ಸಿಎಂ ಸಿದ್ದರಾಮಯ್ಯ ಮಾತಿನ ಮರ್ಮವೇನು..? ಹಿಜಾಬ್ ನಿಷೇಧ ವಾಪಸ್ ಬಗ್ಗೆ ಕೈಪಾಳಯದಲ್ಲೇ ಕನ್ಫ್ಯೂಷನ್!?

ಸಿಎಂ ಹೇಳಿಕೆ ಹಿಂದೆ ಅಡಗಿದೆಯಾ ನಿಗೂಢ ರಹಸ್ಯ..?!
ಸಿಎಮ್ ಸಿದ್ದರಾಮಯ್ಯ ಆಡಿದ 1 ಮಾತಲ್ಲಿ 3 ಗುಟ್ಟು!
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದೇಕೆ ಅದೊಂದು ಹೇಳಿಕೆ?

First Published Dec 24, 2023, 1:10 PM IST | Last Updated Dec 24, 2023, 1:10 PM IST

ಕಳೆದ ಸಲ, ಬಿಜೆಪಿ(BJP) ಸರ್ಕಾರ ಆಡಳಿತದಲ್ಲಿದ್ದಾಗ, ರಾಜ್ಯದಲ್ಲೊಂದು ದೊಡ್ಡ ಧರ್ಮಸಂಘರ್ಷವೇ ಘಟಿಸಿತ್ತು. ಅದೇ, ಹಿಜಾಬ್ ವಿವಾದ. ಉಡುಪಿಯ ಕೆಲ ವಿದ್ಯಾರ್ಥಿನಿಯರಿಂದ ಆರಂಭವಾದ ವಿವಾದ, ನೋಡನೋಡುತ್ತಲೇ ನ್ಯಾಷನಲ್ ಇಶ್ಯು ಆಗೋಗಿತ್ತು. ಈಗ  ವಿವಾದ, ಸುಪ್ರೀಂ ಅಂಗಳದಲ್ಲಿ ತೀರ್ಮಾನವಾಗ್ತಾ ಇದೆ. ಆದ್ರೆ, ಇದರ ಮಧ್ಯೆ ಸಿದ್ದರಾಮಯ್ಯನೋರು(Siddaramaiah) ಕೊಟ್ಟ ಹೇಳಿಕೆಯಿಂದ ಆ ವಿವಾದ ಮತ್ತೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕಳೆದ ಶುಕ್ರವಾಗ, ನಂಜನಗೂಡಿನ ಕವಲಂದೆದಲ್ಲಿ  ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗವಹಿಸಿದ್ರು. ಹೀಗಿದ್ದಾಗಲೇ, ಸಿಎಂ ಮಾತನಾಡುವ ವೇಳೆ ಸಾರ್ವಜನಿಕರು ಹಿಜಾಬ್ ಕುರಿತಂತೆ ಪ್ರಶ್ನೆ ಮಾಡಿದ್ರು. ಸಾರ್ವಜನಿಕರಿಂದ ಬಂದ ಪ್ರಶ್ನೆಗೆ ಉತ್ತರಿಸಿದ ಸಿಎಂ, ನೋ ಹಿಜಾಬ್ ಬ್ಯಾನ್(Hijab ban), ಎಲ್ಲರು ಹಿಜಾಬ್ ಹಾಕಿಕೊಂಡು ಹೋಗಬಹುದು. ಆದೇಶ ಹಿಂಪಡೆಯಲು ಹೇಳಿದ್ದೇನೆ ಅಂತ ಹೇಳಿದ್ರು. ಸಿದ್ದರಾಮಯ್ಯನೋರು ಹೇಳಿದ್ದಿಷ್ಟು. ವಸ್ತ್ರದ ವಿಚಾರದಲ್ಲಿ, ಆಹಾರದ ವಿಚಾರದಲ್ಲಿ ಯಾವ್ದೂ ತಪ್ಪಲ್ಲ.. ಹಾಗಾಗಿ, ಹಿಜಾಬ್ ಪ್ರಕರಣವನ್ನ ಹಿಂಪಡೆಯೋಕೆ ನಮ್ಮ ಸರ್ಕಾರ ಸಿದ್ಧವಾಗಿದೆ ಅಂತ ಹೇಳಿದ್ರು. ಸಿದ್ದರಾಮಯ್ಯನೋರೇನೋ ವೇದಿಕೆ ಮೇಲೆ , ಬಿಜೆಪಿ ಸರ್ಕಾರದಲ್ಲಾಗಿದ್ದ ಹಿಜಾಬ್ ನಿಷೇಧವನ್ನ ಹಿಂಪಡೀತಿವಿ ಅಂತ ಹೇಳಿದ್ರು. ಆದ್ರೆ ಬಿಜೆಪಿ ಸರ್ಕಾರವಿದ್ದಾಗ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವ್ರು, ಅಸಲಿಗೆ ಹಿಜಾಬ್ ನಿಷೇಧವೇ ಆಗಿರ್ಲಿಲ್ಲ. ಸಿದ್ದರಾಮಯ್ಯನೋರು ಅರ್ಥ ಮಾಡ್ಕೊಂಡಿರೋದೇ ತಪ್ಪು ಅನ್ನೋ ಹಾಗೆ ಮಾತಾಡಿದ್ರು.

ಇದನ್ನೂ ವೀಕ್ಷಿಸಿ:  ಪುತ್ತಿಗೆ ಮಠದ ಸಾರಥ್ಯದಲ್ಲಿ ಕೋಟಿಗೀತಾ ಲೇಖನಯಜ್ಞ: ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಗೀತೋತ್ಸವ