ಅಪ್ರಾಪ್ತೆ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ: ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೆ ಮರ್ಡರ್‌ !

ನನ್ನ ಮಗಳ ತಂಟೆಗೆ ಬರಬೇಡ ಎಂದು ತಂದೆ ಹೇಳಿದ್ದಕ್ಕೆ ಪಾಗಲ್‌ ಪ್ರೇಮಿಯೊಬ್ಬ ಆತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಮಗಳ ತಂಟೆಗೆ ಬರಬೇಡ ಅಂದಿದಕ್ಕೆ ಸಿಲಿಕಾನ್ ಸಿಟಿಯಲ್ಲಿ ಪಾಗಲ್‌ ಪ್ರೇಮಿಯೊಬ್ಬ ಹುಡುಗಿಯ ತಂದೆಯನ್ನೇ ಮರ್ಡರ್(Murder) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅನ್ವರ್ ಹುಸೇನ್ ಎಂಬಾತನ ಕುತ್ತಿಗೆಗೆ ಚಾಕು ಇರಿದು ಹತ್ಯೆ ಮಾಡಲಾಗಿದೆ. ಝಹೀದ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಶಾಂತಿನಗರದ ನಂಜಪ್ಪ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಪ್ರೀತಿಸುವಂತೆ 15 ವರ್ಷದ ಅಪ್ರಾಪ್ತೆ(Minor) ಬೆನ್ನ ಹಿಂದೆ ಆರೋಪಿ ಬಿದ್ದಿದ್ದ. ಈ ವಿಚಾರವನ್ನ ತನ್ನ ತಂದೆ ಮೃತ ಅನ್ವರ್ ಹುಸೇನ್‌ಗೆ ಬಾಲಕಿ ತಿಳಿಸಿದ್ದಳು. ಕಳೆದ ಮೂರು ತಿಂಗಳ ಹಿಂದೆ ಆರೋಪಿ ಝಹೀದ್‌ಗೆ ಮೃತ ಅನ್ವರ್ ಬುದ್ಧಿ ಹೇಳಿದ್ದರು. ಶನಿವಾರ ಮತ್ತೆ ಅಪ್ರಾಪ್ತೆಯನ್ನ ಹಿಂಬಾಲಿಸಿ ಪ್ರೀತಿಸುವಂತೆ ಆರೋಪಿ ಪೀಡಿಸಿದ್ದ. ಹಾಗಾಗಿ ಮತ್ತೆ ರಾತ್ರಿ ಮಗಳ ವಿಚಾರಕ್ಕೆ ಬರಬೇಡ ಎಂದು ಹೇಳಲು ಬಂದಾಗ ಚಾಕು ಇರಿದಿದ್ದಾನೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಹುಡಕಾಟ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಮಾಜಿ ಸಚಿವರೊಬ್ಬರ ಗನ್‌ ಮ್ಯಾನ್‌ನಿಂದ ವಂಚನೆ: 30 ಕೋಟಿಯ ಕಾಮಗಾರಿಗೆ ಹಣ ಕೇಳಿದ ಆರೋಪ

Related Video