ಶೋಕಿಗೆ ಬಿದ್ದ ರೀಲ್ಸ್​​ ರಾಣಿಗಿತ್ತು ಲಕ್ಷ ಲಕ್ಷ ಸಾಲ: ಆಶ್ರಯ ನೀಡಿದ ಮನೆ ಮಾಲೀಕಳ ಕತೆ ಮುಗಿಸಿದ ಹಂತಕಿ ಸಿಕ್ಕಿದ್ಹೇಗೆ?

ಮನೆ ಬಾಡಿಗೆಗೆ ಪಡೆದು ಮನೆ ಮಾಲಕಿಯನ್ನೇ ಕೊಂದು ಮುಗಿಸಿದ್ದಳು ಈ ಮೋನಿಕಾ.. ಆದರೆ ದಿವ್ಯಾಳ ಕಥೆ ಮುಗಿಸಿದ ಮೋನಿಕಾ ಎಂಥಹ ಕತರ್ನಾಕ್​​​​ ಆಟವಾಡಿದ್ಲು ಗೊತ್ತಾ..? ಈ ವೀಡಿಯೋ ನೋಡಿ

First Published May 16, 2024, 12:59 PM IST | Last Updated May 16, 2024, 12:59 PM IST

ಅವಳು ರೀಲ್ಸ್​​​ ರಾಣಿ... ರೀಲ್ಸ್​​ ಮಾಡಿಕೊಂಡು ಶೋಕಿ ಮಾಡೋದೇ ಅವಳ ಫುಲ್​ ಟೈಂ ಜಾಬ್​​​. ಆಕೆಗೊಬ್ಬ ಬಾಯ್​ಫ್ರೆಂಡ್​​.. ಅವನಿಗಾಗಿ ಏನ್​ಬೇಕಾದ್ರೂ ಮಾಡೋಕೆ ರೆಡಿ ಇದ್ಲು ಈ ಶೋಕಿ ರಾಣಿ.. ಆದ್ರೆ ಅದೇ ಬಾಯ್​ಫ್ರೆಂಡ್​ ಮೆಚ್ಚಿಸಲು ಹೋಗಿ ಇವತ್ತು ಅದೇ ರೀಲ್ಸ್​​ ರಾಣಿ ಜೈಲು ಪಾಲಾಗಿದ್ದಾಳೆ. ಅಮಾಯಕ ಹೆಣ್ಣುಮಗಳ ಕತ್ತು ಬಿಗಿದು ಅವಳ ಸಾವಿಗೆ ಕಾರಣವಾಗಿ ಇವತ್ತು ಪೊಲೀಸರ ಅತಿಥಿಯಾಗಿದ್ದಾಳೆ.. ಅಷ್ಟಕ್ಕೂ ಆ ರೀಲ್ಸ್​​​ ಬೆಡಗಿ ಮನೆ ಮಾಲೀಕನ್ನೇ ಕೊಂದಿದ್ದೇಕೆ? ಆಕೆ ಸಿಕ್ಕಿಬಿದ್ದಿದ್ಹೇಗೆ?  ಆ ರೋಚಕ ಕಥೆಯನ್ನ ಹೇಳೋದೇ ಇವತ್ತಿನ ಎಫ್​.ಐ.ಆರ್

Video Top Stories