ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಲ್ಲಿ ನೀರಿಗೆ ಹಾಹಾಕಾರ: ಗ್ಯಾರಂಟಿ ಯೋಜನೆ ಬೇಡ ನೀರು ಕೊಡಿ ಎಂದ ಶಾಸಕ
ಮುಂಗಾರು ಮಳೆ ಕೈ ಕೊಟ್ಟಿದ್ದೇ ಕೊಟ್ಟಿದ್ದು.ರಾಜಧಾನಿ ಬೆಂಗಳೂರಲ್ಲಿ ಕುಡಿಯುವ ನೀರಿಗು ಹಾಹಾಕಾರ ಆರಂಭವಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಶಾಸಕ ಮುನಿರಾಜು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಬೇಸಿಗೆ ಆರಂಭಕ್ಕೂ ಮೊದಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ನೀರಿನ ಹಾಹಾಕಾರ ಶುರುವಾಗಿದೆ. ದಾಸರಹಳ್ಳಿ(Dasarahalli) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಂಇಐ ಲೇಔಟ್, ಅಬ್ಬಿಗೆರೆ, ಮೇದರಹಳ್ಳಿ, ಶೆಟ್ಟಿಹಳ್ಳಿ, ಚಿಕ್ಕಸಂದ್ರ, ಸಿಡೇದಹಳ್ಳಿ, ಪೀಣ್ಯಾ ಭಾಗದಲ್ಲಿ ನೀರಿನ ಸಮಸ್ಯೆ ಶುರುವಾಗಿದೆ. ಕಾವೇರಿ ಐದನೇ ಹಂತದ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ವಾರ್ಡ್ ಗಳಿಗೆ ಕಾವೇರಿ ನೀರು(Cauvery water) ಮರಿಚೀಕೆ ಆಗಿದೆ. ಇನ್ನೂ ಬೇಸಿಗೆ ಪ್ರಾರಂಭವಾಗಿಲ್ಲ, ಆಗಲೇ ನಮ್ಮ ಕ್ಷೇತ್ರದಲ್ಲಿ ನೀರಿಗೆ ಅಭಾವ ಶುರುವಾಗಿದೆ. ನೀರಿನ ಸಮಸ್ಯೆ ಬಗೆಹರಿಸಿ ಎಂದು ಬಿಜೆಪಿ ಶಾಸಕ ಮುನಿರಾಜು(BJP MLA Muniraju) ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಮ ವರ್ಗದವರೇ ಹೆಚ್ಚು.. ವಾರಕ್ಕೊಮ್ಮೆ ಕಾವೇರಿ ನೀರು ಬಿಡೋದ್ರಿಂದ, ಬಹುತೇಕ ಜನ ಆ ವೇಳೆ ಮನೆಯಲ್ಲಿರೋದಿಲ್ಲ. ಎಲ್ಲರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಕೇವಲ 10ರಿಂದ 20 ನಿಮಿಷ ಮಾತ್ರ ಕಾವೇರಿ ನೀರು ಬಿಡಲಾಗುತ್ತೆ. ಹೀಗಾಗಿ ಕಾವೇರಿ ನೀರು ಸಾಲದೆ ಟ್ಯಾಂಕರ್ ನೀರು ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೇಸಿಗೆ ಆರಂಭಕ್ಕೂ ಮೊದಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಅಭಾವ ಶುರುವಾಗಿದೆ. ಒಂದು ಕಡೆ ಮಳೆ ಕೊರತೆಯಾಗಿ KRSನಲ್ಲೂ ನೀರು ಕಡಿಮೆಯಾಗಿದೆ. ಇದರ ಮಧ್ಯೆ ಟ್ಯಾಂಕರ್ ನೀರಿನ ದರ ದುಪ್ಪಟ್ಟಾಗಿದ್ದು ಜನರು ಸಂಕಷ್ಟ ಪಡುವಂತಾಗಿದೆ.
ಇದನ್ನೂ ವೀಕ್ಷಿಸಿ: ಜನದಟ್ಟಣೆಯ ಬೆಂಗಳೂರಲ್ಲಿ ಮತ್ತೆ ಚಿರತೆ ಕಾಟ: ಅಪಾರ್ಟ್‌ಮೆಂಟ್‌ಗೆ ಚಿರತೆ ಎಂಟ್ರಿ, ಬೆಚ್ಚಿ ಬಿದ್ದ ಜನ !