ಯುರೋಪಿಯನ್ ರಾಷ್ಟ್ರಗಳು ಹೊತ್ತಿ ಉರೀತಿರೋದೇಕೆ ?: 40,000 ಪೊಲೀಸರು VS ಸಾವಿರಾರು ಹೋರಾಟಗಾರರು! ಏನು ಕತೆ?

ಅಮಾಯಕ ಯುವಕನ ಪ್ರಾಣ ತೆಗೆದರಾ ಪೊಲೀಸರು ?
ಅರ್ಧ ನಿಮಿಷದಲ್ಲಿ ಹಾರಿ ಹೋಗಿತ್ತು ಅವನ ಪ್ರಾಣ!
ಒಂದು ಜೀವದ ಸಾವಿನ ವಿರುದ್ಧ ಫ್ರಾನ್ಸ್ ಜನತೆ ಹೋರಾಟ!

First Published Jul 1, 2023, 12:46 PM IST | Last Updated Jul 1, 2023, 12:46 PM IST

ಒಂದು ಕಡೆ ಫ್ರಾನ್ಸ್ ಧಗಧಗ ಅಂತಾ ಇದೆ, ಇನ್ನೊಂದು ಕಡೆ, ಸ್ವೀಡನ್‌ನಲ್ಲಿ ಹೊತ್ತಿದ ಜ್ವಾಲೆ, ಇಡೀ ಇರಾನನ್ನೇ ದಹಿಸ್ತಾ ಇದೆ. ಹಬ್ಬದ ಹೊತ್ತಲ್ಲೇ ಯುರೋಪಿಯನ್ ರಾಷ್ಟ್ರಗಳು ಹೊತ್ತಿ ಉರಿಯುತ್ತಿವೆ. ಪ್ಯಾರಿಸಿನಲ್ಲಿ ಇಂಥಾ ಗಲಭೆಗಳು ಈಗ ಆಲ್ ಮೋಸ್ಟ್ ಕಾಮನ್ ಆಗ್ಬಿಟ್ಟಿದೆ. ಅಲ್ಲಿನ ರಾಜಕೀಯ ನಿಲುವುಗಳು, ನೀತಿಗಳು, ಅಲ್ಲಿನ ಸರ್ಕಾರ ಜನರನ್ನ ನಡೆಸಿಕೊಳ್ತಾ ಇರೋ ರೀತಿ-ರಿವಾಜಿನ ವಿರುದ್ಧ ಪದೇ ಪದೇ ಸಣ್ಣಮಟ್ಟದ ಗಲಭೆಗಳು ಆಗ್ತಲೇ ಇದಾವೆ. ಆದ್ರೆ, ಇಡೀ ಜಗತ್ತೇ ಆಘಾತಗೊಳ್ಳೋ ಹಾಗೆ ನಡೀತಿರೋ ಈ ಗಲಭೆಗೆ ಕಾರಣ ಅದ್ಯಾವುದೂ ಅಲ್ಲ. ಅದು ಒಂದು ವಿಡಿಯೋ. ಈ ವಿಡಿಯೋ ಹತ್ತು ಸೆಕೆಂಡ್ ಕೂಡ ಇಲ್ಲ. ಆದ್ರೆ, ಇವತ್ತು ಇಡೀ ಫ್ರಾನ್ಸ್ ಧಗಧಗ ಅಂತಿರೋದಕ್ಕೆ ಈ ವಿಡಿಯೋನೇ ಕಾರಣವಾಗಿದೆ. 

ಇದನ್ನೂ ವೀಕ್ಷಿಸಿ:  ಪಕ್ಷ ಕೊಟ್ಟ ನೋಟಿಸ್‌ಗೆ ಕ್ಯಾರೆ ಎನ್ನದ ರೇಣುಕಾಚಾರ್ಯ: ಪಕ್ಷದ ಬೆಳವಣಿಗೆ ಬಗ್ಗೆ ಮೋದಿಗೆ ದೂರು ಕೊಡ್ತಾರಂತೆ ಎಂಪಿಆರ್?