Asianet Suvarna News Asianet Suvarna News

ಉನ್ನತ ಶಿಕ್ಷಣ ಇಲಾಖೆಯಲ್ಲಿ ಮತ್ತೆ ಅಂಕಪಟ್ಟಿ ಗೊಂದಲ: ಭೌತಿಕ ಅಂಕಪಟ್ಟಿ ನೀಡಲು ವಿವಿಗಳ ಮೀನಾಮೇಷ..!

ಕಾಲೇಜು, ವಿವಿ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್. ಕಷ್ಟಪಟ್ಟು ಓದಿ ಪಾಸಾದ್ರೂ ಸಿಗಲ್ಲ ಒರಿಜಿನಲ್ ಅಂಕಪಟ್ಟಿ. ರಾಜ್ಯದ 18 ಲಕ್ಷ ವಿದ್ಯಾರ್ಥಿಗಳಿಗೆ ಭೌತಿಕವಾಗಿ ಅಂಕಪಟ್ಟಿ ಕೊಡಲು ರಾಜ್ಯ ವಿವಿಗಳು ಮೀನಾಮೇಷ ಎಣಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. 
 

ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಹೊಸ ಸಂಕಷ್ಟ ಶುರುವಾಗಿದೆ. ಪದವಿ ಮುಗಿದ್ರೂ ವಿದ್ಯಾರ್ಥಿಗಳ ಕೈಗೆ ಮಾತ್ರ ಮೂಲ ಅಂಕಪಟ್ಟಿ ಸಿಗುತ್ತಿಲ್ಲ. ಆದ್ರೆ  ರಾಜ್ಯದ 18 ಲಕ್ಷ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿ ನೀಡಲು ವಿಶ್ವವಿದ್ಯಾಲಯಗಳು ಮೀನಾಮೇಷ ಎಣಿಸುತ್ತಿವೆ. ಉನ್ನತ ವ್ಯಾಸಂಗ, ಸರ್ಕಾರಿ ಉದ್ಯೋಗ, ಸ್ಪರ್ಧಾತ್ಮ ಪರೀಕ್ಷೆಗಳಿಗೆ ಪದವಿ ಅಂಕಪಟ್ಟಿ(Marks Card) ಅತ್ಯವಶಕ್ಯವಾಗಿವೆ. ಪದವಿ ಮೂಲ ಅಂಕಪಟ್ಟಿ ಸಿಗದೇ ವಿದ್ಯಾರ್ಥಿಗಳು (Students) ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇನ್ನೂ ರಾಜ್ಯದ 945 ಶಿಕ್ಷಣ ಸಂಸ್ಥೆಗಳಲ್ಲಿ 152 ಸಂಸ್ಥೆಗಳು NAD-ಡಿಜಿ ಲಾಕರ್ ಗೆ ನೋಂದಣಿ ಮಾಡಿಸಿಕೊಂಡಿವೆ. ಉಳಿದ 793 ಶಿಕ್ಷಣ ಸಂಸ್ಥೆಗಳು ನೋಂದಣಿಯೇ ಮಾಡಿಸಿಲ್ಲ. ಡಿಜಿ ಲಾಕರ್ಗೆ ನೋಂದಣಿ ಮಾಡಿಸದ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ವಿದ್ಯಾರ್ಥಿಗಳ ಅಂಕಪಟ್ಟಿ ಪರಿಶೀಲನೆ ಕಷ್ಟವಾಗುತ್ತಿದೆ. ವಿದೇಶದಲ್ಲಿ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇದೀಗ ಅಂಕಪಟ್ಟಿ ಸಂಕಷ್ಟ ಎದುರಾಗಿದೆ. ಅಲ್ಲದೇ ಸಿಇಟಿ, ನೀಟ್ ಪರೀಕ್ಷೆ , ಉದ್ಯೋಗ ಪಡೆಯಲು ಭೌತಿಕ ಅಂಕಪಟ್ಟಿ ಬೇಕೇ ಬೇಕು. ವಿದ್ಯಾರ್ಥಿಗಳ ಸಮಸ್ಯೆ ಮನಗಂಡು ಹೈ ಕೋರ್ಟ್ ಭೌತಿಕ ಅಂಕಪಟ್ಟಿ ಕೊಡುವಂತೆ ವಿಶ್ವವಿದ್ಯಾಲಯಗಳಿಗೆ(Universities) ಖಡಕ್ ಸೂಚನೆ ಕೊಟ್ಟಿದೆ. ಡಿಜಿ ಲಾಕರ್ ಅಂಕಪಟ್ಟಿ ಜೊತೆ ಮೂಲ  ಅಂಕಪಟ್ಟಿ ಕೊಡಲು ವಿಶ್ವವಿದ್ಯಾಲಯಗಳು ನಿರಾಕರಿಸುತ್ತಿವೆ.. ಮೂಲ ಅಂಕಪಟ್ಟಿ ಇದ್ರೆ ಮಾತ್ರ ಕಾಂಪಿಟೇಟಿವ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ಇದರಿಂದ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.. ಕೂಡಲೇ ವಿಶ್ವವಿದ್ಯಾಲಯಗಳು ಮೂಲ ಅಂಕಪಟ್ಟಿ ನೀಡುವ ಮೂಲಕ  ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುತ್ತಾ ಕಾದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ:  ಹೆಂಡತಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ: ಸಾವಿಗೂ ಮುನ್ನ ಸಹೋದರನಿಗೆ ಆಡಿಯೋ ಮೆಸೇಜ್..!