42 ಕೋಟಿಯ ಹಿಂದೆ ಪ್ರಭಾವಿ ರಾಜಕಾರಣಿ..ಯಾರದು ಕೋಟಿ ಕುಬೇರ..? ಯಾರಿಗೆ ಕಾದಿದೆ ಫಜೀತಿ..?
ಮಂಚದ ಕೆಳಗೆ 22 ಬಾಕ್ಸ್..ಐಟಿ ದಾಳಿ ವೇಳೆ ಸಿಕ್ದಿದ್ದು 42 ಕೋಟಿ..!
ಪಂಚರಾಜ್ಯ ಚುನಾವಣೆಗೆ ರಾಜ್ಯದಿಂದ ಹೋಗ್ತಿದ್ಯಾ ಕಂತೆ ದುಡ್ಡು..?
42 ಕೋಟಿಯ ಹಿಂದೆ ಪ್ರಭಾವಿ ರಾಜಕಾರಣಿ..ಯಾರದು ಕುಬೇರ..?
ಮಲಗೋ ಮಂಚದ ಕೆಳಗೆ ಕಂತೆ ಕಂತೆ ದುಡ್ಡಿನ ರಾಶಿ. ಮಂಚದ ಕೆಳಗೆ 22 ಬಾಕ್ಸ್.. ಆ 22 ಬಾಕ್ಸ್‌ಗಳಲ್ಲಿ ಐನೂರರ ಗರಿ ಗರಿ ನೋಟುಗಳು. ಎಣಿಸಿದ್ರೆ ಬರೋಬ್ಬರಿ 42 ಕೋಟಿ ರೂಪಾಯಿ. ಇದು ವಸೂಲಿ ದುಡ್ಡು ಅಂತ ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ ಆರೋಪಿಸ್ತಾ ಇದ್ದಾರೆ. ಇದು ಸಿಕ್ಕಿರೋದು ಅಂಬಿಕಾಪತಿ ಅನ್ನೋ ಗುತ್ತಿಗೆದಾರ ಕಮ್ ಬಿಲ್ಡರ್ ಮನೆಯಲ್ಲಿ. ಬೆಂಗಳೂರಿನಲ್ಲಿ(Bengaluru ) ಗುರುವಾರ ಮತ್ತು ಶುಕ್ರವಾರ ಐಟಿ ದಾಳಿ ನಡೆಸಿದ್ದು, ಈ ವೇಳೆ ಕೋಟಿ ಕುಬೇರನ ಕೋಟೆಯೊಳಗೆ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಬೆಂಗಳೂರಿನ ಕಾವಲ್‌ಭೈರಸಂಧ್ರದ ಗಣೇಶ ಬ್ಲಾಕ್‌ನಲ್ಲಿರುವ ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ(Income Tax Department) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂಬಿಕಾಪತಿ ಮಗನ ಮನೆ, ಆರ್.ಟಿ ನಗರದ ವೈಟ್ ಹೌಸ್'ನಲ್ಲಿರುವ ಮನೆ, ಮಾನ್ಯತಾ ಟೆಕ್ ಪಾರ್ಕ್ ಬಳಿ ಇರೋ ಮಗಳ ಮನೆ.. ಹೀಗೆ ಅಂಬಿಕಾಪತಿಗೆ ಸೇರಿದ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ತಲಾಷ್ ನಡೆಸಿದ್ದಾರೆ. ಅಂದ ಹಾಗೆ ಈ 42 ಕೋಟಿ ರೂಪಾಯಿ ಸಿಕ್ಕಿರೋದು ಅಂಬಿಕಾಪತಿಯ ಸಂಬಂಧಿ ಪ್ರದೀಪ್ ಎಂಬುವರ ಮನೆಯಲ್ಲಿ ಅನ್ನೋ ಮಾಹಿತಿ ಲಭ್ಯವಾಗಿದೆ. ಗುತ್ತಿಗೆದಾರ ಅಂಬಿಕಾಪತಿ(Ambikapati) ಕೋಟೆಯಲ್ಲಿ ಸಿಕ್ಕಿದ 42 ಕೋಟಿ ರೂಪಾಯಿಯ ಸುತ್ತ ನೂರೆಂಟು ಪ್ರಶ್ನೆಗಳು ಎದ್ದಿವೆ. ದುಡ್ಡಿನ ರಾಶಿಯನ್ನು ಐಟಿ ಪತ್ತೆ ಮಾಡ್ತಿದ್ದಂತೆ ಈ ದುಡ್ಡಿನ ಅಸಲಿ ಮಾಲಿಕ ಯಾರು ಅನ್ನೋ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿದೆ. ಇದು ಬೆಂಗಳೂರಿನ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ ಹಣ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಇದನ್ನೂ ವೀಕ್ಷಿಸಿ: ಆಂಧ್ರಕ್ಕೆ ಸಮರ್ಪಕ ನೀರು ರಾಜ್ಯದ ರೈತರಿಗೆ ಕಣ್ಣೀರು: ಮೆಣಸಿನಕಾಯಿ, ಹತ್ತಿ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ