Ayodhya Ram Mandir : ಏನಿದು “ಕ್ಷತ್ರಿಯ” ಶಪಥ..? ಭೀಷಣ ಪ್ರತಿಜ್ಞೆ ಈಡೇರಿದ್ದು ಹೇಗೆ..?
500 ವರ್ಷಗಳಿಂದ ಪೇಟ ತೊಟ್ಟಿಲ್ಲ.. ಚರ್ಮದ ಚಪ್ಪಲಿ ಧರಿಸಿಲ್ಲ..!
ರಾಮಲಲ್ಲಾ ಪ್ರತಿಷ್ಠಾಪನೆಯೊಂದಿಗೆ ಈಡೇರಿತು 500 ವರ್ಷಗಳ ಪ್ರತಿಜ್ಞೆ..!
500 ವರ್ಷಗಳ ಹಿಂದೆ ಛಿದ್ರವಾಗಿತ್ತು ಮಂದಿರ..ತಲೆ ಎತ್ತಿತ್ತು ಮಸೀದಿ..!
ಶ್ರೀರಾಮನ ಮಹಿಮೆ ಅಯೋಧ್ಯೆಯಲ್ಲಿ(Ayodhya) ಎದ್ದು ನಿಂತಿರೋ ಭವ್ಯ ಮಂದಿರಕ್ಕಷ್ಟೇ(Ram Mandir) ಸೀಮಿತವಲ್ಲ. ಅದ್ರ ಹಿಂದೆ ತ್ಯಾಗ, ಬಲಿದಾನ, ರಕ್ತ ಸಂಘರ್ಷಗಳ ಕಥೆಯಿದೆ. ಆ ಕಥೆಗಳ ಜೊತೆ ಬೆಸೆದುಕೊಂಡಿರೋ ಭೀಷಣ ಪ್ರತಿಜ್ಞೆ, ಶಪಥಗಳ ಕಥೆಯಿಂತೂ ರಣ ರೋಮಾಂಚಕ. ಪ್ರತಿಜ್ಞೆ, ಶಪಥ ಅಂದಾಕ್ಷಣ ಮಹಾಭಾರತದ ಮಹಾಮಹಿಮ ಭೀಷ್ಮಾಚಾರ್ಯರು ನೆನಪಾಗ್ತಾರೆ. ತಂದೆ ಶಂತನು ಚಕ್ರವರ್ತಿಗೆ ಕೊಟ್ಟ ಒಂದೇ ಒಂದು ವಚನಕ್ಕೆ ಬದ್ಧನಾಗಿ ಜೀವನದಲ್ಲಿ ಮದುವೆಯನ್ನೇ ಆಗದಿರುವ ಪ್ರತಿಜ್ಞೆ ಮಾಡಿದ ದೇವವ್ರತ ಭೀಷ್ಮ, ಜೀವನ ಪರ್ಯಂತ ಹಸ್ತಿನಾವತಿಯ ಸಿಂಹಾಸನದ ರಕ್ಷಣೆಗೆ ಭೈರವನಂತೆ ನಿಂತು ಬಿಡ್ತಾರೆ. ಸಿಂಹಾಸನದ ರಕ್ಷಣೆಯಲ್ಲಿ ಅದೆಷ್ಟೇ ಸಂಘರ್ಷಗಳು ಎದುರಾದ್ರೂ, ಮಹಾವೀರ ಭೀಷ್ಮ ದೇಹದಲ್ಲಿ ಕೊನೆ ಉಸಿರಿರೋವರೆಗೂ ಪ್ರತಿಜ್ಞೆಯನ್ನು ಮರೆಯೋದಿಲ್ಲ. ಇದೇ ಕಾರಣಕ್ಕೆ ಅದನ್ನು ಭೀಷ್ಮ ಪ್ರತಿಜ್ಞೆ, ಭೀಷಣ ಶಪಥ ಅಂತ ಕರೆಯಲಾಗತ್ತೆ. ರಾಮಮಂದಿರ(Ram Mandir) ರಾಮೋತ್ಸವ ಸಂಭ್ರಮದಲ್ಲಿ ಮಹಾಭಾರತದ ಭೀಷ್ಮ ಪ್ರತಿಜ್ಞೆಯ ಮಾತೇಕೆ ಅಂತ ನೀವು ಕೇಳ್ಬಹ್ದು. ಈ ಭೀಷ್ಮ ಪ್ರತಿಜ್ಞೆ(Bhishma Pratigna) ಯನ್ನು ಈಗ ನೆನಪಿಸಿಕೊಳ್ಳೋದಕ್ಕೆ ಕಾರಣವಿದೆ.
ಇದನ್ನೂ ವೀಕ್ಷಿಸಿ: Ram Mandir: ಏನು ಹೇಳುತ್ತಿದೆ ತುಳಸಿದಾಸರ ಅಯೋಧ್ಯೆಯ ಇತಿಹಾಸ? ಅದೊಂದು ವರದಿಗಾಗಿ ವರ್ಷಗಟ್ಟಲೆ ಕಾದಿತ್ತೇಕೆ ಸರ್ಕಾರ..?