Basavalinga Swamiji Death: ಅ.26ಕ್ಕೆ ವಿಡಿಯೋ ರಿಲೀಸ್‌ ಬೆದರಿಕೆ: ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ರಹಸ್ಯ!

Basavalinga Swamiji Suicide: ಸ್ವಾಮೀಜಿ ಹನಿಟ್ರ್ಯಾಪ್‌ ಬೆನ್ನಲ್ಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ

Share this Video
  • FB
  • Linkdin
  • Whatsapp

ರಾಮನಗರ (ಅ. 27): ಅನು​ಮಾ​ನ​ಸ್ಪ​ದ​ವಾಗಿ ಸಾವ​ನ್ನ​ಪ್ಪಿ​ರುವ ಕಂಚುಗಲ್ ಬಂಡೇಮಠದ ಪೀಠಾ​ಧ್ಯ​ಕ್ಷ​ರಾ​ಗಿದ್ದ ಶ್ರೀ ಬಸವಲಿಂಗ ಸ್ವಾಮೀಜಿ (Basavalinga Swamiji Death) ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಸ್ವಾಮೀಜಿ ಹನಿಟ್ರ್ಯಾಪ್‌ (Honey Trap) ಬೆನ್ನಲ್ಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಕಾವಿ ಕೈವಾಡವಿರುವ ಶಂಕೆ ಈಗ ವ್ಯಕ್ತವಾಗಿದೆ. ಇನ್ನು ಇತ್ತ 6 ತಿಂಗಳ ಹಿಂದೆ ವಿಡಿಯೋ ಚಾಟ್‌ ಹೆಸರಲ್ಲೇ ಸ್ವಾಮೀಜಿ ಹೆದರಿಸಿ ಹನಿಟ್ರ್ಯಾಪ್‌ ಗ್ಯಾಂಗ್‌ ಹಣ ವಸೂಲಿ ಮಾಡಿತ್ತು ಎನ್ನಲಾಗಿದೆ. ಖ್ಯಾತ ರಾಜಕಾರಣಿಯ (Politician) ಮಧ್ಯಸ್ಥಿಕೆಯಿಂದಲೇ ಈ ಡೀಲ್‌ ನಡೆದಿತ್ತು ಎನ್ನಲಾಗಿದೆ. ನನ್ನ ತೇಜೋವಧೆಗೆ ಕೆಲವರು ಯತ್ನಿಸುತ್ತಿದ್ದಾರೆ, ಇದರಿಂದ ಮನಸ್ಸಿಗೆ ತೀವ್ರ ನೋವಾಗಿದ್ದು, ಆತ್ಮ​ಹ​ತ್ಯೆಯ ನಿರ್ಧಾರ ಮಾಡಿದ್ದೇನೆ ಎಂದು ಬಸವಲಿಂಗ ಸ್ವಾಮೀಜಿ ಕೋಣೆಯಲ್ಲಿ ಸಿಕ್ಕ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ 

ಸ್ವಾಮೀಜಿಯ ಸಾವಿಗೆ ಕಾರಣವಾಯ್ತಾ ಆ ವಿಡಿಯೋ? ಹನಿಟ್ರ್ಯಾಪ್‌ಗೆ ಒಳಗಾದ್ರಾ ಬಂಡೆ ಮಠದ ಸ್ವಾಮೀಜಿ?

Related Video