ಹಾಡಹಗಲಲ್ಲೇ ಅಧ್ಯಕ್ಷನ ಕಥೆ ಮುಗಿಸಿದ್ರು..! 30 ವರ್ಷದ ವೈಷಮ್ಯ ಕೊಲೆಯಿಂದ ಪುನಾರಂಭ..!

ಅವನ ಹೆಣ ಹಾಕಲು ಕಾದಿತ್ತು ಇಡೀ ಕುಟುಂಬ..!
ದೇವರಂತಿದ್ದವನನ್ನೇ ಕೊಂದು ಮುಗಿಸಿದ್ದು ಯಾಕೆ?
ಸಾಯೋದ್ರಲ್ಲಿ ಸೇಡು ತೀರಿಸಿಕೊಳ್ತೀನಿ ಅಂದ ತಂದೆ..!

Share this Video
  • FB
  • Linkdin
  • Whatsapp

ಅವನು ಗ್ರಾಮ ಪಂಚಾಯ್ತಿ ಅಧ್ಯಕ್ಷ. ಕಾಂಗ್ರೆಸ್‌ ಕಾರ್ಯಕರ್ತ. ತನ್ನ ಜನರಿಗಾಗಿ ಜೀವ ಕೊಡೋಕು ರೆಡಿ ಇದ್ದವ. ಕಷ್ಟ ಅಂತ ಬಂದವರಿಗೆ ಆತ ಎಂದೂ ಬರಿಗೈಯಲ್ಲಿ ಕಳಿಸದಾತ ಅಲ್ಲ. ಇವತ್ತು ತನ್ನದೇ ಗ್ರಾಮದಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಹಾಡಹಗಲಲ್ಲೇ ಗ್ರಾಮ ಪಂಚಾಯ್ತಿ ಅಧ್ಯಕ್ಷನೊಬ್ಬನನ್ನ ಭೀಕರವಾಗಿ ಕೊಂದು ಮುಗಿಸಿದ್ದಾರೆ. ಆದ್ರೆ ಅವನ ಕೊಲೆಗೆ(Murder) ಕಾರಣ ಹುಡುಕ ಹೊರಟ ಪೊಲೀಸರಿಗೆ (Police) ಸಿಕ್ಕಿದ್ದು 30 ವರ್ಷದ ದ್ವೇಷದ ಕಥೆ. ಅವನ ಕುಟುಂಬಕ್ಕೂ ಮತ್ತೊಂದು ಕುಟುಂಬಕ್ಕೂ ಇದ್ದ ವೈಷಮ್ಯದ ಕಾರಣಕ್ಕೆ ಅಲ್ಲೊಂದು ಹೆಣ ಬಿದ್ದಿದೆ. ಗೌಡಪ್ಪ ಒಬ್ಬ ಪ್ರಭಾವಿ ಮಾತ್ರವಷ್ಟೇ ಅಲ್ಲ. ಒಬ್ಬ ಒಳ್ಳೆ ಮನುಷ್ಯ ಕೂಡ ಆಗಿದ್ದ. ಅದು 30 ವರ್ಷದ ದ್ವೇಷ. ಬಿರಾದಾರ ಮತ್ತು ಯಂಕಂಚಿ ಅನ್ನೋ ಎರಡು ಕುಟುಂಬಗಳ ನಡುವೆ ಸಣ್ಣ ಗಲಾಟೆಯಿಂದ ಶುರುವಾದ ದ್ವೇಷ ಇವತ್ತು ಮರ್ಡರ್ ಮಾಡುವ ತನಕ ಬಂದು ನಿಂತಿದೆ. ಆವತ್ತು ಗೌಡಪ್ಪ ಮೊದಲ ಬಾರಿಗೆ ಎಲೆಕ್ಷನ್ನಲ್ಲಿ ಗೆದ್ದಾಗ ಯಂಕಂಚಿ ಕುಟುಂಬ ಗೌಡಪ್ಪನ ಕುಟುಂಬದ ಮೇಲೆ ಅಟ್ಯಾಕ್ ಮಾಡಿತ್ತು. ಆಗ ಆರಂಭವಾದ ಈ ಫೈಠ್ ಕೇವಲ ಜಗಳಗಳೇ ಅಂತ್ಯವಾಗ್ತಿತ್ತು. ಆದ್ರೆ ಗೌಡಪ್ಪನ ಹೆಣ ಬೀಳೋ ಮೂಲಕ ಭೀಮಾ ತೀರದಲ್ಲಿ ಮತ್ತೊಂದು ಸರಣಿ ಹತ್ಯಾಖಾಂಡ ನಡೆಯೋ ಮುನ್ಸೂಚನೆ ಕೊಡ್ತಿದೆ.

ಇದನ್ನೂ ವೀಕ್ಷಿಸಿ:  42 ಕೋಟಿಯ ಹಿಂದೆ ಪ್ರಭಾವಿ ರಾಜಕಾರಣಿ..ಯಾರದು ಕೋಟಿ ಕುಬೇರ..? ಯಾರಿಗೆ ಕಾದಿದೆ ಫಜೀತಿ..?

Related Video