Asianet Suvarna News Asianet Suvarna News

ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯವರಿಗೆ ಸಿಕ್ಕ ಪ್ರಬಲ ಅಸ್ತ್ರಗಳೆಷ್ಟು? ಮುಸ್ಲಿಮರ ತುಷ್ಟೀಕರಣ ಆರೋಪಕ್ಕೆ ಸಿಕ್ಕ ಸಾಕ್ಷಿಗಳೆಷ್ಟು?

ಏಪ್ರಿಲ್ 17 ರಂದು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ!
ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೋರೇಟರ್ ಮಗಳ ಭೀಕರ ಹತ್ಯೆ..!
ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿ ಆಕ್ರೋಶ..!

ಎಲೆಕ್ಷನ್ ಹೊತ್ತಲ್ಲಿ ಕರ್ನಾಟಕದಲ್ಲಿ ಏನ್ ಆಗ್ತಿದೆ..? ಈ ಪ್ರಶ್ನೆಯನ್ನ ಇಷ್ಟುದಿನ ಪ್ರತಿಪಕ್ಷಗಳು ಕೇಳ್ತಿದ್ವು. ಆದ್ರೆ ನಡೀತಿರೋ ಘಟನೆಗಳನ್ನ ನೋಡ್ತಿರುವ ಜನರೂ ಸಹಾ ಇದೇ ಪ್ರಶ್ನೆಯನ್ನ ಕೇಳ್ತಿದ್ದಾರೆ. ಕಾಂಗ್ರೆಸ್(Congress) ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿ(BJP) ವಾಗ್ದಾಳಿ ನಡೆಸಿದೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಭೀಕರ ಹತ್ಯೆ(Congress corporator daughter murder) ಕೇಸ್ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಪಾಕಿಸ್ತಾನ್ ಜಿಂದಾಬಾದ್.. ರಾಮೇಶ್ವರಂ ಕೆಫೆ ಬಾಂಬ್.. ಹನುಮಾನ್ ಚಾಲಿಸ ಹಾಕಿದ್ದಕ್ಕೆ ಹಲ್ಲೆ, ಜೈ ಶ್ರೀರಾಮ್ ಕೂಗಿದ್ದಕ್ಕೆ ಬೆದರಿಕೆ, ಮತ್ತೀಗ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಭೀಕರ ಮರ್ಡರ್ ನಡೆದಿದೆ. ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಕೊಲೆಗೆ(Neha Hiremath murder) ಹುಬ್ಬಳ್ಳಿ ನಗರ ಬೆಚ್ಚಿ ಬಿದ್ದಿದೆ. ಆರೋಪಿ ಫಯಾಜ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ:  Niranjan Hiremath: ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ

Video Top Stories