Asianet Suvarna News Asianet Suvarna News

ಉಡುಪಿಯ ಈ ನಿಗೂಢ ಕಟ್ಟಡ ಹುಟ್ಟಿಸಿದೆ ಆತಂಕ: ಕೆಲವೇ ತಿಂಗಳಲ್ಲಿ ಸಿಕ್ಕಿವೆ 8 ಶವಗಳು !

ಉಡುಪಿಯ ಮಠವೊಂದಕ್ಕೆ ಸೇರಿದ ಕಟ್ಟಡ ನಗರದ ಸೂಸೈಡ್ ಪಾಯಿಂಟ್ ಆಗಿ ಪರಿಣಮಿಸಿದೆ. ಈ ಕುರಿತು ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ. 

ಉಡುಪಿಯ ನಿಗೂಢ ಕಟ್ಟಡವೊಂದು ಜನರಲ್ಲಿ ಆತಂಕ ಹುಟ್ಟಿಸಿದೆ. ಅಲ್ಲದೇ ಪೊಲೀಸ್(police) ಇಲಾಖೆಯ ನಿದ್ದೆಗೆಡಿಸಿದೆ. ಕೆಲವೇ ತಿಂಗಳ ಅವಧಿಯಲ್ಲಿ ಈ ಕಟ್ಟಡದಲ್ಲಿ ಎಂಟು ಹೆಣಗಳು ಪತ್ತೆಯಾಗಿವೆ. ಶಿರೂರು ಮಠಕ್ಕೆ(Shiruru Mutt) ಸೇರಿದ ಕನಕ ಮಾಲ್(Kanaka Mall) ಈಗ ಸೂಸೈಡ್(suicide) ಪಾಯಿಂಟ್ ಆಗಿದೆ. ಕೆಲವೇ ತಿಂಗಳಲ್ಲಿ ಇಲ್ಲಿ ಎಂಟು ಹೆಣಗಳು ಸಿಕ್ಕಿವೆ. ಒಟ್ಟಿನಲ್ಲಿ ಸಾಯಬೇಕೆಂದು ಅಂದುಕೊಂಡವರ ಹಾಟ್‌ಸ್ಪಾಟ್‌ ಆಗಿ ಈ ಅನಾಥ ಕಟ್ಟಡ ಮಾರ್ಪಟ್ಟಿದೆ. ಹೋಮವನ್ನು ಮುಗಿಸಿ ಹೋಗುವಾಗ ಕೊಳೆತ ಶವ ಪತ್ತೆಯಾಗಿದೆ. ಶಿರೂರು ಲಕ್ಷ್ಮೀವರ ತೀರ್ಥರು ಕನಕ ಮಾಲ್ ಕಟ್ಟಡ ಆರಂಭಿಸಿದ್ದರು. ಇದು ಖಾಸಗಿ ಸಹಭಾಗಿತ್ವದೊಂದಿಗೆ ನಿರ್ಮಾಣಗೊಂಡಿತ್ತು. ಕಾನೂನು ಕಾರಣಗಳಿಗೆ ನೆನೆಗುದಿಗೆ ಬಿದ್ದಿದ್ದು, ಲಕ್ಷ್ಮಿ ವರತೀರ್ಥರ ನಿಧನದ ನಂತರ ಮೂಲೆಗುಂಪಾಗಿದೆ. ಎರಡು ಮಠಗಳ ಭಿನ್ನಾಭಿಪ್ರಾಯದಿಂದ ಈ ಕಟ್ಟಡ ಮೂಲೆಗುಂಪಾಗಿದೆ. ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದು, ಭದ್ರತಾ ಆವರಣ ಗೋಡೆ ಇಲ್ಲದೆ ಸಲೀಸಾಗಿ ಒಳನುಗ್ಗಬಹುದಾಗಿದೆ. ಹಾಗಾಗಿ ಇದು ಪೊಲೀಸರಿಗೆ ತಲೆ ನೋವಾಗಿದ್ದು, ಶ್ರೀ ಕೃಷ್ಣ ಮಠದ ಸ್ವಾಗತ ಸ್ಥಳದಲ್ಲೇ ಇದೆ ಬಹು ಮಹಡಿ ಕಟ್ಟಡವಿದೆ.

ಇದನ್ನೂ ವೀಕ್ಷಿಸಿ:  ಅಂಗನವಾಡಿಯ ಸುತ್ತ..ಸಮಸ್ಯೆಗಳ ಹುತ್ತ: ಹೆಗ್ಗಣಗಳ ಬಿಲದಲ್ಲೇ ಮಕ್ಕಳಿಗೆ ಪಾಠ, ಆಟ !

Video Top Stories