ಹಾಫ್‌ರೇಟ್‌ಗೆ ಚಿನ್ನ ನೀಡ್ತೀವಿವೆಂದು ಹಾಕಿದ್ರು ಟೋಪಿ: ವಂಚಕರಿಂದ ಬರೋಬ್ಬರಿ 15 ಲಕ್ಷ ರೂ. ದೋಖಾ !

ಕಡಿಮೆ ರೇಟ್‌ಗೆ ಚಿನ್ನ ಸಿಗುತ್ತೆ ಅಂದ್ರೆ ಯಾರಿಗೆ ತಾನೇ ಆಸೆ ಹುಟ್ಟಲ್ಲ ಹೇಳಿ. ಹೀಗೆ ಚಿನ್ನದ ಆಸೆಗೆ ಬಿದ್ದ ಇಲ್ಲೊಬ್ರು ಬರೋಬ್ಬರಿ 15 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
 

First Published Oct 1, 2023, 11:55 AM IST | Last Updated Oct 1, 2023, 11:55 AM IST

ಫಳಫಳ ಅಂತಾ ಹೊಳೆಯುವ ಬಂಗಾರ ವರ್ಣದ ನಾಣ್ಯಗಳು.. ನೋಡಿದವ್ರಿಗೆ ಇವು ಅಸಲಿ ಚಿನ್ನದ ನಾಣ್ಯಗಳೇ ಅಂತಾ ಅನಿಸದೇ ಇರದು.. ಆದ್ರೆ ಇವೆಲ್ಲ ಪಕ್ಕಾ ನಕಲಿ ಚಿನ್ನದ ನಾಣ್ಯಗಳು. ಇವುಗಳನ್ನ ಅಸಲಿ ಬಂಗಾರದ ನಾಣ್ಯ ಅಂತಾ ಭಾವಿಸಿದ ಮಹಾರಾಷ್ಟ್ರದ(Maharashtra) ವ್ಯಕ್ತಿಯೊಬ್ಬರು ಬರೋಬ್ಬರಿ  15 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವಂಚಕರು ಹೇಳಿದ ನಿಧಿ ಕಥೆ ಕೇಳಿ ಮೋಸಹೋಗಿದ್ದಾರೆ. ವಂಚಕರ ಗ್ಯಾಂಗ್ ಮೊದಲಿಗೆ ನಕಲಿ ಚಿನ್ನದ ನಾಣ್ಯಗಳನ್ನ ತಯಾರಿಸಿದೆ. ಬಳಿಕ ಅದನ್ನ ಮಹಾರಾಷ್ಟ್ರ ಮೂಲದ ಮೋಹನ್ ಎಂಬಾತನಿಗೆ ಮಾರಲು ಪ್ಲಾನ್ ರೂಪಿಸಿದೆ. ಮೋಹನ್ರನ್ನ ಗದಗಕ್ಕೆ(Gadag) ಕರೆಸಿಕೊಂಡ ವಂಚಕರು, ಮನೆ ನಿರ್ಮಾಣದ ವೇಳೆ ನಿಧಿ ಸಿಕ್ಕಿದೆ. ಅರ್ಧ ಕೆಜಿ ಚಿನ್ನವನ್ನ ಜಸ್ಟ್ 15 ಲಕ್ಷಕ್ಕೆ ನೀಡುವುದಾಗಿ ಹೇಳಿದ್ದಾರೆ. ವಂಚಕರ ಮಾತು ನಂಬಿದ ಮೋಹನ್ ಹಣ ನೀಡಿ ಮೋಸ ಹೋಗಿದ್ದಾರೆ. ಮೈಸೂರು(Mysore) ಮೂಲದ ಸಂತೋಷ್ ಮಾನೆ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಮೋಹನ್‌ಗೆ ವಂಚನೆ ಎಸಗಿದ್ದಾನೆ. ಮೋಹನ್ ಹಣ ನೀಡುವ ಮೊದಲು ಒಂದು ನಾಣ್ಯವನ್ನ ಪರಿಶೀಲಿಸಿದ್ದಾರೆ. ಆ ವೇಳೆ ಅಸಲಿ ಚಿನ್ನದ ನಾಣ್ಯ(Gold coin) ನೀಡಿದ್ದಾರೆ. ಬಳಿಕ ಮೋಹನ್ ಗದಗದ ನರಗುಂದಕ್ಕೆ ಆಗಮಿಸಿ ವಂಚಕರಿಗೆ ಹಣ ನೀಡಿದ್ದು, ಮಹರಾಷ್ಟ್ರಕ್ಕೆ ತೆರಳಿ ಉಳಿದ ನಾಣ್ಯಗಳನ್ನ ಪರಿಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಪುರಸಭೆಯಲ್ಲೇ ಡಿ ಗ್ರೂಪ್ ನೌಕರ ವಿಷಸೇವನೆ: ಕಚೇರಿ ಮುಂದೆಯೇ ಅಧಿಕಾರಿಗಳಿಗೆ ಪತ್ನಿ ತರಾಟೆ !

Video Top Stories