ಹಣ ಡಬಲ್ ಮಾಡ್ತೀನಿ ಅಂತ ಬಂದ್ರೆ ಹುಷಾರ್..!: ದುಡ್ಡು ಕೊಟ್ಟ ಲೇಡಿಯನ್ನೇ ಕಿಡ್ನ್ಯಾಪ್ ಮಾಡಿಬಿಟ್ರು..!

ನಿಮ್ಮನ್ನ ಖೆಡ್ಡಾಗೆ ಕೆಡವಲು ಕಾಯ್ತಿದೆ ಆ ಜೋಡಿ..!
ಕಿಡ್ನ್ಯಾಪ್ ಮಾಡಿದವರನ್ನೇ ಫಾಲೋ ಮಾಡಿದ್ದ ಮಗ
ಡಬಲ್ ಆಗೋ ಆಸೆಯಲ್ಲಿ 30 ಲಕ್ಷ ಕೊಟ್ಟಿದ್ದರು..!

First Published Jul 1, 2023, 12:51 PM IST | Last Updated Jul 1, 2023, 12:51 PM IST

ಆಸೆಯೇ ದುಃಖಕ್ಕೆ ಕಾರಣ ಅಂತ ಭಗವಾನ್ ಬುದ್ಧ ಹೇಳಿ ಶತಮಾನಗಳೇ ಕಳೆದು ಹೋಗಿವೆ. ಬುದ್ಧನ ಮಾತು ಇವತ್ತಿಗಷ್ಟೇ ಅಲ್ಲ, ಯಾವತ್ತಿಗೂ ಪ್ರಸ್ತುತ ಎನ್ನುವಷ್ಟರ ಮಟ್ಟಿಗೆ ಸತ್ಯವಾಗಿದೆ. ದುಡ್ಡು ಡಬಲ್ ಮಾಡ್ತೀನಿ ಅಂತ ಬಂದವರನ್ನ ನಂಬಿದ್ದ ಆ ಹೆಣ್ಣು ಮಗಳು ಆಸೆಗೆಬಿದ್ದು ಹಿಂದೆ ಮುಂದೆ ನೋಡದೇ 30 ಲಕ್ಷ ಹಣ ಕೊಟ್ಟುಬಿಟ್ಟಿದ್ಲು. ಮೂರು ತಿಂಗಳ ನಂತರ ನನ್ನ 30 ಲಕ್ಷ 60 ಲಕ್ಷ ಆಗುತ್ತೆ ಅಂತ ಕಾದಿದ್ಲು. ಆದ್ರೆ ಆಕೆಗೆ  ಸಿಕ್ಕಿದ್ದು 3 ನಾಮ. ಇನ್ನೂ ಕೊಟ್ಟ ಹಣ ವಾಪಸ್ ಕೇಳಲು ಹೋದವಳನ್ನೇ ಆ ಕಿರಾತಕರು ಕಿಡ್ನ್ಯಾಪ್ ಮಾಡಿಬಿಟ್ಟಿದ್ರು. ಹೀಗೆ ಅತೀ ಆಸೆಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡ ಒಬ್ಬ ಹೆಣ್ಣುಮಗಳ ಕಥೆ ಮತ್ತು ನಮ್ಮ ರಾಜ್ಯದಲ್ಲಿ ಮನಿ ಡಬ್ಲಿಂಗ್ ದಂಧೆಯ ಕಿಂಗ್‌ ಪಿನ್‌ಗಳು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಕಲಬುರಗಿಯಲ್ಲಿ ನಡೆಯುತ್ತಿದ್ದ ಮಹಿಳೆಯೊಬ್ಬರ ಕಿಡ್ನಾಪ್ ಪ್ರಕರಣವೇನೋ ಸುಖಾಂತ್ಯಗೊಂಡಿದೆ.

ಇದನ್ನೂ ವೀಕ್ಷಿಸಿ:  ಯುರೋಪಿಯನ್ ರಾಷ್ಟ್ರಗಳು ಹೊತ್ತಿ ಉರೀತಿರೋದೇಕೆ ?: 40,000 ಪೊಲೀಸರು VS ಸಾವಿರಾರು ಹೋರಾಟಗಾರರು! ಏನು ಕತೆ?

Video Top Stories