರೀತಿ ದಿನನಿತ್ಯ ತೊಂದರೆ ನೀಡ್ತಿದ್ರು. ಇದೇ ಪುಡಿ ರೌಡಿಗಳು ಪಕ್ಕದ ಮನೆಯ ವ್ಯಕ್ತಿಯನ್ನೇ ಹೊಂಚು ಹಾಕಿ ಮಾರಕಾಸ್ತ್ರಗಳಿಂದ ಕೊಂದು ಹಾಕಿದ್ದಾರೆ.
ಅರ್ಧಕ್ಕೆ ನಿಂತ ಮನೆ ಕಟ್ಟಡ ಶವವಾಗಿ ಬಿದ್ದಿರುವ ವ್ಯಕ್ತಿ, ಮಡುಗಟ್ಟಿದ ರಕ್ತ, ಮಹಿಳೆಯರ ಆಕ್ರಂದನ. ಇಲ್ನೋಡಿ ಹೀಗೆ ಶವವಾಗಿ ಬಿದ್ದಿರೋ ಈತನ ಹೆಸರು ರಮೇಶ್. ಹಳೇ ದ್ವೇಷಕ್ಕೆ ಹೆಣವಾಗಿ ಬಿದ್ದಿದ್ದಾನೆ. ಮನೆ ಹಳೆಯದ್ದಾಗಿದ್ರಿಂದ ಕೆಡವಿ ಹೊಸ ಮನೆಯನ್ನ ಕಟ್ಟುತ್ತಿದ್ದ. ಆದ್ರೆ ಪಕ್ಕದ ಮನೆಯ ಪುಡಿರೌಡಿಗಳು ಕ್ಯಾತೆ ತೆಗೆದಿದ್ರು. ನಮಗೆ ಧೂಳು ಬರ್ತಿದೆ. ಯಾರನ್ನ ಕೇಳಿ ಮನೆ ಕೆಡವಿದ್ದೀಯಾ ಅಂತ ಜಗಳಕ್ಕೆ ನಿಂತಿದ್ರು. ಈ ಜಗಳವನ್ನು ಕೊನೆಗೂ ಕೊಲೆಯಲ್ಲೇ(Murder) ಅಂತ್ಯಗೊಳಿಸಿದ್ದಾರೆ. ಬೆಂಗಳೂರು(Bengaluru) ನಗರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಪಕ್ಕದಲ್ಲೇ ರಮೇಶನ ಬರ್ಬರ ಹತ್ಯೆ ನಡೆದಿದೆ. ಪಕ್ಕದ ಮನೆಯ ಕೃಷ್ಣಪ್ಪ ಅಲಿಯಾಸ್ ಜೋಸೆಫ್ ಕುಟುಂಬದವರು ಕೊಂದುಹಾಕಿದ್ದಾರೆ. ತಿಂಗಳ ಹಿಂದಷ್ಟೇ ರಮೇಶ್ ತನ್ನ ಹಳೆಯ ಮನೆಯನ್ನ ಕೆಡವಿ ಹೊಸ ಮನೆ ನಿರ್ಮಾಣ ಮಾಡಲು ಮುಂದಾಗಿದ್ರು. ನಿನ್ನೆ ಮನೆಯ ಅಡಿಪಾಯದ ಕಾಮಗಾರಿ ಮಾಡಿಸುತ್ತಿದ್ದ ರಮೇಶ್‌ನ ಮರ್ಡರ್ ನಡೆದಿದೆ. ಮೊದಲೇ ಹತ್ಯೆಗೆ ಹೊಂಚು ಹಾಕಿದ್ದ ಜೋಸೆಫ್ ಮತ್ತಾತನ ಮಕ್ಕಳಾದ ಮೋಸಿಸ್ ಮತ್ತು ಜಗದೀಶ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯ ದೃಶ್ಯ ಪಕ್ಕದ ಮನೆಯೊಂದರ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಮೊಸೀಸ್ ಹಾಗೂ ಜಗದೀಶ್ ಏರಿಯಾದ ಜನರಿಗೆ ಒಂದಿಲ್ಲೊಂದು ರೀತಿ ತೊಂದರೆ ನೀಡ್ತಿದ್ರು. ಕಳೆದ ವರ್ಷ ದೀಪಾವಳಿ ಹಬ್ಬದ ದಿನ ಪಟಾಕಿ ವಿಚಾರವಾಗಿ ಇದೇ ಮೊಸೀಸ್, ಜಗದೀಶ್, ಜೋಸೆಫ್ ಇದೀಗ ಹತ್ಯೆಯಾದ ರಮೇಶ್ ಪತ್ನಿ ಕಾವ್ಯಾ ಮೇಲೆ ಹಲ್ಲೆ ನಡೆಸಿದ್ದರಂತೆ. ಇದೇ ವಿಚಾರವಾಗಿ ಜೈಲಿಗೆ ಕೂಡ ಹೋಗಿ ಬಂದಿದ್ರು. ಇದೇ ವೈಷಮ್ಯ ಇಟ್ಟುಕೊಂಡು, ರಮೇಶ್ ಜೊತೆ ಕಿರಿಕ್ ತೆಗೆದಿದ್ದಾರೆ, ಧೂಳು ಬರ್ತಿದೆ.. ನಮಗೆ ಸೇರಿದ್ದ ಒಂದು ಅಡಿ ಜಾಗ ಒತ್ತುವರಿ ಮಾಡ್ಕೊಂಡಿದ್ದೀಯಾ ಎಂದು ಕಿರಿಕ್ ತೆಗೆದು ಕೊಲೆ ಮಾಡಿದ್ದಾರೆ ಅನ್ನೋದು ಕೊಲೆಯಾದ ರಮೇಶ್ ಕುಟುಂಬಸ್ಥರ ಆರೋಪ.
ಇದನ್ನೂ ವೀಕ್ಷಿಸಿ: ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಲ್ಲಿ ನೀರಿಗೆ ಹಾಹಾಕಾರ: ಗ್ಯಾರಂಟಿ ಯೋಜನೆ ಬೇಡ ನೀರು ಕೊಡಿ ಎಂದ ಶಾಸಕ