ನಡುರಸ್ತೆಯಲ್ಲೇ ಹೆಣವಾದ ಫೇಮಸ್ ಟೈಲರ್‌ : ಶಿಷ್ಯನೇ ಅವನ ಕಥೆ ಮುಗಿಸಿದ್ಯಾಕೆ ?

ಅನ್ನ ಹಾಕಿದವನನ್ನೇ ಅವನು ಮುಗಿಸಿದ್ದೇಕೆ..?
ಸಂಬಳ ಜಾಸ್ತಿ ಕೇಳಿದಕ್ಕೆ ಕೆಲಸದಿಂದಲೇ ತೆಗೆದ..!
ಕೆಲಸದಿಂದ ತೆಗೆದಿದಕ್ಕೆ ಕೊಲೆ ಮಾಡಿಬಿಟ್ಟ..!

Share this Video
  • FB
  • Linkdin
  • Whatsapp

ಅವನು ಆ ನಗರದ ಪ್ರತಿಷ್ಠಿತ ಟೇಲರ್.. ಸೆಲಬ್ರಿಟಿಗಳು, ಪೊಲೀಸರಿಂದ ಹಿಡಿದು ಎಲ್ಲರೂ ಅವನ ಬಳಿ ಬಟ್ಟೆ ಹೊಲಿಸಿಕೊಳ್ತಿದ್ರು. ಹೀಗೆ ಫುಲ್ ಫೇಮಸ್ ಆಗಿದ್ದ ಆ ಟೇಲರ್(Tailor) ಆವತ್ತೊಂದು ದಿನ ಹಾಡಹಗಲಲ್ಲೇ ನಡುರಸ್ತೆಯಲ್ಲಿ ಹೆಣವಾಗಿ ಹೋಗಿದ್ದ. ಅವನನ್ನ ಹಂತಕರು ಕಲ್ಲು ಎತ್ತಿಹಾಕಿ ಕೊಂದುಬಿಟ್ಟಿದ್ರು. ಆದ್ರೆ ಇದೇ ಕೊಲೆ(Murder) ಕೇಸ್‌ನ ಬೆನ್ನುಬಿದ್ದ ಪೊಲೀಸರಿಗೆ ಕೊಲೆಗಾರನನ್ನ ಕಂಡುಹಿಡಿಯೋದು ಸುಲಭದ ಕೆಲಸವಾಗಿರಲಿಲ್ಲ. ಕಾರಣ ಆ ಟೇಲರ್ ಅಷ್ಟು ಫೇಮಸ್ ಆಗಿದ್ರೂ ಯಾರೊಂದಿಗೂ ಒರಟಾಗಿ ಮಾತನ್ನಾಡಿವನಲ್ಲ. ಶತೃಗಳಂತೂ ಇಲ್ವೇ ಇಲ್ಲ. ನಿಜಕ್ಕೂ ಈಕೆಯ ಮಾತು ಕೇಳಿದ್ರೆ ಬೇಸರವಾಗುತ್ತೆ. ಇಷ್ಟು ಚಿಕ್ಕ ವಯಸಿನಲ್ಲೇ ಆತನಿಗೆ ಬಂದ ಸಾವು ಹೆಂಡತಿ ಮಕ್ಕಳನ್ನ ದಿಕ್ಕಿಲ್ಲದಂತೆ ಮಾಡಿದೆ. ಆದ್ರೆ ಅಷ್ಟು ಒಳ್ಳೆಯ ವ್ಯಕ್ತಿಯಾಗಿದ್ದ ಸುರೇಶ್‌ನನ್ನ ಕೊಂದಿದ್ಯಾರು ಅನ್ನೋದು ಮಾತ್ರ ಅಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರು(Police) ಕೊಲೆಯಾದ 24 ಗಂಟೆಗಳಲ್ಲೇ ಕೊಲೆಗಾರನನ್ನ ಪತ್ತೆ ಹಚ್ಚಿದ್ರು. ಅಷ್ಟೇ ಅಲ್ಲ ಅರೆಸ್ಟ್ ಕೂಡ ಮಾಡಿಬಿಟ್ಟಿದ್ರು. ಊರಲ್ಲೆಲ್ಲಾ ಒಳ್ಳೆಯವನ್ನಹಾಗಿದ್ರೂ ತನ್ನ ಅಂಗಡಿಯಲ್ಲಿ ಕೆಲಸ ಮಾಡುವವರ ಪಾಲಿಗೆ ಮಾತ್ರ ಆತ ವಿಲನ್ ಆಗಿದ್ದ. 12 ವರ್ಷದಿಂದ ಅವನ ಬಳಿ ಕೆಲಸ ಮಾಡ್ತಿದ್ದವನು ಸಂಬಳ ಜಾಸ್ತಿ ಮಾಡಿ ಅಂತ ಕೇಳಿದ ಅಷ್ಟೇ. ಅಷ್ಟಕ್ಕೇ ಕೆಲಸದಿಂದ ತೆಗದು ಹಾಕಿದಲ್ಲದೇ ಸಂಬಳವನ್ನೂ ಕೊಡಲಿಲ್ಲ. ಫೇಮಸ್ ಅಂಗಡಿಯಲ್ಲಿ ಕೆಲಸದಿಂದ ತೆಗೆದು ಹಾಕಿದ್ರಿಂದ ಬೇರೆ ಎಲ್ಲೂ ಕೆಲಸ ಸಿಗದಂತೆ ಆಗಿಬಿಡ್ತು. ಇದ್ರಿಂದ ಕುಪಿತನಾದ ಆತ ಅನ್ನ ಹಾಕಿದ್ದ ಧಣಿಯನ್ನೇ ಕೊಲ್ಲೋ ನಿರ್ಧಾರ ಮಾಡಿಬಿಟ್ಟ. ಸಂಬಳ ಜಾಸ್ತಿ ಮಾಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಅನ್ನ ಹಾಕಿದವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿಕೊಂದಿದ್ದಾನೆ . 

ಇದನ್ನೂ ವೀಕ್ಷಿಸಿ: ಅಕ್ರಮ ಸಂಬಂಧ : ಪತ್ನಿ-ಮಕ್ಕಳನ್ನ ತವರಿಗಟ್ಟಿ, ಮತ್ತೊಬ್ಬಳ ಜತೆ ಚೆಲ್ಲಾಟ..!

Related Video