ಅವಳಿಗಾಗಿ ಬಂದವನು 4 ಹೆಣಗಳನ್ನ ಉರುಳಿಸಿದ್ದ..! ಎಸ್ಕೇಪ್ ಆಗಿದ್ದವನು ತಗ್ಲಾಕಿಕೊಂಡಿದ್ದೇಗೆ..?

ಹಂತಕನ ಫೋನ್ ಪೊಲೀಸರಿಗೆ ಕೊಟ್ಟಿತ್ತು ಸುಳಿವು ..!
ಸಂಬಂಧಿಕರ ಮನೆಯಲ್ಲಿದ್ದಾಗಲೇ ಆರೋಪಿ ಲಾಕ್..!
ಒಬ್ಬಳನ್ನ ಕೊಲ್ಲಲು ಬಂದು 4 ಹೆಣಗಳನ್ನ ಉರುಳಿಸಿದ

Share this Video
  • FB
  • Linkdin
  • Whatsapp

ದೀಪಾವಳಿ ಹಬ್ಬದ ದಿನ ಉಡುಪಿಯಲ್ಲಿ(Udupi) ನಾಲ್ವರ ಹೆಣ ಹಾಕಿ ಎಸ್ಕೇಪ್ ಆಗಿದ್ದ ಹಂತಕ ಪೊಲೀಸರಿಗೆ ತಗ್ಲಾಕಿಕೊಂಡಿದ್ದಾನೆ. ಸದ್ದಿಲ್ಲದೇ ಬಂದು ಹತ್ತೇ ನಿಮಿಷದಲ್ಲಿ ನಾಲ್ವರ ಹೆಣ ಹಾಕಿ ಹೋದವನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆದ್ರೆ ಉಡುಪಿಯಲ್ಲಿ ಎಸ್ಕೇಪ್ ಆದವನು ಬೆಳಗಾವಿಯಲ್ಲಿ(Belagavi) ಸಿಕ್ಕಿಬಿದ್ದಿದ್ದಾನೆ. ಆತನ ಬೆನ್ನು ಬಿದ್ದ ಪೊಲೀಸರು (Police) ಅವನ ಬೇಟೆಯಾಡಿದ್ದೇ ರೋಚಕ. ಆಯ್ನಾಜ್ ಕೆಲಸ ಮಾಡ್ತಿದ್ದ ಏರ್‌ಲೈನ್‌ನಲ್ಲೇ ಈ ಕಿರಾತಕ ಕೂಡ ಕೆಲಸ ಮಾಡ್ತಿದ್ದ. ಜೊತೆಗೆ ಕೆಲಸ ಮಾಡಿಕೊಂಡಿದ್ದವನೇ ಆವತ್ತು ಆಕೆ ಮತ್ತು ಆಕೆಯ ಕುಟುಂಬವನ್ನ ಮುಗಿಸಿ ಹೋಗಿದ್ದ. 4 ಹೆಣ ಹಾಕಿ ಪ್ರವೀಣ್ ಚೌಗಲೆ ಬೆಳಗಾವಿಯ ಸಂಬಂಧಿಕರ ಮನೆಯಲ್ಲಿ ಏನೂ ಗೊತ್ತಿಲ್ಲದಂತೆ ಹಾಯಾಗಿದ್ದ. ಆದ್ರೆ ಇದ್ದಕ್ಕಿದ್ದಂತೆ ಆತ ತನ್ನ ಫೋನ್ ಅನ್ನ ಸ್ವಿಚ್ ಆನ್ ಮಾಡಿಬಿಟ್ಟ. ಅವನ ಫೋನ್ ಲೊಕೇಷನ್ ಟ್ರ್ಯಾಪ್ ಮಾಡಿಕೊಂಡು ಕಾಯುತ್ತಿದ್ದ ಪೊಲೀಸರಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿತ್ತು. ಕೂಡಲೇ ಆತ ಬೆಳಗಾವಿಯಲ್ಲಿರೋದು ಗೊತ್ತಾಗಿ ಅವನನ್ನ ಎತ್ತಾಕೊಂಡು ಬಂದ್ರು. ಕೊನೆಗೂ ತಗ್ಲಾಕಿಕೊಂಡ ಪ್ರವೀಣ ಪೊಲೀಸರೆದುರು ಎಲ್ಲವನ್ನ ಹೇಳಿದ್ದಾನೆ. ಆದ್ರೆ ಅದೆಲ್ಲವೂ ಸತ್ಯನಾ ಸುಳ್ಳ ಅನ್ನೋದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಇನ್ನೂ 14 ದಿನ ನ್ಯಾಯಾಲಯ ಪ್ರವೀಣನನ್ನ ಪೊಲೀಸ್ ಕಸ್ಟಡಿಗೆ ಕೊಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಮೋಡಗಳ ಕಲರವ: ರಮಣೀಯ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Related Video