ಒಕ್ಕಲಿಗ Vs ಒಕ್ಕಲಿಗ..ರೆಡಿನಾ ಕೇಸರಿ “ಸಮರ”ವ್ಯೂಹ..?: ಬಿಜೆಪಿಗೂ ಸಿಗುತ್ತಾ "ಒಕ್ಕಲಿಗ" ಸಾರಥ್ಯ..?

ಡಿಕೆ “ಅಶ್ವಮೇಧ” ತಡೆಯಲು ಕೇಸರಿ ಮೆಗಾಪ್ಲಾನ್..!
ಒಕ್ಕಲಿಗ Vs ಒಕ್ಕಲಿಗ..ರೆಡಿನಾ ಕೇಸರಿ “ಸಮರ”ವ್ಯೂಹ..?
ಕೇಸರಿ ರಣವ್ಯೂಹ ಬದಲಿಸಿದರಾ ಕನಕಪುರ ಬಂಡೆ..?

First Published Jul 30, 2023, 12:34 PM IST | Last Updated Jul 30, 2023, 12:34 PM IST

ಕರ್ನಾಟಕ ಕುರುಕ್ಷೇತ್ರದಲ್ಲಿ ಗುರಿ ಮುಟ್ಟಿತ್ತು ಕನಕಪುರ ಬಂಡೆಯ ಅಶ್ವಮೇಧದ ಕುದುರೆ. ಬಂಡೆ ರಣತಂತ್ರದ ಮುಂದೆ ಮಕಾಡೆ ಮಲಗಿತ್ತು ಕೇಸರಿ ಪಡೆ.
ಲೋಕಯುದ್ಧ ಗೆಲ್ಲಲು ಬಿಜೆಪಿಯ(BJP) ಹೊಸ ರಣವ್ಯೂಹ. ಡಿಕೆ ಶಿವಕುಮಾರ್ “ಅಶ್ವಮೇಧ” ತಡೆಯಲು ರೆಡಿಯಾಗ್ತಿದೆ ಕೇಸರಿ ಮಾಸ್ಟರ್ ಪ್ಲ್ಯಾನ್‌ ಮಾಡಿದೆ.
136 ಸೀಟುಗಳ ಪ್ರತಿಜ್ಞೆ ಮಾಡಿ, 135 ಸ್ಥಾನಗಳನ್ನು ಗೆದ್ದುಕೊಟ್ಟ ಕಾಂಗ್ರೆಸ್(Congress) ಯೋಧ. ಪ್ರತೀ ಸಂಘರ್ಷದ ನಂತರ ಒಬ್ಬ ಸೈನಿಕನ ತೇಜಸ್ಸು, ಸಾಮರ್ಥ್ಯ ಹೆಚ್ಚಾಗುತ್ತದೆ. ಡಿಕೆ ಶಿವಕುಮಾರ್(DK Shivakumar) ಅಂತಹ ಸಂಘರ್ಷದಲ್ಲಿ ಬೆಂದು ಬಿದ್ದು, ಎದ್ದು ನಿಂತ ಒಬ್ಬ ಯೋಧ. ಅದೇ ಯೋಧನ ಪ್ರಭಾವವೀಗ ರಾಜ್ಯ ಬಿಜೆಪಿ ಪಾಳೆಯದ ರಾಜ್ಯಾಧ್ಯಕ್ಷರ ಆಯ್ಕೆಯಲ್ಲೂ ಪರಿಣಾಮ ಬೀರ್ತಾ ಇದೆ. ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷ ಎಂಬ ಖ್ಯಾತಿಯನ್ನು ಹೊಂದಿರೋ ಬಿಜೆಪಿ, ರಾಷ್ಟ್ರಮಟ್ಟದಲ್ಲಿ ತನ್ನ ಸೇನಾಪಡೆಗೆ ಮೇಜರ್ ಸರ್ಜರಿ ಮಾಡಿದೆ. ಒಟ್ಟು 13 ಮಂದಿ ಉಪಾಧ್ಯಕ್ಷರನ್ನು, 8 ಮಂದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕುರ್ಚಿಯಿಂದ ಕರ್ನಾಟಕದ ಸಿ.ಟಿ ರವಿ (CT Ravi)ಅವರನ್ನು ಕೆಳಗಿಳಿಸಲಾಗಿದೆ. ಇದು ರಾಷ್ಟ್ರಮಟ್ಟದಲ್ಲಿ ಸಿ.ಟಿ ರವಿಯವರ ರಾಜಕೀಯ ಪ್ರಯಾಣದ ಅಂತ್ಯವೋ..? ಮತ್ತೊಂದು ರಾಜಕೀಯ ಲೆಕ್ಕಾಚಾರದ ಆರಂಭವೋ..? ಇದು ಈಗ ರಾಜ್ಯದ ಅಷ್ಟೂ ಕೇಸರಿ ಕಾರ್ಯಕರ್ತರನ್ನು ಕಾಡ್ತಿರೋ ಅಚ್ಚರಿಯ ಪ್ರಶ್ನೆಯಾಗಿದೆ. 

ಇದನ್ನೂ ವೀಕ್ಷಿಸಿ:  ಅಣ್ಣಾಮಲೈಗೆ ಸಿಕ್ಕಿದೆ ಅಮಿತ ಬಲ: 6 ತಿಂಗಳಲ್ಲಿ ಬದಲಾಗುತ್ತಾ ದ್ರಾವಿಡ ರಾಜ್ಯದ ರಾಜಕೀಯ!?

Video Top Stories