Asianet Suvarna News Asianet Suvarna News

ಸಿದ್ದು ವಿರುದ್ಧ ಗುಡುಗಿದ ಅನಂತ್ ಕುಮಾರ್ ಹೆಗಡೆ: 7ನೇ ಬಾರಿ ಸಂಸತ್ತು ಪ್ರವೇಶಿಸ್ತಾರಾ ಹಿಂದೂ ಹುಲಿ..?

ಹೈಕಮಾಂಡ್‌ನಿಂದ ಅಂತರ ಕಾಯ್ದುಕೊಂಡಿದ್ದ ಹೆಗಡೆ..!
ಚುನಾವಣಾ ರಾಜಕೀಯದಿಂದ ದೂರವಾಗಿದ್ದ ಸಂಸದ..!
ತನ್ನ ಕ್ಷೇತ್ರದ ಮೋದಿ ಸಮಾವೇಶಕ್ಕೇ ಗೈರಾಗಿದ್ದ ಎಂಪಿ..!
 

ಲೋಕಸಭಾ ಚುನಾವಣೆ 2024ರಲ್ಲಿ ನಡೆಯಲಿದೆ. ಮುಹೂರ್ತವಿನ್ನೂ ಫಿಕ್ಸ್ ಆಗದೇ ಇದ್ರೂ ಕೂಡ ಯಾರು ತಮ್ಮ ತಮ್ಮ ಕ್ಷೇತ್ರದಿಂದ ಎಂಪಿ ಸ್ಥಾನಕ್ಕೆ ನಿಲ್ಲಬಹುದು ಅನ್ನೋ ಚರ್ಚೆಗಳು ಈಗಾಗಲೇ ಶುರುವಾಗಿದೆ. ಈ ಚರ್ಚೆ ಉತ್ತರಕನ್ನಡ(Uttara kannada) ಜಿಲ್ಲೆಗೂ ಹೊರತಾಗಿಲ್ಲ. ಅನೇಕ ಆಕಾಂಕ್ಷಿಗಳನ್ನ ಹೊಂದಿರೋ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ(Ananth Kumar Hegde) ಹೆಸರೇ ಜೋರಾಗಿ ಕೇಳ್ತಾ ಇದೆ. ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಯ ಗಲಾಟೆ ಜೋರಾಗಿದೆ. ಮೂರನೇ ಬಾರಿ ಪ್ರಧಾನಿಯಾಗೋಕೆ ಮೋದಿ ಕಿ ಗ್ಯಾರಂಟಿ ಅನ್ನೋ ಉದ್ಘೋಷದ ಮೂಲಕ ಪ್ರಧಾನಿ ನರೇಂದ್ರ ಮೋದಿ(Narendra Modi) ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದು ಕಡೆಯಲ್ಲಿ ಮೋದಿಯ ರಾಜಕೀಯ ಶತ್ರುಗಳು ತಮ್ಮದೇ ಒಂದು ಮಹಾಮೈತ್ರಿಯನ್ನ ಮಾಡಿಕೊಂಡು ಅದಕ್ಕೆ ಐ ಎನ್ ಡಿ ಐ ಎ ಎಂಬ ಹೆಸರನ್ನ ಕೊಟ್ಕೊಂಡು ಮೋದಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಯುದ್ಧ ತಾಲೀಮು ನಡೆಸ್ತಾ ಇದಾರೆ. ವಿಧಾನಸಭಾ ಚುನಾವಣೆ ಮುಗೀತು, ಅದಾದ ಮೇಲೆ  ಪಂಚರಾಜ್ಯ ಎಲೆಕ್ಷನ್ ರಿಸಲ್ಟ್ ಬಂದಾಯ್ತು. ಈಗ ಶುರುವಾಗಿರೋದೇ 2024ರ ಲೋಕಸಭಾ ಚುನಾವಣೆಯ ಕುತೂಹಲಗಳು. ಮೋದಿ ಮತ್ತೆ ಪ್ರಧಾನಿ ಆಗ್ತಾರಾ ಅಥವಾ ದೇಶದ ಜನ ಬದಲಾವಣೆ ಬಯಸಿ ಬೇರೆ ಪಕ್ಷದ ಬೇರೆ ನಾಯಕನಿಗೆ ಹುದ್ದೆ ನೀಡ್ತಾರಾ ಅನ್ನೋ ಚರ್ಚೆ ಕಾವೇರೋದಕ್ಕೂ ಮುನ್ನ ಹೊಸ ಮಾತು ಕತೆ ಶುರುವಾಗಿದೆ. ಅದೇ ನಮ್ಮ ಜಿಲ್ಲೆಯಿಂದ ಸಂಸದ ಸ್ಥಾನಕ್ಕೆ ಅಭ್ಯರ್ಥಿ ಯಾರಾಗಬಹುದು ಅನ್ನೋದು. ಇದು ಎಲ್ಲಾ ಕಡೆಗಳಲ್ಲಿ ಕಂಡು ಬರ್ತಾ ಇರೋ ಕಾಮನ್ ಡಿಬೇಟ್.  ಅವರು ಆಗಬಬಹುದು, ಇವರು ಈ ಪಕ್ಷದಿಂದ ನಿಲ್ಲಬಹುದು ಹೀಗೇ ಜನರ ಮಾತುಕಥೆ ಶುರುವಾಗಿದೆ. ಇದರ ಮಧ್ಯ ಉತ್ತರ ಕನ್ನಡ ಜಿಲ್ಲೆಯಿಂದ ಬ್ರೇಕಿಂಗ್ ನ್ಯೂಸ್ ಬರ್ತಾ ಇದೆ. ಅದೇ ಆರು ಬಾರಿ ಸಂಸದರಾಗಿ ಆಯ್ಕೆ ಆಗಿರುವ, ಚುನಾವಣಾ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿರುವ, ಕಟ್ಟರ್ ಹಿಂದುತ್ವವಾದಿ, ಅನಂತ್ ಕುಮಾರ್ ಹೆಗಡೆ ಅವರು ಲೋಕಸಭೆಗೆ ನಿಲ್ತಾರಾ ಅನ್ನೋದು.

ಇದನ್ನೂ ವೀಕ್ಷಿಸಿ:  ಕಾಶ್ಮೀರದಲ್ಲಿ ಶುರವಾಗಿದೆಯಾ ಮುಸ್ಲಿಂ VS ಮುಸ್ಲಿಂ ಸಂಘರ್ಷ..? ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ..?

Video Top Stories