ಪುರಸಭೆಯಲ್ಲೇ ಡಿ ಗ್ರೂಪ್ ನೌಕರ ವಿಷಸೇವನೆ: ಕಚೇರಿ ಮುಂದೆಯೇ ಅಧಿಕಾರಿಗಳಿಗೆ ಪತ್ನಿ ತರಾಟೆ !

ಆನೇಕಲ್‌ ಚಂದಾಪುರ ಪುರಸಭೆಯಲ್ಲೇ ಡಿ ಗ್ರೌಪ್ ನೌಕರರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಕಚೇರಿಯೊಳಗೆ ವಿಷಸೇವಿಸಿದ್ದಾನೆ..ಆತ ಸೂಸೈಡ್‌ಗೆ ಟ್ರೈ ಮಾಡಿದ್ಯಾಕೆ..ಇತ್ತ ಕುಟುಂಬಸ್ಥರು ಅಧಿಕಾರಿ ವಿರುದ್ಧ ಕೆಂಡಕಾರಿದ್ದಾರೆ.
 

First Published Oct 1, 2023, 11:39 AM IST | Last Updated Oct 1, 2023, 11:39 AM IST

ಒಂದು ಕಡೆ ಆಫೀಸ್‌ನಲ್ಲೇ ಡಿ ಗ್ರೂಪ್ ನೌಕರರ ವಿಷಕುಡಿಯತ್ತಿರುವ ದೃಶ್ಯ..ಮತ್ತೊಂದೆಡೆ ಅಧಿಕಾರಿಗಳನ್ನೇ ತರಾಟೆ ತೆಗೆದುಕೊಳ್ಳುತ್ತಿರುವ ಕುಟುಂಬಸ್ಥರು..
ಈ ದೃಶ್ಯ ಕಂಡು ಬಂದಿದ್ದು ಆನೇಕಲ್‌ನ ಚಂದಪುರ ಪುರಸಭೆಯಲ್ಲಿ. ಆನೇಕಲ್ ಚಂದಾಪುರ ಪುರಸಭೆ(Chandapur Municipality) ಡಿ ಗ್ರೂಪ್ ನೌಕರನಾಗಿ ವೇಣು ಕೆಲಸ ಮಾಡ್ತಿದ್ದಾನೆ. ಈತನ ಪ್ರಮಾಣಿಕತೆಗೆ ಈಗ ಮುಳುವಾಗಿದ್ದು, ಕಚೇರಿಯಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ(Suicide) ಯತ್ನಿಸಿದ್ದಾನೆ. ಡಿ ಗ್ರೂಪ್‌ ನೌಕರನಾಗಿದ್ದ ವೇಣು ಕೇಸ್ ವರ್ಕರ್ ಆಗಿ ಬಡ್ತಿ ಪಡೆದಿದ್ನಂತೆ. ಆದ್ರೆ ಇತ್ತ ಪುರಸಭೆ ಮುಖ್ಯಾಧಿಕಾರಿಯಾಗಿ ಶ್ವೇತಾ ಬಾಯಿ ಅಧಿಕಾರಕ್ಕೆ ಬಂದ್ಮಲೇ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತಂತೆ.ವೇಣು ತೆಗೆದುಕೊಂಡ ಹೋಗಬೇಕಿದ್ದ ಫೈಲ್‌ಗಳನ್ನ ರವಿ ಎಂಬಾತನೇ ಕೊಂಡೊಯ್ಯುತ್ತಿದ್ನಂತೆ. ಈ ಬಗ್ಗೆ ಶ್ವೇತಾ ಬಾಯಿ ಗಮನಕ್ಕೆ ತಂದ್ರು ಕ್ಯಾರೆ ಅನ್ನದೇ ವೇಣುವನ್ನೇ ಟಾರ್ಗೆಟ್ ಮಾಡಿ ವ್ಯಾಚಶಬ್ಧಗಳಿಂದ ಬೈಯುತ್ತಿದ್ರಂತೆ. ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ವೇಣು ಕಚೇರಿಯಲ್ಲೇ ವಿಷಸೇವಿಸಿದ್ದಾನೆ. ಯಾವಾಗ ತನ್ನ ಗಂಡ ವಿಷಸೇವಿಸಿದ್ದಾನೆ ಅಂತಾ ಗೊತ್ತಾಯ್ತೋ ಇತ್ತ ಕಚೇರಿ ಬಳಿಯೇ ವೇಣು ಪತ್ನಿ ಬಂದು ಶ್ವೇತಾ ಬಾಯಿ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ನನ್ನ ಗಂಡನ ಆತ್ಮಹತ್ಯೆಗೆ ನೀನೆ ಕಾರಣ ಅಂತಾ ತರಾಟೆ ತೆಗೆದು ಕೊಂಡ್ರು. ಪುರಸಭೆ ಕಚೇರಿಯಲ್ಲೇ ಇಷ್ಟೆಲ್ಲಾ ನಡೆದ್ರು ಮುಖ್ಯಧಿಕಾರಿ ಶ್ವೇತಾ ಬಾಯಿ ಮಾತ್ರ ನನಗೆ ಏನು ಗೊತ್ತಿಲ್ಲ. ನಾನು ಕಿರುಕುಳ ಕೊಟ್ಟಿಲ್ಲ ಅಂತಾ ಸಮರ್ಥನೆ ಮಾಡಿಕೊಂಡ್ರೆ..ಇತ್ತ ಸ್ಥಳೀಯರು ಮಾತ್ರ ಭ್ರಷ್ಟಚಾರ ಮಾಡೋಕೆ ಅಂತಾನೆ ರವಿಯನ್ನ ನೇಮಿಸಿಕೊಂಡಿದ್ದಾರೆ ಅಂತಾ ಪುರಸಭೆ ಸದಸ್ಯರೇ ಆರೋಪಿಸಿದ್ದಾರೆ. ವಿಷಸೇವಿಸಿದ ವೇಣುಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ..ಇತ್ತ ನನಗೆ ಏನು ಗೊತ್ತಿಲ್ಲವೆಂದ ಶ್ವೇತಾ ಬಾಯಿ ವೇಣುಬಳಿಯೇ ಹೋಗಿ ನನ್ನವಿರುದ್ಧ ಹೇಳಿಕೆ ನೀಡದಂತೆ ಅಂಗಲಾಚಿದ್ದಳಂತೆ.

ಇದನ್ನೂ ವೀಕ್ಷಿಸಿ:  ವಿಧಾನಸಭೆ ಸೋತವರಿಗೆ ಲೋಕ ಗೆಲ್ಲುವ ಆಸೆ: ನಾನು ಟಿಕೆಟ್ ಆಕಾಂಕ್ಷಿ ಎಂದ ಬಿಜೆಪಿ ಮಾಜಿ ಶಾಸಕ