ಸುಪಾರಿ ಕೊಟ್ಟು ಮಗನನ್ನೇ ಕೊಲ್ಲಿಸಿದ ತಾಯಿ: ಹೆತ್ತ ಮಗನಿಗೇ ಮುಹೂರ್ತ ಇಟ್ಟಿದ್ಯಾಕೆ ?

ಲಿಕ್ಕರ್ ಮಗನ ಕೊಲೆಯ ಹಿಂದಿನ ರಹಸ್ಯ ಏನು ?
ಮಗನ ಕಥೆ ಮುಗಿಸಿದ ತಾಯಿ ನಾಟಕವಾಡಿದ್ಲು..!
ಕೊಲೆ ರಹಸ್ಯ ಬಿಚ್ಚಿಟ್ಟಿತ್ತು ಮೊಬೈಲ್ ಲೊಕೇಷನ್

Share this Video
  • FB
  • Linkdin
  • Whatsapp

ಭೂಮಿಯ ಮೇಲೆ ಕೆಟ್ಟ ಮಗ ಇರಬಹುದು ಆದ್ರೆ ಕೆಟ್ಟ ತಾಯಿ ಇರೋಕೆ ಸಾಧ್ಯವಿಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಬ್ಬಳು ತಾಯಿ(Mother) ತಾನು ಜನ್ಮಕೊಟ್ಟ ಮಗನಿಗೆ ಮೃತ್ಯುವಾಗಿದ್ದಾಳೆ. ಮುದ್ದಾಡಿ ಬೆಳೆಸಿದವಳೆ ಹೆತ್ತ ಮಗನ ಹತ್ಯೆಗೆ ಸುಪಾರಿ ನೀಡಿ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದ್ದಾಳೆ. ಒಂದು ಕೊಲೆ(murder) ನಡೆಯುತ್ತೆ ಅಂದ್ರೆ ಅದರ ಹಿಂದೆ ನೂರೆಂಟು ಕಾರಣಗಳು ಇರ್ತವೇ. ಏನೇ ಕಾರಣವಿದ್ರು ತಾಯಿ ಎಂದಿಗೂ ಮಗನ ಸಾವು ಬಯಸೋದಿಲ್ಲ. ಆದ್ರೆ ಇಲ್ಲಾಗಿದ್ದೆ ಬೇರೆ ತಾಯಿಯೇ ಮಗನ ಹತ್ಯೆಗೆ ಸುಪಾರಿ ಕೊಟ್ಟಿದ್ದಳು. ಸುಪಾರಿ ಪಡೆದವರು ಆತನ ಗೆಳೆಯರೇ ಅನ್ನೋದೆ ಶಾಕಿಂಗ್‌ ಸಂಗತಿ. ಮಗನನ್ನ ಬದಲಿಸೋದಕ್ಕೆ ಹೋದ ತಾಯಿ ಆತನನ್ನ ಮುಗಿಸಿಯೇ ಬಿಟ್ಟಿದ್ದಾಳೆ. ಈ ಮೂಲಕ ಈ ಇಳಿ ವಯಸ್ಸಿನಲ್ಲಿ ಆಕೆ ಜೈಲು ಸೇರುತ್ತಿರೋದು ನಿಜಕ್ಕೂ ವಿಪರ್ಯಾಸ.

ಇದನ್ನೂ ವೀಕ್ಷಿಸಿ: ನಿಬ್ಬೆರಗಾಗಿಸುತ್ತೆ ಇಸ್ರೇಲಿನ ಮಹಿಳೆಯರ ಪರಾಕ್ರಮ! ದೇಶಕ್ಕಾಗಿ ಜೀವ ಬಿಟ್ಟುಳು 19 ವರ್ಷದ ಯುವತಿ!

Related Video