Asianet Suvarna News Asianet Suvarna News

ಸಂಚಲನ ಸೃಷ್ಟಿಸಿವೆ ಆ 4 ಫೋಟೋಗಳು: ಬಿಎಸ್‌ವೈ ಕಾಲಿಗೆ ಬಿದ್ದ ಸಿಟಿ ರವಿ, ಇದರ ಹಿಂದಿನ ಮರ್ಮವೇನು..?

ಬಿ.ಎಸ್‌.ಯಡಿಯೂರಪ್ಪ ಕಾಲಿಗೆರಗಿದ ಸಿಟಿ ರವಿ
ಕೇಸರಿ ಕೂಟದಲ್ಲಿ ಸಂಚಲನ ಎಬ್ಬಿಸಿದ ಫೋಟೋ
ಬಿಎಸ್‌ವೈ ಭೇಟಿ ಹಿಂದಿನ ಮರ್ಮವೇನು..?

ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಅದಕ್ಕೆ ಕಾರಣ ಆ ನಾಲ್ಕು ಫೋಟೋಗಳು. ಒಂದು ಚುನಾವಣೆಗೂ ಮುನ್ನ ಬಿಎಸ್‌ವೈ ಕುಟುಂಬದ ಮೇಲೆ ಹರಿಹಾಯ್ತಾ ಇದ್ದ ಸಿಟಿ ರವಿ(CT Ravi) ಈಗ ಬಿ ಎಸ್ ಯಡಿಯೂರಪ್ಪನವರನ್ನ(BS Yediyurappa) ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಇನ್ನೊಂದು ಕಡೆಯಲ್ಲಿ ಸದಾ ರಾಜಾಹುಲಿ ಮೇಲೆ ರಾಂಗ್ ಆಗ್ತಿದ್ದ ಯತ್ನಾಳ್ ಅವರನ್ನ ಬಿಎಸ್‌ವೈ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ. ಮೋದಿ(Modi) ಹಾಗೂ ತೇಜಸ್ವಿನಿ ಅನಂತ್ ಕುಮಾರ್ (Tejaswini Ananth Kumar) ಭೇಟಿ ಮತ್ತು ವಿಜಯೇಂದ್ರ ಮತ್ತುಅಮಿತ್ ಶಾ ಮೀಟ್ ಕೂಡ ರಾಜ್ಯದಲ್ಲಿ ಅನೇಕ ಚರ್ಚೆಗೆ ಕಾರಣವಾಗಿದೆ. ರಾಜ್ಯ ಬಿಜೆಪಿಯಲ್ಲಿ(BJP) ಸಾಕಷ್ಟು ಚರ್ಚೆಗಳನ್ನ ನಾಲ್ಕು ಫೋಟೋಗಳು ಶುರು ಮಾಡಿವೆ. ಅದರಲ್ಲಿ ಮೊದಲನೇದು ಅಂದ್ರೆ ಸಿಟಿ ರವಿ ಹಾಗೂ ಮಾಜಿ ಸಿಎಂ ಬಿಎಸ್‌ವೈ ಭೇಟಿ ಆಗಿದ್ದಾರೆ.

ಇದನ್ನೂ ವೀಕ್ಷಿಸಿ:  ಬಸ್‌ ಚಾಲಕ ಜಗದೀಶ್‌ ಆತ್ಮಹತ್ಯೆ ಯತ್ನ ಪ್ರಕರಣ: ಸಚಿವರ ಅಣತಿಯಂತೆ ವರದಿ ಕೊಡ್ತಾ ಸಿಐಡಿ..?

Video Top Stories