10 ಎಕರೆ ಜಮೀನು ಕೊಲೆಗೆ ಕಾರಣವಾಯ್ತಾ..? ನಾಯ್ಕೋಡಿ VS ಪಾಟೀಲ್ ದ್ವೇಷದ ಕಿಚ್ಚು..!

ನಡುರಸ್ತೆಯಲ್ಲೇ ವಕೀಲನನ್ನ ಕೊಚ್ಚಿ ಕೊಚ್ಚಿ ಕೊಂದರು..!
2 ಕುಟುಂಬದ ನಡುವಿನ ವೈಷಮ್ಯ ಎಂಥದ್ದು  ಗೊತ್ತಾ..?
ಮೂರು ಹೆಣ ಹಾಕಿದಕ್ಕೆ ಜಮೀನನ್ನೇ ಕಬ್ಜ ಮಾಡಿದ್ರು..!

First Published Dec 10, 2023, 12:26 PM IST | Last Updated Dec 10, 2023, 12:26 PM IST

ಆತ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನಿನ ಒಡೆಯ. ಮೇಲಾಗಿ ವೃತ್ತಿಯಲ್ಲಿ ವಕೀಲ(Lawyer). ಆದ್ರೆ ಆವತ್ತು ತನ್ನ ಮನೆಯಿಂದ ಕೋರ್ಟ್ಗೆ ಹೋಗುವಾಗ್ಲೇ ಅವರನ್ನ ಹಂತಕರು ಕೊಚ್ಚಿ ಕೊಚ್ಚಿ ಕೊಲೆ(Murder) ಮಾಡಿಬಿಡ್ತಾರೆ. ಹಾಡಹಗಲಲ್ಲಿ, ನಡುರಸ್ತೆಯಲ್ಲಿ ಆದ ಆ ಕೊಲೆಯನ್ನ ಕಂಡು ಅಲ್ಲಿನ ಜನ ಒಂದು ಕ್ಷಣ ಶಾಕ್ ಆಗಿದ್ರು. ಇನ್ನೂ ವಕೀಲರ ಕೊಲೆ ಕೇಸ್ ಬೆನ್ನುಬಿದ್ದ ಪೊಲೀಸರು(Police) ಕೊಲೆಗಾರರನ್ನ ಘಟಅನೆ ನಡೆದ ಕೆಲವೇ ಗಂಟೆಗಳಲ್ಲಿ ಅರೆಸ್ಟ್ ಮಾಡಿದ್ರು. ನಂತರ ವಿಚಾರಣೆ ಶುರು ಮಾಡಿದ್ರು. ಯಾವಾಗ ಆರೋಪಿಗಳ ವಿಚಾರಣೆ ಮಾಡಿದ್ರೋ ಅಲ್ಲಿ 30 ವರ್ಷದ ಹಿಂದಿನ ದ್ವೇಷದ ಕಥೆ ತೆರೆದುಕೊಂಡಿತ್ತು. ಲೋಡೆಡ್ ಗನ್ ಈರಣ್ಣಗೌಡನ ಜೇಬಿನಲ್ಲಿದೆ ಅನ್ನೋ ಸಣ್ಣ ಸುಳಿವು ಇದ್ದಿದ್ರು ಹಂತಕರು ಅವರನ್ನ ಮಚ್ಚಿನಲ್ಲಿ ಕೊಲ್ಲೋ ಧೈರ್ಯ ಮಾಡುತ್ತಿರಲಿಲ್ಲ. ಆದ್ರೆ ಹಂತಕರು ಮೀಟರ್ ಗಟ್ಟಲೆ ಅಟ್ಟಾಡಿಸಿಕೊಂಡು ಬಂದ್ರೂ ಈರಣ್ಣ ಗನ್ ಅನ್ನ ಯಾಕೆ ಹೊರತಗೆಯಲಿಲ್ಲ ಅನ್ನೋದೇ ಯಕ್ಷಪ್ರಶ್ನೆ. ಅದು ಬರೊಬ್ಬರಿ 30 ವರ್ಷದ ಹಿಂದಿನ ದ್ವೇಷ. ಆಗ ಈರಣ್ಣ ಗೌಡನ ಅಪ್ಪ ಮತ್ತು ಚಿಕ್ಕಪ್ಪಂದಿರು ಸೇರಿ ಎದುರಾಳಿ ನಾಯ್ಕೋಡಿ ಕುಟುಂಬದ ಮೂವರನ್ನ ಕೊಂದು ಮುಗಿಸಿದ್ರು. ಇದೇ ಕೊಲೆ ಕೇಸ್ನಲ್ಲಿ ಈರಣ್ಣಗೌಡ ತಂದೆ ಸೇರಿದಂತೆ ಇಡೀ ಕುಟುಂಬ ಜೈಲು ಸೇರಿತ್ತು.ಆಗ ನಾಯ್ಕೋಡಿ ಕುಟುಂಬ ಈರಣ್ಣಗೌಡ ಕುಟುಂಬದ 10 ಎಕರೆ ಜಮೀನನ್ನ ಕಬ್ಜ ಮಾಡಿಕೊಂಡಿತ್ತು. ಆದ್ರೆ ಯಾವಾಗ ಈರಣ್ಣಗೌಡ ಲಾಯರ್ ಆದ್ನೋ ಕಬ್ಜವಾಗಿದ್ದ ಆಸ್ತಿಯನ್ನ ಮರಳಿ ಪಡೆಯೋಕೆ ನಿರ್ಧರಿಸಿದ್ದ. ಒಂದು ದಶಕದಿಂದ ಕೋರ್ಟ್ನಲ್ಲಿ ತಾನೇ ವಾದ ಮಂಡಿಸುತ್ತಿದ್ದ. ಇನ್ನೇನು ಕೆಲ ಸಮಯದಲ್ಲಿ ಆ ಕೇಸ್ನ ತೀರ್ಪು ಬರಬೇಕಿತ್ತು. ಆದ್ರೆ ತೀರ್ಪು ಬರುವ ಮುಂಚೆಯೇ ಎದುರಾಳಿಗಳು ರಕ್ತದೋಕುಳಿ ಆಡಿದ್ದಾರೆ.

ಇದನ್ನೂ ವೀಕ್ಷಿಸಿ:  ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರ ಸಾವು