ಟಗರು ಕಾಳಗ ಏಕಾಏಕಿ ರದ್ದುಗೊಳಿಸಿದ ಪೊಲೀಸರು: ಗ್ರಾಮಸ್ಥರ ಮೇಲೆ ಕೇಸ್‌ ಹಾಕಿಸಿದ ಶಾಸಕ

ಜನರೇ ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಯೊಬ್ಬರು ಮನೆ ಮುಂದೆ ಬಂದು ಗಲಾಟೆ ಮಾಡಿದ್ರು ಅನ್ನೋ ಕಾರಣಕ್ಕೆ ಗ್ರಾಮಸ್ಥರ ಮೇಲೆ ಕೇಸ್ ಹಾಕಿಸಿದ್ದಾರೆ. 
 

First Published Nov 2, 2023, 9:45 AM IST | Last Updated Nov 2, 2023, 9:45 AM IST

ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಚಿತ್ರದುರ್ಗದ ಹಳೇ ಕಲ್ಲಹಳ್ಳಿ ಗ್ರಾಮದಲ್ಲಿ ಟಗರು ಕಾಳಗ(Tagaru kalaga)ನಡೆಸುವ ನಿಟ್ಟಿನಲ್ಲಿ ಚಿತ್ರದುರ್ಗ(Chitradurga) ಶಾಸಕ ವಿರೇಂದ್ರ(MLA Virendra) ಅವರ ಬಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅದಕ್ಕೆ ಸೂಕ್ತವಾಗಿಯೇ ಸ್ಪಂದಿಸಿರೋ ಶಾಸಕ ನೀವು ನಡೆಸಿ ನಾನಿದ್ದೀನಿ ಎಂದು ಭರವಸೆ ನೀಡಿದ್ದಾರೆ. ಆದ್ರೆ ಕಾಳಗ ನಡೆಸಲು ಜನರು ಎಲ್ಲಾ ಸಜ್ಜು ಮಾಡಿಕೊಂಡಿದ್ರು. ಆದ್ರೆ ಏಕಾಏಕಿ ಪೊಲೀಸರು ಆಗಮಿಸಿ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಡರಾತ್ರಿಯೇ ಶಾಸಕ ವಿರೇಂದ್ರ ನಿವಾಸ ಮುಂದೆ ಬಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ವೇಳೆ ಕೆಲ ಪುಂಡರು ಹಾಗೂ ಶಾಸಕರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಂದು ಹೇಳುವ ವ್ಯಕ್ತಿಯ ಮಧ್ಯೆ ಮಾತಿನ ಚಕಮಕಿಯಾಗಿದೆ. ಇದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡ ಶಾಸಕ ವಿರೇಂದ್ರ, ಸಿಬ್ಬಂದಿ ತಿಪ್ಪೇಸ್ವಾಮಿ ಕಡೆಯಿಂದ ಬಚ್ವಬೋರನಹಟ್ಟಿ, ಕಲ್ಲೇನಹಳ್ಳಿ ಗ್ರಾಮದ ಸುಮಾರು 9 ಮಂದಿಯ ಮೇಲೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದ್ರಲ್ಲಿ ಮೂವರು ಗ್ರಾಮ ಪಂಚಾಯತ್ ಸದಸ್ಯರು ಕೂಡ ಇದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯತ್ ಸದಸ್ಯರು ನಾವು  ಏರ್ಪಡಿಸಿದ್ದ ಅದ್ದೂರಿ ಕಾರ್ಯಕ್ರಮ ರದ್ದಾಯ್ತು ಎನ್ನುವ ನೋವು ತೋಡಿಕೊಳ್ಳಲು ಹೋಗಿದ್ದೆವು. ಶಾಸಕರಿಗೆ ಅದ್ದೂರಿ ಸನ್ಮಾನ ಮಾಡಲು ಎಲ್ಲಾ ಯುವಕರು ಪ್ಲಾನ್ ಮಾಡಿಕೊಂಡಿದ್ರು. ಆದ್ರೆ ಈ ರೀತಿ ಆಗಿರೋದಕ್ಕೆ ತುಂಬಾ ಬೇಸರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ಪ್ರಕರಣದ ಬಗ್ಗೆ ಶಾಸಕರನ್ನೇ‌ ವಿಚಾರಿಸಿದ್ರೆ, ಮತದಾರರು ಬಂದು ಕೇಳೋದ್ರಲ್ಲಿ ತಪ್ಪಿಲ್ಲ, ಆದ್ರೆ ಕೇಳುವ ರೀತಿಯಲ್ಲಿ ತಪ್ಪಿದೆ. ರಾತ್ರ ಬಂದು ಮನೆ ಗೇಟ್ಗೆ ಕಲ್ಲು ಹೊಡೆಯುವುದು, ಸಿಬ್ಬಂದಿ ಹಲ್ಲೆ ಮಾಡುವ ಕೆಲಸ ಮಾಡಿದ್ದಾರೆ. ರಾತ್ರಿ 12 ಗಂಟೆ ಸುಮಾರಿ 150 ರಿಂದ 200 ಜನ ಮನೆ ಮುಂದೆ ಬಂದು ಮಾತನಾಡಿಸಿದ್ರೆ ಮಾತಾಡೋಕೆ ಆಗುತ್ತಾ. ತಪ್ಪಿತಸ್ಥರಿಗೆ ಕಾನೂನು ರೀತಿ ಕ್ರಮ ಆಗಿದೆ ಅಷ್ಟೆ ಎನ್ನುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದಕ್ಕೂ ಮುನ್ನ ಜನರಿಗೆ ಸೆಲ್ಯೂಟ್ ಹೊಡೆಯುವ ಜನಪ್ರತಿನಿಧಿಗಳು ಗೆದ್ದ ಬಳಿಕವೂ ಜನರ ಮೇಲೆ ಅನುಕಂಪ ಇರಬೇಕಲ್ವಾ.? ಜನ ತಾಳ್ಮೆ ಕಳೆದುಕೊಂಡರು ಶಾಸಕರಾದ್ವು ತಿಳಿ ಹೇಳಬೇಕಿತ್ತು. ಅದರ ಬದಲಾಗಿ ಕೇಸ್ ದಾಖಲಿಸೋದು ಎಷ್ಟು ಸರಿ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಇದನ್ನೂ ವೀಕ್ಷಿಸಿ:  Today Horoscope: ಶುಕ್ರ ಗ್ರಹ ಇಂದು ಕನ್ಯಾ ರಾಶಿಗೆ ಪ್ರವೇಶ..ನಿಮ್ಮ ರಾಶಿಗಿದೆಯೇ ಶುಭ ಫಲ ?

Video Top Stories