Asianet Suvarna News Asianet Suvarna News

ಗ್ಯಾರಂಟಿ ಭಾಗ್ಯಕ್ಕೆ ಸಿದ್ದು ಸರ್ಕಾರ ಅಸ್ತು: ಈಗಿಂದ ಹೇಗೆ ಬದಲಾಗಲಿದೆ ರಾಜ್ಯದ ಭವಿಷ್ಯ ?

ಸಿದ್ದರಾಮಯ್ಯ ಘೋಷಣೆಗೆ ಎದುರಾಳಿ ಪಡೆ ಸುಸ್ತು..!
ಈಗಿಂದ ಹೇಗೆ ಬದಲಾಗಲಿದೆ ರಾಜ್ಯದ ಭವಿಷ್ಯ..?
ಕರ್ನಾಟಕ ಖಜಾನೆಗೆ ಕಂಟಕ ಕಾದಿದೆಯಾ..?

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಭರವಸೆ ನೀಡಿದ್ದ 5 ಗ್ಯಾರಂಟಿಗಳನ್ನು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸಿದ್ದಾರೆ. ಬಹು ನಿರೀಕ್ಷಿತ ಘೋಷಣೆಗಳು ಇವಾಗಿದ್ದು, ಇದರಿಂದ ಸರ್ಕಾರಕ್ಕೆ ಎಷ್ಟು ಹೊರೆಯಾಗಬಹುದು ಎಂಬುದು ಎಲ್ಲರಿಗೂ ಮೂಡಿರುವ ಪ್ರಶ್ನೆಯಾಗಿದೆ. ಕ್ಯಾಬಿನೆಟ್‌ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಶುಕ್ರವಾರ ಗ್ಯಾರಂಟಿಗಳ ಘೋಷಣೆಯನ್ನು ಮಾಡಿದರು. ಈ ಗ್ಯಾರಂಟಿಗಳು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿವೆ ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಅಲ್ಲದೇ ಈ ಗ್ಯಾರಂಟಿಗಳು ಈಗ ಮೋದಿಗೂ ಸಹ ಸವಾಲಾಗಿವೆ. ಈ ಗ್ಯಾರಂಟಿಯನ್ನೇ ಇಟ್ಟುಕೊಂಡು ಕಾಂಗ್ರೆಸ್‌ ಲೋಕಸಭಾ ಚುನಾವಣೆ ಗೆಲ್ಲಲು ಮುಂದಾಗಿದೆ. 

ಇದನ್ನೂ ವೀಕ್ಷಿಸಿ: ಪಂಚ ಗ್ಯಾರಂಟಿ ಘೋಷಿಸಿದ ಕೈ ಸರ್ಕಾರ, ಏನೇನು ಷರತ್ತು..?: ಹೇಗಿದೆ “ಮೇಷ್ಟ್ರು” ರಾಮಯ್ಯನ ಐದು ಪಕ್ಕಾ ಲೆಕ್ಕ..?

Video Top Stories