Asianet Suvarna News Asianet Suvarna News

ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರ ಸಾವು

ಕಾರು ಪಲ್ಟಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದ ಹೆಚ್ಎಸ್ ಗಾರ್ಡನ್ ಬಳಿ ನಡೆದಿದೆ.
 

ಚಿಕ್ಕಬಳ್ಳಾಪುರ: ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ(Chikkaballapur) ವಲಯದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಚಾಲಕನ ಅಜಾಗುರುಕತೆಯಿಂದ ಈ ದುರಂತ ನಡೆದಿದೆ ಎಂದು ಹೇಳಲಾಗ್ತಿದೆ. ನಿಯಂತ್ರಣ ತಪ್ಪಿ ರಾಷ್ಟ್ರೀಯ ದಾರಿ ಪಕ್ಕದಲ್ಲಿದ್ದ ಹಳ್ಳಕ್ಕೆ ಕಾರು(Car) ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ(Bengaluru) ಬಾಗೇಪಲ್ಲಿ ಕಡೆ ಕಾರು ತೆರಳುತ್ತಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಪೊಲೀಸರು ಭೇಟಿ ನೀಡಿದ್ದರು. ಕ್ರೇನ್ ಬಳಸಿ ಕಾರನ್ನು ಮೇಲಕ್ಕೆ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಎತ್ತಿದ್ದಾರೆ. ಚಿಕ್ಕಬಳ್ಳಾಪುರ ವರವಲಯದ ಹೆಚ್ಎಸ್ ಗಾರ್ಡನ್ ಬಳಿ ಈ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  ಎರಡನೇ ದಿನಕ್ಕೆ ಕಾಲಿಟ್ಟ ಫರ್ನಿಚರ್ ಎಕ್ಸ್‌ಪೋ : ಶೇ.70ರಷ್ಟು ಡಿಸ್ಕೌಂಟ್..ಭರ್ಜರಿ ರೆಸ್ಪಾನ್ಸ್