ಮಾಜಿ ಸಚಿವರೊಬ್ಬರ ಗನ್‌ ಮ್ಯಾನ್‌ನಿಂದ ವಂಚನೆ: 30 ಕೋಟಿಯ ಕಾಮಗಾರಿಗೆ ಹಣ ಕೇಳಿದ ಆರೋಪ

ಹಣ ಪಡೆದು ಕಾಮಗಾರಿಯೂ ಕೊಡಿಸದೆ ಮುಂಗಡವಾಗಿ ಪಡೆದ ಹಣವೂ ಕೊಡದೆ ಮಾಜಿ ಸಚಿವರೊಬ್ಬರ ಗನ್‌ ಮ್ಯಾನ್‌ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
 

First Published Sep 3, 2023, 9:48 AM IST | Last Updated Sep 3, 2023, 9:48 AM IST

ಮಾಜಿ ಸಚಿವರೊಬ್ಬರ ಗನ್ ಮ್ಯಾನ್‌(Gun man) ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಟೆಂಡರ್(Tender) ಕೊಡಿಸೋದಾಗಿ ಹೇಳೆ ಲಕ್ಷ ಲಕ್ಷ ವಂಚನೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಟೆಂಡರ್‌ವೊಂದಕ್ಕೆ ಶೇ.12ರಷ್ಟು ಕಮಿಷನ್(Commission) ಕೊಡ್ಬೇಕೆಂದು ಕೇಳಿ ವಂಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 30 ಕೋಟಿಯ ಕಾಮಗಾರಿಗೆ ಹಣ ಕೇಳಿ ವಂಚಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಗನ್ ಮ್ಯಾನ್‌ ರಾಘವೇಂದ್ರ ಎಂಬಾತನಿಂದ ವಂಚನೆ ಮಾಡಲಾಗಿದೆ. ಮಾಯಕೊಂಡ ಗ್ರಾಮ ಪಂಚಾಯ್ತಿಯ ಟೆಂಡರ್ ಕೊಡಿಸುತ್ತೇನೆ ಎಂದು ಹೇಳಿ ವಂಚನೆ ಮಾಡಲಾಗಿದೆಯಂತೆ. ಹೆಚ್. ರಾಜು ನಾಯ್ಕ್ ಎಂಬುವವರ ಬಳಿ ಹಣ ಪಡೆದಿದ್ದಾರೆ. ಹತ್ತು ಲಕ್ಷ ಪಡೆದು, ಟೆಂಡರ್‌ ಕೊಡಿಸದೇ ಪಂಗನಾಮ ಹಾಕಿದ್ದಾರೆ ಎಂದು ಹೇಳಲಾಗ್ತಿದೆ. ಹಣವನ್ನು ವಾಪಸ್‌ ಕೊಡುವಂತೆ ಕೇಳಿದ್ರೆ, ನಾಲ್ಕು ಲಕ್ಷ ಕೊಟ್ಟು ಆರು ಲಕ್ಷ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಸುದೀಪ್‌ ಪಡೆದ ಮೊದಲ ಸಂಭಾವನೆ ಎಷ್ಟು..? ಇನ್‌ಸ್ಟಾಗ್ರಾಂನಲ್ಲಿ ಕಿಚ್ಚ ಫಾಲೋ ಮಾಡೋ ಆ 6 ಜನ ಯಾರು ?