ದಾಂಪತ್ಯ ಕಲಹಕ್ಕೆ ಎರಡು ಜೀವಗಳು ಬಲಿ: ಹೆಂಡತಿ ಕರೆಯಲು ಬಂದವ ಮಾವನನ್ನೇ ಕೊಂದ !

ಗಂಡ, ಹೆಂಡತಿಯಿಂದ ಶುರುವಾದ ಜಗಳದಲ್ಲಿ ಎರಡು ಹೆಣ ಬಿದ್ದಿವೆ. ಒಂದು ಕೊಲೆ, ಇನ್ನೊಂದು ಆತ್ಮಹತ್ಯೆ. ಇಬ್ಬರ ಬಲಿ ಪಡಿಯುವ ಮಟ್ಟಿಗೆ ನಡೆದ ಆ ಜಗಳವಾದ್ರೂ ಏನು ಗೊತ್ತಾ..? 
 

Share this Video
  • FB
  • Linkdin
  • Whatsapp

ಹೊಲದಲ್ಲಿ ರಕ್ತದ ಮಡುವಿನಲ್ಲಿ ಬಿದದ್ದಿರುವ ಶವ.ಮತ್ತೊಂದೆಡೆ ಶವದ ಮುಂದೆ ಮಕ್ಕಳ ಆಕ್ರಂದನ. ಈ ದೃಶ್ಯ ಕಂಡು ಬಂದಿದ್ದು ಕಲಬುರಗಿ(Kalaburagi) ಚಿಂಚೋಳಿಯ ಚಿಂತಾಪಲ್ಲಿ ಗ್ರಾಮದಲ್ಲಿ. ಹಬ್ಬಕ್ಕೆ ಅಂತಾ ಮಾವನ ಮನೆಗೆ ಬಂದ ಅಳಿಯ ಮಾವನನ್ನೇ ಕೊಂದು(Murder) ಹಾಕಿದ್ದಾನೆ. ಸೊಲ್ಲಾಪುರ ಮೂಲದ ರಾಜು ಎಂಬಾತನಿಗೆ ಈರಪ್ಪ ಎಂಬಾತ ತನ್ನ ಮಗಳನ್ನ ಮದುವೆ(Marriage) ಮಾಡಿಕೊಟ್ಟಿದ್ದ. ಆದ್ರೆ ಎರಡೇ ತಿಂಗಳಲ್ಲಿ ಗಂಡ ರಾಜು ಜೊತೆ ಜಗಳವಾಡಿಕೊಂಡ ಹೆಂಡತಿ ವೈಶಾಲಿ ತವರು ಮನೆ ಸೇರಿದ್ಳು. ಹೀಗೆ ತವರಿಗೆ ಬಂದ ಹೆಂಡತಿಯನ್ನ ಕರೆಯಲು ಅಂತಾ ರಾಜು ಮಾವನ ಮನೆಗೆ ಬಂದಿದ್ದ. ದಸರಾ ಹಬ್ಬ ಮುಗಿಯವರೆಗೂ ಇಲ್ಲೇ ಇದ್ದ ರಾಜು ಹೆಂಡತಿಯನ್ನ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ.ಆದ್ರೆ ವೈಶಾಲಿ ಮಾತ್ರ ಬರೋಲ್ಲ ಅಂತಾ ಹಠ ಹಿಡಿದಿದ್ದಾಳೆ ಈ ವೇಳೆ ರೊಚ್ಚುಗೆದ್ದ ರಾಜು ಆಕೆಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಇದಾದ ಬಳಿಕ ಹೊಲದಲ್ಲಿ ಕೆಲಸ ಮಾಡ್ತಿದ್ದ ಮಾವ ಈರಪ್ಪನ ಬಳಿ ರಾಜು ಹೋಗಿದ್ದಾನೆ. ಆದ್ರೆ ಅಲ್ಲಿ ಏನಾಯ್ತೋ ಗೊತ್ತಿಲ್ಲ ಏಕಾಏಕಿ ಕಲ್ಲು ಎತ್ತಿಹಾಕಿ ಮಾವ ಈರಪ್ಪನ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲ ರಕ್ತಸಿಕ್ತ ಬಟ್ಟೆಯಲ್ಲಿ ಮನೆಗೆ ಆಗಮಿಸಿದ್ದಾನೆ. ಇದನ್ನು ನೋಡಿದ ಹೆಂಡತಿ ವೈಶಾಲಿ ಚೀರಿಕೊಂಡು ಹೊಲದತ್ತ ಓಡಿದ್ದಾಳೆ. ಇಷ್ಟೆಲ್ಲ ಘಟನೆ ಬಳಿಕ ಭಯವಾಯ್ತೋ ಏನೋ ಮಾವನನ್ನು ಕೊಂದ ಅಳಿಯ ರಾಜು ಕೂಡ ಮನೆಯ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬ ಹತ್ತಿ ಕರೆಂಟ್ ಹೊಡೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ವೀಕ್ಷಿಸಿ:  ಟಗರು ಕಾಳಗ ಏಕಾಏಕಿ ರದ್ದುಗೊಳಿಸಿದ ಪೊಲೀಸರು: ಗ್ರಾಮಸ್ಥರ ಮೇಲೆ ಕೇಸ್‌ ಹಾಕಿಸಿದ ಶಾಸಕ

Related Video