ಕತ್ತು ಕೊಯ್ದು ರಕ್ತ ಹೀರಿದವನೊಬ್ಬ, ರಸ್ತೆಯಲ್ಲೇ ಹೆಂಡತಿಗೆ ಚಾಕು ಹಾಕಿದವನು ಮತ್ತೊಬ್ಬ: ಇದು ಮನುಷ್ಯ ರೂಪದ ರಾಕ್ಷಸರ ಕಥೆ..!

ಹೆಂಡತಿಯನ್ನ ಮುಗಿಸಲು ಚಿಕ್ಕಪ್ಪನ ಮಗನನ್ನ ಕರೆದ
ಸ್ನೇಹಿತನೇ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ..!
ಬಾಡಿಗೆ ಕೊಡಿಸ್ತೀನಿ ಅಂತ ಹೇಳಿ ಕರೆದೊಯ್ದಿದ್ದ..!

Share this Video
  • FB
  • Linkdin
  • Whatsapp

ಅದೊಂದು ಸುಂದರ ಕುಟುಂಬ, ಗಂಡ ಹೆಂಡತಿ ಮತ್ತು ಆರ್ತಿಗೊಬ್ಬಳು ಕೀರ್ತಿಗೊಬ್ಬ ಅಂತ ಇಬ್ಬರು ಮಕ್ಕಳು. ಮದುವೆಯಾಗಿ 9 ವರ್ಷವಾಗಿದೆ ಅಷ್ಟೇ.. ಆದ್ರೆ ಈ 9 ವರ್ಷದಲ್ಲಿ ಗಂಡ ಹೆಂಡತಿ ಖುಷಿ ಖುಷಿಯಾಗಿದ್ದಿದ್ದು ಕೇವಲ ಒಂದೆರಡು ವರ್ಷ ಅಷ್ಟೇ. ಗಂಡ ಬಾರ್ ಅನ್ನೇ ಮನೆ ಮಾಡಿಕೊಂಡಿದ್ದ. ಇನ್ನೂ ಹೆಂಡತಿ ಒಬ್ಬಳೇ ಸಂಸಾರದ ಭಾರವನ್ನ ಹೊತ್ತಿದ್ಲು. ಆದ್ರೆ ಆವತ್ತು ನಡೆಯಬಾರದ್ದು ನಡೆದು ಹೋಗಿತ್ತು. ತಾಳಿ ಕಟ್ಟಿದ ಗಂಡನೇ ಹೆಂಡತಿಗೆ ನಡುರಸ್ತೆಯಲ್ಲಿ ಚಾಕು ಹಾಕಿಬಿಟ್ಟಿದ್ದ. ಇದಕ್ಕೆ ಆತನ ಸಂಬಂಧಿಕನೂ ಸಾಥ್ ಕೂಡ ಕೊಟ್ಟಿದ್ದ. ಇನ್ನೂ ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿ ಸಮಯ ಪ್ರಜ್ಞೆ ಮರೆಯೋದಷ್ಟೇ ಅಲ್ಲದೇ ಆ ಮಹಿಳೆ ಪ್ರಾಣ ಉಳಿಸಲು ರಕ್ತದಾನ ಮಾಡಿ ಮಾನವಿಯತೆ ಮೆರದಿದ್ದಾರೆ. ಇದು ಒಂದು ಘಟನೆಯಾದ್ರೆ, ಇಲ್ಲಿ ಮತ್ತೊಬ್ಬ ವ್ಯಕ್ತಿ ಕತ್ತು ಕೊಯ್ದು ನಂತರ ಕತ್ತಿನಿಂದ ಬಂದ ರಕ್ತವನ್ನ ಜ್ಯೂಸ್‌ನಂತೆ ಕುಡಿದಿದ್ದಾನೆ. ಈ ಪಾಪಿ ಆ ರೀತಿ ಮಾಡಲು ಕಾರಣ ಅವನದ್ದೇ ಹೆಂಡತಿ. ಆ ಗಂಡ ಹೆಂಡತಿ ಆಂಧ್ರಪ್ರದೇಶದಿಂದ ಬದುಕು ಕಟ್ಟಿಕೊಳ್ಳಲು ಚಿಕ್ಕಬಳ್ಳಾಪುರದ ಚಿಂತಾಮಣಿಗೆ ಬಂದವರು. ಹೀಗೆ ಬಂದವರಿಗೆ ಪರಿಚಯವಾದವನು ಪಕ್ಕದ ಮನೆ ಹುಡುಗ ಮಾರೀಶ. ಗಂಡ ಹೆಂಡತಿಗೆ ಸ್ನೇಹಿತನ್ನಾಗಿದ್ದ ಈ ಮಾರೀಶನಿಗೇ ಆತ ಚಾಕು ಹಾಕಿದ್ದ. ಅಷ್ಟೇ ಅಲ್ಲ ಕತ್ತು ಕೊಯ್ದು ರಕ್ತ ಹೀರಿದ್ದಾನೆ.

ಇದನ್ನೂ ವೀಕ್ಷಿಸಿ: ಚೀನಾ ಮಸಲತ್ತು.. ಪಾಕ್ ದೌಲತ್ತು.. ಯಾರಿಗೆ ವಿಪತ್ತು..?: ಭಾರತಕ್ಕೆ ನಾಲ್ಕು ದಿಕ್ಕಿನಿಂದ ಎದುರಾಗಿದೆ ಕಂಟಕ!

Related Video