ಪದೇ ಪದೇ ಅಂದರ್ ಆಗ್ತಿದ್ದವ ಮರ್ಡರ್..! ಅವನ ಕೊಲೆಗೆ ಕಾರಣ ಆತ ಕದ್ದ ಮಾಲು..!

ಜೊತೆಯಲ್ಲಿದ್ದವರೇ ಅವನನ್ನ ಕೊಂದು ಮುಗಿಸಿದ್ರು..!
ಕದ್ದ ಮಾಲು ಸರಿಯಾಗಿ ಹಂಚದಿದ್ದದ್ದೇ ತಪ್ಪಾಯ್ತು..!
ತಂಗಿ ಮೇಲೆ ಕಣ್ಣು ಹಾಕಿದ ಸ್ನೇಹಿತನನ್ನೇ ಮುಗಿಸಿಬಿಟ್ಟ..!

First Published Dec 24, 2023, 2:53 PM IST | Last Updated Dec 24, 2023, 2:53 PM IST

ಅವನು ಅದೆಂತ ಕತರ್ನಾಕ್‌ ಆಸಮಿ ಅಂದ್ರೆ ಆತ ರಾತ್ರಿ ಮನೆಯಿಂದ ಹೊರ ಬಿದ್ರೆ ಅಲ್ಲೋಂದು ಭರ್ಜರಿ ಕಳ್ಳತನ(Theft) ನಡೆದಿದೆ ಅಂತಾನೆ ಅರ್ಥ. ಆತ ಜನರು ಮಲಗಿದ ಮೇಲೆ ಆಕ್ಟಿವ್‌ ಆಗ್ತಿದ್ದ. ಆತ ನಡುರಾತ್ರಿಯಲ್ಲಿ ಯಾವ ಏರಿಯಾಗೆ ಎಂಟ್ರಿ ಕೊಡ್ತಾನೊ ಅಲ್ಲಿ ಮರುದಿನ ಸದ್ದು ಗದ್ದಲ ಪಕ್ಕಾ. ಇನ್ನೂ ಈತ ಕದಿಯೋದಕ್ಕಿಂತ ತಗ್ಲಾಕಿಕೊಂಡಿದ್ದೇ ಹೆಚ್ಚು. ಆದ್ರೆ ಪ್ರತೀ ಬಾರಿ ಸಿಕ್ಕಿಬಿದ್ದು ಜನರಿಂದಲೇ ಒದೆ ತಿಂದ್ರೂ ತನ್ನ ಖಸಬನ್ನ ಮಾತ್ರ ಬಿಟ್ಟಿರಲಿಲ್ಲ. ಇಂಥವನು ಆವತ್ತು ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ನಡುರಾತ್ರಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಆತನನ್ನ ಕೊಂದು ಹಾಕಿದ್ದರು. ಸಾಹೀಲ್‌ ಕೊಲೆ ಮಾಡಿದ ಹುಡುಗರೇನೋ ಪೊಲೀಸ್‌(Police) ಕೈಗೆ ಸಿಕ್ಕಿಬಿದ್ದಿದ್ದರು. ಅಚ್ಚರಿಯ ವಿಚಾರ ಅಂದ್ರೆ ಬರ್ಬರವಾಗಿ ಸಾಹಿಲ್‌ ಕೊಲೆ ಮಾಡಿದವರು ಸಾಹಿಲ್‌ ಸ್ನೇಹಿತರೇ ಅನ್ನೋದು. ಫುಲ್ ಟೈಂ ಕಳ್ಳನ್ನಾಗಿದ್ದ ಸಾಹೀಲ್‌. ಕದ್ದಿದ್ದಕ್ಕಿಂತ ತಗ್ಲಾಕಿಕೊಂಡಿದ್ದೇ ಹೆಚ್ಚು. ಆದ್ರೆ ಅವನ ಗ್ಯಾಂಗ್ ಈ ಖಸಬಿನಲ್ಲಿ ಸಖತ್ ಪರ್ಫೆಕ್ಟ್... ಕದ್ದ ಮಾಲು ಹಂಚಿಕೆ ಪಕ್ಕಾ ಆಗಬೇಕು ಅನ್ನೋ ಬಯಕೆ ಅವರದ್ದು ಆದ್ರೆ ಈ ಸಾಹೀಲ್ ತನ್ನ ಹುಡುಗರಿಗೆ ಪುಡಿಗಾಸು ಕೊಟ್ಟು ಮಿಕ್ಕಿದನ್ನೆಲ್ಲಾ ಆತನೇ ಇಟ್ಟುಕೊಂಡುಬಿಡ್ತಿದ್ದ.. ಅಷ್ಟೇ ಅಲ್ಲ ಸಾಹೀಲ್ ತನ್ನ ಶಿಷ್ಯನ ಸಹೋದರಿಯ ಮೇಲೇ ಕಣ್ಣು ಹಾಕಿಬಿಟ್ಟಿದ್ದ. ಮೊದಲೇ ಇವನಿಂದ ಬೇಸತ್ತಿದ್ದ ಈತನ ಶಿಷ್ಯರೇ ಅವನಿಗೆ ಮುಹೂರ್ತ ಇಟ್ಟುಬಿಟ್ಟಿದ್ರು. ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಯುವಕ ಹತ್ಯೆಯಾಗಿ ಹೋದ. ಆತನ ವೃದ್ದ ತಾಯಿ ಅನಾಥವಾದಳು. ಇನ್ನೂ ಈತನನ್ನ ಕೊಂದವರು ಜೈಲು ಪಾಲಾಗಿದ್ದಾರೆ.  ಇವರ ಜೊತೆಗೆ ಸಹೋದರಿಯನ್ನು ಚುಡಾಯಿಸಿದ ಕಾರಣ ಆತನ ಉಸಿರು ನಿಲ್ಲಿಸೋಕೆ ಸಾಥ್ ನೀಡಿದವರ ಪಾಡೂ ಇದೇ ಆಗಿದೆ. 

ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಮಾತಿನ ಮರ್ಮವೇನು..? ಹಿಜಾಬ್ ನಿಷೇಧ ವಾಪಸ್ ಬಗ್ಗೆ ಕೈಪಾಳಯದಲ್ಲೇ ಕನ್ಫ್ಯೂಷನ್!?

Video Top Stories