ಪೆನ್‌ಡ್ರೈವ್‌ಗಿಂತ ಬಿಗಿಯಾಯ್ತು ಕಿಡ್ನ್ಯಾಪ್ ಕೇಸ್..! ರೇವಣ್ಣಗೆ ಮತ್ತಷ್ಟು ಕಂಟಕವಾಗುತ್ತಾ ಸಂತ್ರಸ್ತೆ ಹೇಳಿಕೆ..?

ಸಂತ್ರಸ್ತೆ ಕಿಡ್ಯ್ನಾಪ್ ಕೇಸ್‌ನಲ್ಲಿ ಎಚ್.ಡಿ ರೇವಣ್ಣ ಅರೆಸ್ಟ್
ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಬಂಧನ
ಎಸ್ಐಟಿ ಪೊಲೀಸರಿಂದ ಶುರುವಾಯ್ತು ರೇವಣ್ಣ ಗ್ರಿಲ್

Share this Video
  • FB
  • Linkdin
  • Whatsapp

ತಮ್ಮ ಮಗನ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಮೊದಲ ಆರೋಪಿಯಾಗಿದ್ದ ರೇವಣ್ಣ(HD Revanna) ಈಗ ಮತ್ತೊಂದು ಕೇಸ್ನಲ್ಲಿ ಅರೆಸ್ಟ್(Arrest) ಆಗಿದ್ದಾರೆ. ಆದ್ರೆ ಕೇಸ್ ದಾಖಲಾಗಿ 7 ದಿನಗಳಾದ್ರೂ ರೇವಣ್ಣ ಆ್ಯಂಡ್ ಸನ್ಸ್‌ಗೆ ನೋಟೀಸ್‌ಗಳನ್ನ ಬಿಟ್ಟರೆ ಬೇರೆ ಯಾವ ಡೆವೆಲಪ್‌ಮೆಂಟ್ ಕೂಡ ಆಗಿರಲಿಲ್ಲ. ಆದ್ರೆ ನಿನ್ನೆ ಅಪ್ಪ ಅರೆಸ್ಟ್ ಆಗಿದ್ದು, ಮಗ ಯಾವಾಗ ಅನ್ನೋ ಪ್ರಶ್ನೆ ಎದ್ದಿದೆ. ಹಾಗಾದ್ರೆ ರೇವಣ್ಣ ಮತ್ತು ಪ್ರಜ್ವಲ್(Prajwal Revanna) ವಿರುದ್ಧದ ಪ್ರಕರಣಗಳ ತನಿಖೆ ಎಲ್ಲಿಗೆ ಬಂತು. ಒಟ್ಟಿನಲ್ಲಿ 7 ದಿನಗಳ ಕಾಲ ಹೈಡ್ರಾಮವೇ ನಡೆದುಬಿಡ್ತು. ಇನ್ನೂ ನಿನ್ನೆ ಇಡೀ ಈ ಬೆಳವಣಿಗೆಗಳಾದ್ರೆ ರಾಜಕಾರಣಗಳ ಟಾಕ್ ವಾರ್ ಮುಂದುವರೆದಿತ್ತು. ಅಪ್ಪನ ಬಂಧನವಾಯ್ತು. ಈಗ ಮಗನ ಸರದಿ ಆತ ಕೂಡ ಇಂದು ಬೆಂಗಳೂರಿಗೆ ಬಂದು ಶರಣಾಗ್ತಾರೆ ಅಂತ ಹೇಳಲಾಗ್ತಿದೆ. ಒಟ್ಟಿನಲ್ಲಿ ಪ್ರಜ್ವಲ್‌ ರೇವಣ್ಣ ಕಾಮಪುರಾಣಕ್ಕೆ ಈಗ ಒಂದು ಟರ್ನಿಂಗ್ ಪಾಯಿಂಟ್ ಸಿಗ್ತಿದೆ. ಈಗ ಅಪ್ಪನ ಬಂಧನವಾಗಿದ್ದು ಅವರು ವಿಚಾರಣೆಯಲ್ಲಿ ಏನೇನು ಹೇಳ್ತಾರೆ ಕಾದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ: ರಕ್ತ ಬಸಿದು ಪಕ್ಷ ಕಟ್ಟಿದ್ದರು ದಣಿವರಿಯದ ದೇವೇಗೌಡರು! ಅಜ್ಜ ಕಟ್ಟಿದ ಪಕ್ಷಕ್ಕೆ ಕಂಟಕ ತಂದಿಟ್ಟನಾ ಮೊಮ್ಮಗ..?

Related Video