Asianet Suvarna News Asianet Suvarna News

ಭಾರತ ದ್ರೋಹಿಗಳ ನಿಗೂಢ ಸಾವು: ದೇಶದ ವಿರುದ್ಧ ಕತ್ತಿ ಮಸೆದವರು ಇದ್ದಕ್ಕಿದ್ದಂತೆ ಹೆಣವಾದರು !

ಪರಂಜಿತ್ ಪಂಜಾವರ್ ಪಾಕಿಸ್ತಾನದಲ್ಲಿ ಹತ್ಯೆ
ಅವತಾರ್ ಸಿಂಗ್ ಬ್ರಿಟನ್‌ನಲ್ಲಿ ನಿಗೂಢ ಸಾವು
ಕೆನಡಾದಲ್ಲಿ ಹರ್ದೀಪ್ ನಿಜ್ಜಾರ್ ಹತ್ಯೆ
 

First Published Jun 21, 2023, 12:40 PM IST | Last Updated Jun 21, 2023, 12:40 PM IST

ಖಲಿಸ್ತಾನ್ ಸಂಘಟನೆಯ ಭಯೋತ್ಪಾದಕರು ಭಾರತದಲ್ಲಿ ವಿಚಿತ್ರವಾಗಿ ಪ್ರತಿಭಟನೆ ನಡೆಸುವುದು, ದೇಶದ ವಿರುದ್ಧ ಸಂಚು ರೂಪಿಸುವುದು, ಭಾರತದ ಗೌರವವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡುವುದು, ಅಮಾಯಕ ಯುವಕರ ತಲೆ ಕೆಡಿಸಿ, ದೇಶದ್ರೋಹ ಚಟುವಟಿಕೆಗಳಲ್ಲಿ ತೊಡಗಿಸುವುದನ್ನು ಮಾಡುತ್ತಿದ್ದರು. ಕೆಲವು ತಿಂಗಳ ಹಿಂದೆ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಸಿಖ್ ಉಗ್ರ ಅಮೃತ್ಪಾಲ್ ಸಿಂಗ್ ಈಗ ಜೈಲಿನಲ್ಲಿ ಇದ್ದಾನೆ. ಆದ್ರೆ ಇದ್ದಕ್ಕಿದಂತೆ ಪರಂಜಿತ್ ಪಂಜಾವರ್, ಅವತಾರ್ ಸಿಂಗ್ , ಕೆನಡಾದಲ್ಲಿ ಹರ್ದೀಪ್ ನಿಜ್ಜಾರ್ ಹತ್ಯೆ ನಡೆದಿದೆ. ಇದೀಗ ಈ ಎಲ್ಲ ಹತ್ಯೆಗಳ ಹಿಂದೆ ಭಾರತದ ಕೈವಾಡ ಇದೆ ಎಂಬ ಆರೋಪ ಮಾಡಲಾಗುತ್ತಿದೆ. ಇವರೆಲ್ಲಾ ಪಾಕಿಸ್ತಾನ, ಬ್ರಿಟನ್‌, ಕೆನಾಡದಲ್ಲಿ ಹತ್ಯೆಯಾಗಿದ್ದಾರೆ. 

ಇದನ್ನೂ ವೀಕ್ಷಿಸಿ: ಎಂ.ಬಿ.ಪಾಟೀಲ್ Vs ಪ್ರತಾಪ್ ಸಿಂಹ: ಕಟ್ಟಾ ಕಾಂಗ್ರೆಸಿಗನಿಗೂ ಕಟ್ಟರ್ ಕೇಸರಿ ಕಲಿಗೂ ಏನಿದು ದುಷ್ಮನಿ..?