ಮಲಗಿದಲ್ಲೇ ಕೊಲೆಯಾಗಿದ್ದ ಹೋಟೆಲ್ ಕ್ಯಾಷಿಯರ್: ಕೊಂದವನು ಅದೇ ಹೋಟೆಲ್‌ನಲ್ಲಿದ್ದ..!

ಅವನನ್ನ ಕೊಂದು ಸಿಸಿ ಕ್ಯಾಮರಾ ಧ್ವಂಸ ಮಾಡಿದ್ದ..!
ಟಿಕೆಟ್ ಕೊಳ್ಳಲು ದುಡ್ಡಿಲ್ಲದೇ ರೈಲ್ವೆ ಸ್ಟೇಷನ್ನಲ್ಲೇ ಇದ್ದ..!
ಹೆಂಡತಿಯನ್ನ ಸಂಶಿಸಿ ಅವನನ್ನ ಕೊಲೆ ಮಾಡಿದ್ದ..!

Share this Video
  • FB
  • Linkdin
  • Whatsapp

ಅದು ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್, ಅಲ್ಲಿ ಆವತ್ತು ಒಂದು ಮರ್ಡರ್ ಆಗಿತ್ತು. ಕೊಲೆಯಾದವನು(Murder) ಅದೇ ಹೋಟೆಲ್‌ನ ಕ್ಯಾಷಿಯರ್. ಬೆಳಗ್ಗೆ ಕ್ಯಾಷಿಯರ್(Cashier) ಆಗಿ ಕೆಲಸ ಮಾಡಿ ರಾತ್ರಿ ಅದೇ ಹೋಟೆಲ್‌ನಲ್ಲಿ ಮಲಗ್ತಿದ್ದ. ಸೋಫಾ ಮೇಲೆ ಮಲಗಿದ್ದವನು ಬೆಳಗಾಗುವಷ್ಟರಲ್ಲಿ ಅದೇ ಸೋಫಾ ಮೇಲೆ ಹೆಣವಾಗಿದ್ದ. ಬೆಳ್ಳಂ ಬೆಳಗ್ಗೆ ಹೋಟೆಲ್‌ಗೆ (Hotel)ಬಂದ ಮಾಲೀಕನಿಗೆ ಕ್ಯಾಷಿಯರ್ ಕೊಲೆ ಬೆಚ್ಚಿ ಬೀಳಿಸಿತ್ತು. ಸೀದಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದ. ಇನ್ನೂ ಸ್ಫಾಟ್‌ಗೆ ಬಂದ ಪೊಲೀಸರು ಮೊದಲು ಇದು ಮರ್ಡರ್ ಫಾರ್ ಗೇನ್ ಅಂತಲೇ ಅಂದುಕೊಂಡಿದ್ರು. ಆದ್ರೆ ಹೋಟೆಲ್ ಪೂರ್ತಿ ಸರ್ಚ್ ಮಾಡಿದ ಮೇಲೆ ಕೊಲೆಯ ಹಿಂದಿನ ರಹಸ್ಯ ಬಯಲಾಗಿತ್ತು. ಸಿಸಿ ಕ್ಯಾಮರಾವನ್ನ ಕೊಲೆಗಾರರು ಧ್ವಂಸ ಮಾಡಿದ್ರು. ಪೊಲೀಸರಿಗೆ ಅನುಮಾನ ಜಾಸ್ತಿ ಆಗುತ್ತೆ. ಇದು ಧರೋಡೆ ಅಲ್ಲ ಬದಲಿಗೆ ಗೊತ್ತಿರುವವರೇ ಮಾಡಿರಬಹುದು ಅಂತ ಯೋಚಿಸಿ ಹೋಟೆಲ್ನ ಸಿಬ್ಬಂದಿಗಳನ್ನೆಲ್ಲಾ ವಿಚಾರಣೆ ಮಾಡಲು ಮುಂದಾಗ್ತಾರೆ. ಆಗತಲೇ ನೋಡಿ ಒಬ್ಬನ ಮೇಲೆ ಡೌಟ್ ಬರೋದು. ಹೋಟೆಲ್ ಸ್ಟಾಫ್ನ ಪೈಕಿ ಒಬ್ಬ ಅಲ್ಲಿ ಮಿಸ್ಸಿಂಗ್. ಕೊಲೆಯಾದ ರಾತ್ರಿಯಿಂದ ಆತ ನಾಪತ್ತೆಯಾಗಿರ್ತಾನೆ. ಪೊಲೀಸರು ತಡ ಮಾಡದೇ ಅವನ ಹಿಂದೆ ಬೀಳ್ತಾರೆ.

ಇದನ್ನೂ ವೀಕ್ಷಿಸಿ:  ಸಂಚಲನ ಸೃಷ್ಟಿಸಿವೆ ಆ 4 ಫೋಟೋಗಳು: ಬಿಎಸ್‌ವೈ ಕಾಲಿಗೆ ಬಿದ್ದ ಸಿಟಿ ರವಿ, ಇದರ ಹಿಂದಿನ ಮರ್ಮವೇನು..?

Related Video