ಪ್ರೇಮಿ ಮನೆ ಮುಂದೆ ನಿಂತು ಚಾಕು ಆರ್ಡರ್ ಮಾಡಿದ್ಲು..! ಮದುವೆಯಾಗೋದಾಗಿ ಹೇಳಿ ಮೋಸ ಮಾಡಿದ್ರಾ ಆ ಕ್ರಿಕೆಟರ್..?

ಮದುವೆಯಾಗ್ತೀನಿ ಅಂತ ಹೇಳಿ ಅಬಾರ್ಷನ್ ಮಾತ್ರೆ ಕೊಟ್ಟನಾ..?
ಕೇಸ್ ಆದ್ಮೇಲೆ ಅವಳ ಗಾಂಜಾ ವಿಡಿಯೋ ವೈರಲ್ ಮಾಡಿದ್ದ..!
ವರ್ಷದ ಹಿಂದೆಯೂ ಕಾರಿಯಪ್ಪ ವಿರುದ್ಧ ದೂರು ದಾಖಲು..!

Share this Video
  • FB
  • Linkdin
  • Whatsapp

ಅವರು ಖ್ಯಾತ ಕ್ರಿಕೆಟರ್. ಮಿಸ್ಟರಿ ಬೌಲರ್ ಅಂತಲೇ ಫೇಮಸ್. KKR ಸೇರಿದಂತೆ. ರಾಜಸ್ಥಾನ, ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ಈತ ಮ್ಯಾಜಿಕ್ ಮಾಡಿದ್ದ. ಆದ್ರೆ ಇಂತಹ ಬೌಲರ್(Bowler) ಮೇಲೆ ಇವತ್ತು ಒಂದು ಕೇಸ್ ದಾಖಲಾಗಿದೆ. ಇನ್ನೂ ಕೇಸ್ ಫೈಲ್ ಮಾಡಿರೋದು ಆತನ ಗರ್ಲ್ ಫ್ರೆಂಡ್. ತನ್ನನ್ನ ಲವ್ ಮಾಡಿ, ಮೋಸ ಮಾಡಿದ್ದಾನೆ ಅನ್ನೋದು ಆಕೆಯ ಆರೋಪ. ಇನ್ನೂ ಆತ ಕೂಡ ಆಕೆಯ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ದಾನೆ. ಒಂದುವರೆ ವರ್ಷ ಯಾವುದೇ ಪ್ರಾಬ್ಲಮ್ ಇಲ್ಲದೇ ಪ್ರಣಯ ಪಕ್ಷಿಗಳಂತೆ ಹಾರಾಡಿದವರೇ ಇವತ್ತು ಒಬ್ಬರ ಮೇಲೆ ಒಬ್ಬರು ಕಂಪ್ಲೆಂಟ್ ಕೊಟ್ಟುಕೊಂಡಿದ್ದಾರೆ. ಇದರ ಬಗ್ಗೆ ಕಾರಿಯಪ್ಪರನ್ನೇ(Cricketer KC Cariappa) ಕೇಳಿದ್ರೆ ಅವರು ಹೇಳಿದ್ದು ಅವಳು ಸರಿ ಇಲ್ಲ ಅಂತ. ಇದೆಲ್ಲಾ ಶುರುವಾಗಿದ್ದು ಕಾರಿಯಪ್ಪ ಐಪಿಎಲ್(IPL) ಆಕ್ಷನ್‌ನಲ್ಲಿ ಅನ್ಸೋಲ್ಡ್ ಆದಮೇಲೆ. ಮೊದಲೆ ಡಿಪ್ರೆಶನ್ನಲ್ಲಿದ್ದ ಕಾರಿಯಪ್ಪ ಮನೆಗೆ ನುಗ್ಗಿದ ಯುವತಿ ಆತನ ಮನೆ ಮುಂದೆ ಹೈಡ್ರಾಮ ಮಾಡಿದ್ಲು. ಸಾಯುವ ಬೆದರಿಕೆ ಹಾಕಿದ್ಲು. ಇದನ್ನ ಸೀರಿಯಸ್ ಆಗಿ ತೆಗೆದುಕೊಂಡ ಕಾರಿಯಪ್ಪ ಸೀದಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ರು. ಯಾವಾಗ ಕಾರಿಯಪ್ಪ ದೂರು ದಾಖಲಿಸಿದ್ರೋ ಯುವತಿ ಕೌಂಟರ್ ದೂರು ದಾಖಲಿಸಿದ್ಲು. ಅಷ್ಟೇ ಅಲ್ಲ ಕಾರಿಯಪ್ಪ ನನ್ನನ್ನ ಬಳಸಿಕೊಂಡು ನಂತರ ಅಬಾರ್ಷನ್ ಮಾಡಿಸಿದ್ದ ಅನ್ನೋ ಗಂಭೀರ ಆರೋಪ ಮಾಡಿದ್ಲು.. ಅದಕ್ಕೆ ಉತ್ತರವಾಗಿ ಕಾರಿಯಪ್ಪ ಆಕೆಯ ಗಾಂಜಾ ವಿಡಿಯೋ ವೈರಲ್ ಮಾಡಿದ್ರು. ಕಾರಿಯಪ್ಪ ಒಂದು ಆರೋಪ ಮಾಡಿದ್ರೆ ಯುವತಿ ಮತ್ತೊಂದಷ್ಟು ಆರೋಪಗಳನ್ನ ಮಾಡ್ತಿದ್ದಾಳೆ. ಆದ್ರೆ ಇಬ್ಬರ ಮಾತಲ್ಲಿ ಯಾವುದು ನಿಜ ಅನ್ನೋದನ್ನ ಪೊಲೀಸರೇ ಹೇಳಬೇಕು.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ:  ಸಿದ್ದು ವಿರುದ್ಧ ಗುಡುಗಿದ ಅನಂತ್ ಕುಮಾರ್ ಹೆಗಡೆ: 7ನೇ ಬಾರಿ ಸಂಸತ್ತು ಪ್ರವೇಶಿಸ್ತಾರಾ ಹಿಂದೂ ಹುಲಿ..?

Related Video