Asianet Suvarna News Asianet Suvarna News

ದಲಿತ ಹುಡುಗನನ್ನ ಪ್ರೀತಿಸಿ ಪ್ರಾಣ ಬಿಟ್ಟಳು: ಕೊನೆ ಘಳಿಗೆಯಲ್ಲಿ ಆಕೆ ಅಪ್ಪನಿಗೆ ಹೇಳಿದ್ದೇನು ?

ದಲಿತ ಯುವಕನನ್ನು ಪ್ರೀತಿಸಿದಳು ಎಂಬ ಕಾರಣಕ್ಕಾಗಿ ಹೆತ್ತ ಮಗಳನ್ನು ತಂದೆಯೇ ಕೊಲೆಗೈದಿದ್ದಾನೆ.
 

First Published Jun 21, 2023, 12:57 PM IST | Last Updated Jun 21, 2023, 12:57 PM IST

ಆಕೆಗಿನ್ನು 17 ವರ್ಷ ಸೆಕೆಂಡ್ ಇಯರ್ ಪಿಯುಸಿ ಓದುತ್ತಿದ್ದಳು. ಬಡ ಕುಟುಂಬದಲ್ಲಿ ಹುಟ್ಟಿದ್ದರೂ ಆಕೆಯನ್ನ ಹೆತ್ತವರು ಕಷ್ಟಪಟ್ಟು ಓದಿಸುತ್ತಿದ್ರು. ಆಕೆ ಕೂಡ ತುಂಬಾನೇ ಚೆನ್ನಾಗಿ ಓದುತ್ತಿದ್ದಳು. ಆದ್ರೆ ಪರಿಸ್ಥಿತಿ ಹೀಗಿರುವಾಗ್ಲೇ ಆಕೆಯ ಹೆತ್ತವರು ಆಕೆಗೆ ಮದುವೆ ಮಾಡುವ ನಿರ್ಧಾರ ಮಾಡಿದ್ರು. ಸಂಬಂಧದಲ್ಲೇ ಬ್ಯಾಂಕ್ ಕೆಲಸದಲ್ಲಿದ್ದವನ ಜೊತೆ ಎಂಗೇಜ್‌ಮೆಂಟ್ ಕೂಡ ಮಾಡಿದ್ರು. ಆದ್ರೆ ಆಕೆ ಕೊಲೆಯಾಗಿ ಹೋಗಿದ್ದಾಳೆ. ಕೊಲೆ ಮಾಡಿದವರು ಆಕೆಯ ತಂದೆ ಮತ್ತು ಅಣ್ಣನೇ, ಅಷ್ಟಕ್ಕೂ ಮದುವೆಯ ತಯಾರಿಯಲ್ಲಿದ್ದ ಆ ಕುಟುಂಬ ಇದ್ದಕ್ಕಿದ್ದಂತೆ ಮನೆ ಮಗಳನ್ನ ಕೊಂದಿದೆ. ನೇತ್ರಾವತಿ ಸತ್ತು 3 ಗಂಟೆಗಳಲ್ಲಿ ಆಕೆಯ ಮನೆಯವರು ಮೃತದೇಹವನ್ನ ಸುಟ್ಟುಬಿಟ್ಟಿದ್ರು. ಇದು ಗ್ರಾಮಸ್ಥರಿಗೆ ಅನುಮಾನ ಮೂಡಿಸುವಂತೆ ಮಾಡಿತ್ತು. ಗ್ರಾಮದಲ್ಲೆಲ್ಲಾ ಗುಸು ಗುಸು ಶುರುವಾಯ್ತು. ಹೆತ್ತವರೇ ನೇತ್ರಾವತಿಯನ್ನ ಕೊಂದಿರಬಹುದು ಅನ್ನೋ ಅನುಮಾನಗಳು ಹುಟ್ಟಿಕೊಂಡವು. ಪರಿಸ್ಥಿತಿ ಹೇಗಿರುವಾಗ್ಲೇ ಆವತ್ತು ಬೀಟ್ ಪೊಲೀಸರು ಆ ಗ್ರಾಮಕ್ಕೆ ವಿಸಿಟ್ ಕೊಟ್ರು. ಈ ಸುದ್ದಿ ಪೊಲೀಸರ ಕಿವಿಗೂ ಬಿತ್ತು. ಆಗಲೇ ನೇತ್ರಾವತಿ ಸಾವಿನ ರಹಸ್ಯ ಬಯಲಾಗಿದೆ.

ಇದನ್ನೂ ವೀಕ್ಷಿಸಿ: ಭಾರತ ದ್ರೋಹಿಗಳ ನಿಗೂಢ ಸಾವು: ದೇಶದ ವಿರುದ್ಧ ಕತ್ತಿ ಮಸೆದವರು ಇದ್ದಕ್ಕಿದ್ದಂತೆ ಹೆಣವಾದರು !

 

Video Top Stories